ಪಾದರಸ ಅಂದ್ರೆ ಕಾಲಿನ ಜ್ಯೂಸಾ? ಸಿಹಿ ಪ್ರಶ್ನೆಗೆ ಸೀತಾ ಕೊಟ್ಟ ಉತ್ತರಕ್ಕೆ ಭೇಷ್ ಅಂತಿರೋ ಫ್ಯಾನ್ಸ್
ಮಕ್ಕಳು ಪ್ರಶ್ನೆ ಕೇಳಿದಾಗ ಅಪ್ಪ-ಅಮ್ಮ ಹೇಗೆ ವರ್ತಿಸಬೇಕು ಎನ್ನುವುದಕ್ಕೆ ಸೀತಾಳ ಉತ್ತರ ಸಾಕ್ಷಿ ಎನ್ನುತ್ತಿದ್ದಾರೆ ನೆಟ್ಟಿಗರು. ಸಿಹಿ ಕೇಳಿದ್ದೇನು?
ಮಕ್ಕಳು ಎಷ್ಟೋ ಸಂದರ್ಭದಲ್ಲಿ ಏನೇನೋ ಪ್ರಶ್ನೆ ಕೇಳುತ್ತಾರೆ. ಎಲ್ಲ ಸಮಯದಲ್ಲಿಯೂ ಅವರು ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಷ್ಟವೇ ಆಗುತ್ತದೆ. ಆದರೆ ಅವರು ಪ್ರಶ್ನೆಕೇಳುವ ಮಕ್ಕಳಿಗೆ ಉತ್ತರ ಹೇಳಬೇಕಾದದ್ದು ಅಪ್ಪ-ಅಮ್ಮಂದಿರ ಕೆಲಸ ಹೌದು. ಆದರೆ ಇಂದು ಹಲವು ಕಾರಣಕ್ಕೆ ಮಕ್ಕಳು ಜಾಸ್ತಿ ಪ್ರಶ್ನೆ ಕೇಳಿದಾಗಲೆಲ್ಲಾ ಅವರನ್ನು ಬೈಯುವವರೇ ಹೆಚ್ಚಾಗಿದ್ದಾರೆ. ನಿನ್ನೆ ತಲೆಹರಟೆ ಹೆಚ್ಚಾಯ್ತು ಎಂದೂ ಹೇಳುತ್ತಾರೆ. ಇನ್ನು ಹಲವು ಶಾಲೆಗಳಲ್ಲಿಯೋ, ಮಕ್ಕಳು ಕೇಳುವ ಪ್ರಶ್ನೆಗಳಿಗೆ ತಮಗೆ ಉತ್ತರ ಗೊತ್ತಿಲ್ಲ ಎಂದು ಹೇಳುವ ಬದಲು ಹಲವು ಶಿಕ್ಷಕರು ಮಕ್ಕಳನ್ನು ತರಾಟೆಗೆ ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಇವತ್ತಿನ ದಿನಗಳಲ್ಲಿ ಮಕ್ಕಳು ಪ್ರಶ್ನೆ ಕೇಳುವುದೇ ದೊಡ್ಡದು. ಆದರೆ ಅವರಿಗೆ ಬೈಯುವ ಮೂಲಕ ಅವರಲ್ಲಿನ ಪ್ರತಿಭೆಯನ್ನು ಮನೆಯಲ್ಲಿಯೋ ಇಲ್ಲವೇ ಶಾಲೆಯಲ್ಲಿಯೋ ನಡೆದೇ ಇದೆ. ಕೆಲವೇ ಕೆಲವು ಶಿಕ್ಷಕರು ಒಂದು ವೇಳೆ ಉತ್ತರ ಗೊತ್ತಿಲ್ಲದಿದ್ದರೂ, ಅದನ್ನು ಹೇಳಿ ನಾಳೆ ಪ್ರಶ್ನೆಗೆ ಉತ್ತರ ಹೇಳುವೆ ಎನ್ನುವವರೂ ಇದ್ದಾರೆ.
ಇಂಥ ಶಿಕ್ಷಕರಿಂದಲೇ ಮಕ್ಕಳ ಭವಿಷ್ಯ ರೂಪುಗೊಳ್ಳುವುದು ಎಂಬ ಮಾತಿದೆಯಾದರೂ, ಮನೆಯಲ್ಲಿ ತಂದೆ-ತಾಯಿಯೇ ಮೊದಲ ಗುರು ಎನ್ನುವ ಮಾತೂ ಇದೆ. ಆದರೆ ಹೆಚ್ಚಿನ ಅಪ್ಪ-ಅಮ್ಮ ತಮ್ಮ ಕೆಲಸದ ಒತ್ತಡದಿಂದ ಮಕ್ಕಳಿಗೆ ಬೈಯುವುದೇ ಹೆಚ್ಚು. ಆದರೆ ಇದೀಗ ಸೀತಾರಾಮ ಸೀರಿಯಲ್ನಲ್ಲಿ ಸಿಹಿ ಕೇಳಿದ ಪ್ರಶ್ನೆಗೆ ಸೀತಾ ಕೊಟ್ಟ ಉತ್ತರ ನೋಡಿ ಫ್ಯಾನ್ಸ್ ಭೇಷ್ ಎನ್ನುತ್ತಿದ್ದಾರೆ. ಪ್ರತಿ ಅಪ್ಪ- ಅಮ್ಮನಲ್ಲಿಯೂ ಇಂಥ ತಾಳ್ಮೆ ಇರಬೇಕು. ಮಕ್ಕಳು ಪ್ರಶ್ನೆ ಕೇಳಿದಾಗ ಅವರಿಗೆ ಸರಿಯಾದ ಉತ್ತರ ನೀಡಬೇಕು. ಒಂದು ವೇಳೆ ಗೊತ್ತಿಲ್ಲದಿದ್ದರೆ ಅದನ್ನು ಒಪ್ಪಿಕೊಂಡು ಅದನ್ನು ತಿಳಿದುಕೊಂಡು ಹೇಳಬೇಕು ಅನ್ನುತ್ತಿದ್ದಾರೆ.
'ಕೋಟಿ' ಚಿತ್ರದ ನಾಯಕಿ ಮೋಕ್ಷಾ ಒಂದು ವಾರ ಸ್ನಾನ ಮಾಡಲ್ವಂತೆ- ನಟಿ ಕೊಟ್ಟ ಕಾರಣ ಹೀಗಿದೆ ನೋಡಿ...
ಅಷ್ಟಕ್ಕೂ ಸೀತಾರಾಮ ಸೀರಿಯಲ್ನಲ್ಲಿ ಸಿಹಿ ಪಾದರಸದಂತೆ ಚುಟುಪುಟು ಎಂದು ಓಡಾಡಿಕೊಂಡಿರುತ್ತಾಳೆ. ಇದನ್ನೇ ಅವಳಿಗೆ ಯಾರೋ ಹೇಳಿದಾಗ ಪಾದರಸ ಅಂದ್ರೆ ಏನು ಎಂದು ಸಿಹಿ ಅಮ್ಮ ಸೀತಾಳಲ್ಲಿ ಕೇಳುತ್ತಾರೆ. ಅದಕ್ಕೆ ತನ್ನದೇ ಆದ ಅರ್ಥ ಕಲ್ಪಿಸಿ ಗೊತ್ತಾಯ್ತು, ಪಾದ ಅಂದ್ರೆ ಫೀಟ್ (Feet) ರಸ ಅಂದ್ರೆ ಜ್ಯೂಸ್ (Juice). ಹಾಗಿದ್ರೆ ಪಾದರಸ ಅಂದ್ರೆ Feet Juice ಆ? ಎಂದು ಕೇಳುತ್ತಾಳೆ. ಆಗ ಸೀತೆ ಅದು ಹಾಗಲ್ಲ ಎಂದು ಪಾದರಸದ ಅರ್ಥವನ್ನು ಚೆನ್ನಾಗಿ ವಿವರಿಸುತ್ತಾಳೆ.
ಪಾದರಸ ಎಂದರೆ Mercury. ವೈದ್ಯರಲ್ಲಿ ಹೋದಾಗ ಅವರು ಹುಷಾರಿದ್ಯೋ ಇಲ್ವೋ ನೋಡಲು ಥರ್ಮಾಮೀಟರ್ ಇಟ್ಟುಕೊಂಡಿರುತ್ತಾರಲ್ಲ, ಅದರಲ್ಲಿ ನೀರಿನ ಥರ ಅಲ್ಲಿ ಇಲ್ಲಿ ಓಡಾಡುತ್ತಿರುತ್ತಲ್ಲ, ಅದಕ್ಕೇ ಪಾದರಸ ಅನ್ನುವುದು. ಅದು ನಿಂತಲ್ಲಿ ನಿಲ್ಲಲ್ಲ. ಓಡಾಡ್ತಾ ಇರುತ್ತೆ. ಅದಕ್ಕಾಗಿ ಚಿಕ್ಕ ಮಕ್ಕಳು ಚುಟುಪುಟು ಅಂತ ಓಡಾಡ್ತಿದ್ರೆ ಪಾದರಸದ ಹಾಗೆ ಇದ್ದಾಳೆ ಎನ್ನುವುದು ಎನ್ನುತ್ತಾಳೆ. ಇಷ್ಟು ಮಾತ್ರ ನನಗೆ ಹೇಳಲು ಗೊತ್ತು ಎಂದು ಸಿಹಿಗೆ ಸಮಾಧಾನ ಮಾಡಿ ಕಳುಹಿಸುತ್ತಾಳೆ. ಇಷ್ಟಾದರೂ ಪೇಷೆನ್ಸ್ ಪ್ರತಿ ಅಪ್ಪ-ಅಮ್ಮನಲ್ಲಿ ಇರಬೇಕು ಎಂದು ಹೇಳುತ್ತಿದ್ದಾರೆ ನೆಟ್ಟಿಗರು.
ಶಾಲೆಯಲ್ಲಿ ಹೆಚ್ಚು ಮಾತಾಡೋನಿಗೆ ಲೀಡರ್ ಮಾಡಿದಂಗಾಯ್ತು ಶಾರ್ವರಿ ಸ್ಥಿತಿ: ಇಂಗು ತಿಂದ ಮಂಗ ಅಂತಿದ್ದಾರೆ ವೀಕ್ಷಕರು!