ಸೀತಾರಾಮ ಸೀರಿಯಲ್ ಸೀತಾ, ಪ್ರಿಯಾಗೆ ಪ್ರಶ್ನೆಯೊಂದನ್ನು ಕೇಳಿದ್ದಾಳೆ. ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನಿಮಗೆ ಗೊತ್ತಾ?
ಸೀತಾರಾಮ ಸೀರಿಯಲ್ನಲ್ಲಿ ಎರಡು ಹೈಲೈಟ್ ಆಗಿರೋ ಲೇಡಿ ಕ್ಯಾರೆಕ್ಟರ್ಗಳೆಂದರೆ ಸೀತಾ ಮತ್ತು ಪ್ರಿಯಾ. ಸೀತಾ ಅವರ ಅಸಲಿ ಹೆಸರು ವೈಷ್ಣವಿ ಗೌಡ ಹಾಗೂ ಪ್ರಿಯಾ ಅವರ ಅಸಲಿ ಹೆಸರು ಮೇಘನಾ ಶಂಕರಪ್ಪ. ವೈಷ್ಣವಿ ಅವರು ಕೆಲ ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ರೆ, ಮೇಘನಾ ಅವರು ಯೂಟ್ಯೂಬ್ ಚಾನೆಲ್ ಓಪನ್ ಮಾಡಿ ಅದರಲ್ಲಿಯೂ ಸಕತ್ ಬಿಜಿಯಾಗಿದ್ದಾರೆ. ಇದೀಗ ಸೀತಾರಾಮ ತಂಡದ ಬಿಡುವಿನ ವೇಳೆಯಲ್ಲಿ ವೈಷ್ಣವಿ ಅವರು ತಂಡದ ಸದಸ್ಯರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ ಎಂದು. ಇದಕ್ಕೆ ಹಲವರು ಹಲವು ರೀತಿಯ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಉತ್ತರ ಏನು ಗೊತ್ತಾ?
ತುಂಬಾ ಪದಗಳಿವೆ, ಆದ್ರೆ ಮಾತಿಲ್ಲ ಪ್ರಶ್ನೆಗೆ ಉತ್ತರ ಪುಸ್ತಕ ಎಂದು ವೈಷ್ಣವಿ ಕೊನೆಯಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಿಯಾ ಡಿಕ್ಷನರಿ ಎಂದು ಉತ್ತರ ಕೊಟ್ಟಿದ್ದರು. ಇನ್ನು ಕೆಲವರು ಮೌನ, ಅದು, ಇದು ಏನೆಲ್ಲಾ ಹೇಳಿದ್ದರೂ ಅದು ತಪ್ಪು ಎಂದು ವೈಷ್ಣವಿ ಅವರು ಕೊನೆಯಲ್ಲಿ ಪುಸ್ತಕ ಎಂದು ಉತ್ತರ ಕೊಟ್ಟಿದ್ದಾರೆ. ಇನ್ನು ಮೇಘನಾ ಕೂಡ ಇದಾಗಲೇ ಸಾಕಷ್ಟು ರೀಲ್ಸ್ ಮಾಡಿದ್ದಾರೆ. ಪ್ರಶ್ನೋತ್ತರ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮೇಘನಾ ಸೀತಾರಾಮ ತಂಡಕ್ಕೆ ಟೊಮ್ಯಾಟೊಗೆ ಕನ್ನಡದಲ್ಲಿ ಏನು ಹೇಳುತ್ತಾರೆ ಎಂದು ಕೇಳಿ ಎಲ್ಲರ ತಲೆಗೆ ಹುಳ ಬಿಟ್ಟಿದ್ದರು. ಒಬ್ಬೊಬ್ಬರು ಒಂದೊಂದು ಉತ್ತರ ಕೊಟ್ಟರೂ ಎಲ್ಲಾ ಉತ್ತರ ತಪ್ಪು ಎಂದಿದ್ದ ಮೇಘನಾ, ನೀವು ಹೇಳಿದ್ದು ಯಾವುದೂ ಸರಿಯಲ್ಲ, ಟೊಮ್ಯಾಟೊಗೆ ಕನ್ನಡದಲ್ಲಿ ಟೊಮ್ಯಾಟೊ ಎನ್ನುತ್ತಾರೆ ಎಂದಿದ್ದರು. ಇನ್ನು ಕಮೆಂಟಿಗರು ಬೇರೆ ಬೇರೆ ರೀತಿಯ ಹೆಸರುಗಳಲ್ಲಿ ಟೊಮ್ಯಾಟೊ ಹಣ್ಣನ್ನು ಕರೆದಿದ್ದಾರೆ. ಚಪ್ಪದ ಬದನೆ, ಗೂರೆ ಹಣ್ಣು, ಗೂದೆ ಹಣ್ಣು... ಹೀಗೆ ಅನೇಕ ಹೆಸರಿನಲ್ಲಿ ಕರೆದಿದ್ದರು.
ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ
ಹೀಗೆ ಈ ಜೋಡಿ ಆಗಾಗ್ಗೆ ರೀಲ್ಸ್ ಮೂಲಕ ಎಂಜಾಯ್ ಮಾಡುತ್ತಾ ಇರುತ್ತಾರೆ. ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಇನ್ನು ವೈಷ್ಣವಿ ಗೌಡ ಅವರು, ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸನ್ನಿಧಿ ಎಂದೇ ಫೇಮಸ್ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಸದ್ಯ ಸೀತಾರಾಮ ಸೀರಿಯಲ್ನಲ್ಲಿ ಕೊನೆಗೂ ವೀಕ್ಷಕರು ಕಾಯುತ್ತಿದ್ದ ಕ್ಷಣಗಳು ಬಂದೇ ಬಿಟ್ಟಿವೆ. ಸೀತೆ ಮತ್ತು ರಾಮರ ಮದುವೆ ಯಾವುದೇ ವಿಘ್ನ ಇಲ್ಲದೇ ನೆರವೇರಿದೆ.
ಕನ್ನಡದಲ್ಲಿ ಟೊಮ್ಯಾಟೊಗೆ ಏನು ಹೇಳ್ತಾರೆ? ಸೀತಾರಾಮ ಪ್ರಿಯಾಳ ಉತ್ತರಕ್ಕೆ ಫ್ಯಾನ್ಸ್ ಸುಸ್ತು...!

