'ಸೀತಾರಾಮ' ಧಾರಾವಾಹಿಯ ಪ್ರಿಯಾ ಖ್ಯಾತಿಯ ಮೇಘನಾ ಶಂಕರಪ್ಪ, ಫೆಬ್ರವರಿ 9 ರಂದು ಸಾಫ್ಟ್‌ವೇರ್ ಎಂಜಿನಿಯರ್ ಜಯಂತ್‌ರನ್ನು ವರಿಸಲಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಮೂಲಕ ಜೀವನ ಸಂಗಾತಿಯನ್ನು ಆರಿಸಿಕೊಂಡಿರುವ ಮೇಘನಾ, ಮದುವೆಯ ನಂತರವೂ ನಟನೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಮೇಲುಕೋಟೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಲಾಗಿದೆ.

ಸೀತಾರಾಮದ ಪ್ರಿಯಾ ಇದಾಗಲೇ ಸೀರಿಯಲ್‌ನಲ್ಲಿ ತನ್ನ ಮನಮೆಚ್ಚಿದ ಪ್ರಿಯಕರ ಅಶೋಕ್‌ನನ್ನು ಮದುವೆಯಾಗಿದ್ದಾಳೆ. ಆದರೆ ರಿಯಲ್‌ ಲೈಫ್‌ನ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಇದಾಗಲೇ ತಮ್ಮ ಭಾವಿ ಪತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಸಿದ್ದಾರೆ. ವಿಶೇಷ ವಿಡಿಯೋ ಮಾಡುವ ಮೂಲಕ ಭಾವಿ ಪತಿಯ ಮುಖ ಪರಿಚಯವನ್ನು ಮಾಡಿಸಿದ್ದಾರೆ. ಇಂಪಾದ ಹಿನ್ನೆಲೆ ಗಾಯನದ ಮೂಲಕ ರೆಸ್ಟೋರೆಂಟ್‌ ಒಂದರಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿಯೇ ಪತಿಯನ್ನು ತೋರಿಸಿದ್ದಾರೆ ನಟಿ. ಅವರ ಹೆಸರು ಜಯಂತ್‌ ಎನ್ನುವುದನ್ನು ಕ್ಯಾಪ್ಷನ್‌ ಮೂಲಕ ತಿಳಿಸಿದ್ದಾರೆ. One step closer to Forever, Meet Jayanth ಎಂದು ಬರೆದುಕೊಂಡಿದ್ದರು. 

ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ನಟಿ ಇದುವರೆಗೆ ಶೇರ್ ಮಾಡಿರಲಿಲ್ಲ. ಅದಕ್ಕಾಗಿ ಇನ್ನೊಂದು ವಿಡಿಯೋ ನೋಡಲು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆಯನ್ನು ನಟಿ ಈಡೇರಿಸಿದ್ದಾರೆ. ನಿಮಗೆ ಏನಾದರೂ ಪ್ರಶ್ನೆಗಳು ಇದ್ದರೆ ಕೇಳಿ ಎಂದು ನಟಿ ಈ ಹಿಂದೆ ಹೇಳಿದ್ದರು. ಅದರಂತೆ ತಮಗೆ 152 ಪ್ರಶ್ನೆಗಳು ಬಂದಿವೆ ಎಂದು ವಿಡಿಯೋದ ಮೂಲಕ ರಿವೀಲ್​ ಮಾಡಿರುವ ಮೇಘನಾ ಅವರು, ಆ ಪೈಕಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಹಜವಾಗಿ ಹೆಚ್ಚಿನ ಪ್ರಶ್ನೆಗಳು ಅವರ ಮದುವೆ ಮತ್ತು ಹುಡುಗನ ಮೇಲೆ ಇದೆ. ಈಗಿನ ಕಾಲದಲ್ಲಿ ಅರೇಂಜ್ಡ್​ ಮ್ಯಾರೇಜ್​ ಎನ್ನುವುದು ಅಪರೂಪ. ಅದರಲ್ಲಿಯೂ ಸೆಲೆಬ್ರಿಟಿ ಎಂದರೆ ಲವ್​ ಮ್ಯಾರೇಜೇ ಇರುತ್ತದೆ. ಆದರೆ ಮೇಘನಾ ಅವರದ್ದು ಅರೇಂಜ್ಡ್​ ಮ್ಯಾರೇಜ್​. ಈ ಬಗ್ಗೆ ಹೇಳಿರುವ ನಟಿ, ನಿಮಗೆ ಇದಾಗಲೇ ಗೊತ್ತಿರುವಂತೆ ಅವರ ಹೆಸರು ಜಯಂತ್​ ಎಂದು ಹೇಳಿದ್ದಾರೆ. ಅವರು ಸಾಫ್ಟ್​ವೇರ್​ ಎಂಜಿನಿಯರ್​ ಎಂದಿದ್ದಾರೆ. ಮದುವೆ ಡೇಟ್​ ಅನ್ನೂ ರಿವೀಲ್​ ಮಾಡಿರುವ ನಟಿ, ಫೆಬ್ರುವರಿ 9ರಂದು ತಮ್ಮ ಮದುವೆ ಎಂದಿದ್ದಾರೆ. 

ಮದುಮಗಳು ಪ್ರಿಯಾ ಹಾಗೂ ಭಾವಿ ಪತಿ ವಯಸ್ಸೆಷ್ಟು? ಬಾಡಿ ಷೇಮಿಂಗ್​ ಬಗ್ಗೆ ನೊಂದು ನಟಿ ಹೇಳಿದ್ದೇನು ಕೇಳಿ...

ಭಾವಿ ಪತಿಯ ಯಾವ ಗುಣ ಇಷ್ಟ ಆಯ್ತು ಎನ್ನುವ ಪ್ರಶ್ನೆಗೆ ಪ್ರಿಯಾ, ನಂಗೆ ಮದ್ವೆ ವಯಸ್ಸಾಯ್ತಲ್ಲಾ, ಅದ್ಕೇಮದ್ವೆ ಆಗ್ತಿದ್ದೇನೆ ಎಂದು ತಮಾಷೆ ಮಾಡುತ್ತಲೇ ಭಾವಿ ಪತಿಯ ಗುಣಗಾನ ಮಾಡಿದ್ದಾರೆ. ಗುಡ್​ ಲುಕಿಂಗ್​, ಕೇರಿಂಗ್​, ಲವಿಂಗ್​ ಇದ್ದಾರೆ. ತುಂಬಾ ಮೆಚುರ್​ ಇದ್ದಾರೆ. ನಮ್ಮ ಜನರೇಷನ್​ಗೆ ಹೋಲಿಸಿದ್ರೆ ಅವರು ತುಂಬಾ ಮೆಚುರ್​. ತುಂಬಾ ಇಂಡಿಪೆಂಡೆಂಟ್​ ಆಗಿದ್ದಾರೆ. ಎಲ್ಲದರ ಬಗ್ಗೆ ಕ್ಲಾರಿಟಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಿಕ್ಕಾಪಟ್ಟೆ ಮಾತನಾಡುವವಳು, ಅವರು ತುಂಬಾ ಸೈಲೆಂಟ್​. ಇಬ್ಬರೂ ತುಂಬಾ ಮಾತನಾಡಿದ್ರೆ ಕಷ್ಟ ಆಗ್ತಿತ್ತು. ಈಗ ನಾನು ಮಾತನಾಡಿದ್ದನ್ನು ಅವರು ಕೇಳಿಸಿಕೊಳ್ತಾರಲ್ಲ, ಅದೇ ಖುಷಿ ಎಂದು ತಮಾಷೆ ಮಾಡಿದ್ದಾರೆ. 

ಮದ್ವೆಯಾದ ಮೇಲೆ ಆ್ಯಕ್ಟಿಂಗ್​, ಸೀರಿಯಲ್​, ಯೂಟ್ಯೂಬ್​ ಎಲ್ಲಾ ಬಿಡ್ತೀರಾ ಎನ್ನುವ ಪ್ರಶ್ನೆಗೆ ತಮಾಷೆಯಾಗಿ ಮೇಘನಾ, ಇದೊಳ್ಳೆ ಪಕ್ಕದ ಮನೆ ಆಂಟಿ ಕೇಳಿರೋ ರೀತಿ ಇದೆ. ನಾನು ಯಾವುದೇ ಕಾರಣಕ್ಕೂ ಆ್ಯಕ್ಟಿಂಗ್ ಬಿಡಲ್ಲ. ಸೀತಾರಾಮ ಅಂತೂ ಮುಂದುವರೆಸುತ್ತೇನೆ. ಅದರ ಬಳಿಕ ಬೇರೆ ಪ್ರಾಜೆಕ್ಟ್​ ಸಿಕ್ಕರೂ ಮಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ ಇವರ ಪ್ರೀ ವೆಡ್ಡಿಂಗ್ ಶೂಟ್​ ಬಗ್ಗೆಯೂ ಪ್ರಶ್ನೆಗಳು ಬಂದಿದ್ದು, ಅದಕ್ಕೆ ನಟಿ ಅದನ್ನು ಮೇಲುಕೋಟೆಯಲ್ಲಿ ಶೂಟ್​ ಮಾಡಿದ್ದು ಎಂದಿದ್ದಾರೆ. ತಮ್ಮ ಮತ್ತು ಸೀತಾ ಅಂದ್ರೆ ವೈಷ್ಣವಿ ಗೌಡ ಅವರ ಫ್ರೆಂಡ್​ಷಿಪ್​ ಬಗ್ಗೆ ಮಾತನಾಡಿರುವ ನಟಿ, ನಮ್ಮದು ಸಿಕ್ಕಾಪಟ್ಟೆ ಒಳ್ಳೆಯ ಫ್ರೆಂಡ್​ಷಿಪ್​. ನಮ್ಮಿಬ್ಬರದ್ದು ಒಂದು ಥರಾ ಲಾಸ್ಟ್​ಬೆಂಚರ್ಸ್​ ಎನ್ನಬಹುದು. ಸಿಕ್ಕಾಪಟ್ಟೆ ನಗ್ತೇವೆ, ಒಳ್ಳೆಯ ಬಾಂಡಿಂಗ್​ ಇದೆ ಎಂದಿದ್ದಾರೆ. 

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌


YouTube video player