Asianet Suvarna News Asianet Suvarna News
breaking news image

ನಿಮ್​ ಮಗಳಿಗೂ ಸಿಹಿ ಅಂತಾನೇ ಹೆಸರಿಡ್ತೀರಾ? ಇವಳನ್ನೇ ದತ್ತು ತಗೋತೀರಾ? ನಟಿ ವೈಷ್ಣವಿಗೆ ಥಹರೇವಾರಿ ಪ್ರಶ್ನೆ

ಸೀತಾರಾಮ ಸಿಹಿ ಮತ್ತು ಸೀತಾ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಅಭಿಮಾನಿಗಳು ಏನು ಹೇಳ್ತಿದ್ದಾರೆ ನೋಡಿ...
 

Seeta Rama Sihi and Seeta did a photoshoot see what fans are saying about relation suc
Author
First Published Jul 3, 2024, 5:41 PM IST

 ಸೀತಾ ಮತ್ತು ಸಿಹಿಯ ಜೋಡಿ ಮಾತ್ರ ಥೇಟ್​ ಅಮ್ಮ-ಮಗಳಂತೆಯೇ ಇದೆ. ಸೀರಿಯಲ್​ನಲ್ಲಿ ಇವರಿಬ್ಬರೂ ಅಮ್ಮ-ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿಯೂ ಇವರು ಅಮ್ಮ-ಮಗಳು ಇದ್ದಿರಬಹುದು ಎಂದು ಹಲವರಿಗೆ ಎನ್ನಿಸುವುದು ಉಂಟು. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಮತ್ತು ಸಿಹಿಯ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ, ಇವಳು ನಿಮ್ಮ ಮಗಳು ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುವುದೇ ಇಲ್ಲ ಎನ್ನುತ್ತಲೇ ಇರುತ್ತಾರೆ. ಇದೀಗ ಇವರಿಬ್ಬರ ಫೋಟೋ ವೈರಲ್​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಿಜಕ್ಕೂ ನಿಮ್ಮದು ಹೋದ ಜನ್ಮದಲ್ಲಿ ಅಮ್ಮ-ಮಗಳ ಬಾಂಧವ್ಯವೇ ಆಗಿರಬಹುದು. ಇಲ್ಲದಿದ್ದರೆ ನಿಮ್ಮಿಬ್ಬರ ಕೆಮೆಸ್ಟ್ರಿ ಹೀಗೆ ಆಗುವುದು ಕಷ್ಟವಾಗಿತ್ತು. ಸಿಹಿ ನಿಮ್ಮ ಜೊತೆ ಇರುವಾಗಲೆಲ್ಲಾ ಅವಳು ನಿಮ್ಮದೇ  ಮಗಳು ಎನಿಸುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೇಗ ಮದ್ವೆಯಾಗಿ ಮೇಡಂ, ನಿಮಗೂ ಹೀಗೆಯೇ ಸಿಹಿ ಹುಟ್ಟುತ್ತಾಳೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ನಿಮಗೆ ಮಗಳು ಹುಟ್ಟಿದ್ರೆ ಸಿಹಿ ಅಂತಾನೇ ಹೆಸರು ಇಡಿ ಎನ್ನುತ್ತಿದ್ದಾರೆ ಮತ್ತೆ ಕೆಲವರು. 

ಒಟ್ಟಿನಲ್ಲಿ, ಸಿಹಿ ಮತ್ತು ಸೀತಾ... ಇದು ಸೀರಿಯಲ್​ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಹೆಸರುಗಳು. ಸಿಹಿ ಎಂದಾಕ್ಷಣ ಸೀತಾಳ ನೆನಪಾಗುತ್ತದೆ. ಸೀತಾ ಎಂದಾಕ್ಷಣ ಸಿಹಿಯ ಮುಖ ಎದುರಿಗೆ ಬರುತ್ತದೆ. ಇದು ಜೀ ಕನ್ನಡ ವಾಹಿನಿಯ ಸೀತಾ ರಾಮ ಸೀರಿಯಲ್​ನ ಸಿಹಿ-ಸೀತಾ ಅಮ್ಮ-ಮಗಳ ಬಾಂಧವ್ಯ. ಸೀರಿಯಲ್​ನಲ್ಲಿ ಇವರಿಬ್ಬರೂ ನಿಜವಾದ ಅಮ್ಮ-ಮಗಳು ಹೌದೋ ಅಲ್ಲವೋ ಎಂಬುದು ಇನ್ನೂ ಸಸ್ಪೆನ್ಸ್​  ಆಗಿಯೇ ಉಳಿದಿದೆ. ಏಕೆಂದರೆ ಸಿಹಿಯ ಇತಿಹಾಸ, ಅವಳ ಹಿನ್ನೆಲೆ ಇನ್ನೂ ಸೀತಾ ಯಾರ ಬಳಿಯೂ ಹೇಳಲಿಲ್ಲ. ರಾಮ್​ಗೆ ಹೇಳಲು ಹೋದಾಗಲೆಲ್ಲಾ ಆತ ಅದನ್ನು ನಿರಾಕರಿಸಿದ್ದ. ಆದರೆ ಸೀತಾಳಿಗೆ ಭಯಾನಕ ಇತಿಹಾಸ ಇದೆ ಎನ್ನುವುದು ಮಾತ್ರ ಸುಳ್ಳಲ್ಲ. ಈಕೆಯ ಪತಿಯ ಬಗ್ಗೆ ಕುತೂಹಲ ಇನ್ನೂ ಸೀರಿಯಲ್​ನಲ್ಲಿ ಹೊರಗೆ ಬಂದಿಲ್ಲ. ಇದೇ ವಿಷಯವೇ ಮುಂದೆ ಸೀತಾ ರಾಮರ ದಾಂಪತ್ಯ ಜೀವನಕ್ಕೆ ಕುತ್ತಾಗುತ್ತದೆ ಎನ್ನುವ ಬಗ್ಗೆ ಇದಾಗಲೇ ಸೀರಿಯಲ್​ ಪ್ರೇಮಿಗಳು ಊಹಿಸಿಯಾಗಿದೆ.

ಒತ್ತು ಶ್ಯಾವಿಗೆಗೆ ಬಿಲ್ಡಪ್​ ಕೊಡಲು ವಿಷ್ಣುವರ್ಧನ್​ರ ಚಿತ್ರ ಕಾಪಿ ಮಾಡಿದ್ಯಾಕೆ? ಭಾಗ್ಯಲಕ್ಷ್ಮಿಗೆ ನೆಟ್ಟಿಗರ ಪ್ರಶ್ನೆ

ಅಂದಹಾಗೆ, ಸಿಹಿಯ ನಿಜವಾದ ಹೆಸರು ರೀತು ಸಿಂಗ್​. ಈಕೆ ನೇಪಾಳದವಳು. ನೇಪಾಳ ಮೂಲದ ರಿತು, ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸೀತಾರಾಮ ಸೀರಿಯಲ್​ಗೂ ಸಿಹಿ ಬಾಳಿಗೂ ಸಾಮ್ಯತೆ ಇದೆ. ಹೌದು. ಸೀತಾರಾಮ ಸೀರಿಯಲ್​ ರೀತಿಯಲ್ಲಿಯೇ ಈಕೆಯ ನಿಜ ಜೀವನದ ಕೂಡ ಇದೆ. ಸೀತಾರಾಮ ಸೀರಿಯಲ್​ನಲ್ಲಿ ಈಕೆಗೆ ಅಪ್ಪ ಇಲ್ಲ. ಅಮ್ಮನೇ ಸರ್ವಸ್ವ. ಅದೇ ರೀತಿ ರಿತು ರಿಯಲ್​ ಲೈಫ್​ ಸ್ಟೋರಿ ಕೂಡ. ಇದರ ಬಗ್ಗೆ ಖುದ್ದು ಅವರ ಅಮ್ಮನೇ ಹೇಳಿಕೊಂಡಿದ್ದರು. ಅದೇನೆಂದರೆ, ರಿತು ರಿಯಲ್​ ಅಪ್ಪ ದೂರ ಆಗಿದ್ದಾರೆ. ಈಕೆಯ ರಿಯಲ್​ ಲೈಫ್​ನಲ್ಲಿಯೂ ಅಮ್ಮನೇ ಎಲ್ಲಾ. ಪತಿಯಿಂದ ದೂರವಾಗಿರುವ ರಿತು ಅಮ್ಮ, ಒಬ್ಬಂಟಿಯಾಗಿ ಮಗಳನ್ನು ಸಾಕುತ್ತಿದ್ದಾರೆ. 

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ,  ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ  ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ,  `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.  

'ಅಪ್ಪಾ' ಶಬ್ದ ಕೇಳುತ್ತಲೇ ಮೈಮರೆತು ಪತ್ನಿಗೆ ಸ್ವೀಟ್​ ಕಿಸ್​ ಕೊಟ್ಟ ಮಾಧವ! ನಾಚಿ ನೀರಾದ ತುಳಸಿ

 

Latest Videos
Follow Us:
Download App:
  • android
  • ios