ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವಾಯುಪಡೆಯ ಅಧಿಕಾರಿಯೊಂದಿಗೆ ಮದುವೆ ನಿಶ್ಚಯವಾಗಿದೆ. "ಸೀತಾರಾಮ" ಧಾರಾವಾಹಿ ಚಿತ್ರೀಕರಣ ಮುಕ್ತಾಯವಾಗಿದ್ದು, ಸೀತಾ ಪಾತ್ರದಿಂದ ಬೇರ್ಪಡುವ ಬಗ್ಗೆ ಭಾವುಕರಾಗಿದ್ದಾರೆ. ಧಾರಾವಾಹಿಯ ಸಮಯ ಬದಲಾವಣೆ ಟಿಆರ್‌ಪಿ ಕುಸಿತಕ್ಕೆ ಕಾರಣವಾಗಿತ್ತು.

ಸೀತಾರಾಮ ಸೀತೆಯ ಕಲ್ಯಾಣ ಸೀರಿಯಲ್​ನಲ್ಲಿ ಮುಗಿದಿದ್ದರೂ, ರಿಯಲ್​ ಲೈಫ್​ನಲ್ಲಿ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಈಚೆಗಷ್ಟೇ ಸೀತಾ ಪಾತ್ರಧಾರಿ ನಟಿ ವೈಷ್ಣವಿ ಗೌಡ ಅವರು ಅದ್ಧೂರಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಮದ್ವೆ ಫಿಕ್ಸ್​ ಆಗಿದ್ದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದ ನಟಿ ಎಲ್ಲರಿಗೂ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದರು. ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್ ಅವರು ಛತ್ತೀಸಗಢದವರು. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಕೊನೆಗೂ ಗುಟ್ಟನ್ನು ಅವರೇ ರಿವೀಲ್​ ಮಾಡುವ ಜೊತೆಜೊತೆಗೇನೇ ಎಂಗೇಜ್​ಮೆಂಟ್​ ಕೂಡ ಮಾಡಿಕೊಂಡು ಬಿಗ್​ ಸರ್​ಪ್ರೈಸ್​ ನೀಡಿದ್ದರು.

ನಟಿ ಮದುವೆಯ ವಿಷಯ ತಿಳಿಯುತ್ತಿದ್ದಂತೆಯೇ ಸೀತಾ ಪಾತ್ರವನ್ನು ಬಿಡುತ್ತಾರೆಯೇ ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಏಕೆಂದರೆ ಅವರ ಭಾವಿ ಪತಿ ಬೇರೆ ರಾಜ್ಯದವರಾಗಿರುವ ಹಿನ್ನೆಲೆಯಲ್ಲಿ, ವೈಷ್ಣವಿ ಸೀತಾ ಪಾತ್ರದಿಂದ ದೂರ ಆಗುತ್ತಾರೆ ಎಂದು ಅಭಿಮಾನಿಗಳು ತುಂಬಾ ನೊಂದುಕೊಂಡಿದ್ದರು ಕೂಡ. ಆದರೆ ವೈಷ್ಣವಿ ಹಾಗೆ ಮಾಡಲಿಲ್ಲ. ಮದುವೆಯ ಬಳಿಕವೂ ಈ ಪಾತ್ರವನ್ನು ಮುಂದುವರೆಸಿದ್ದಾರೆ. ಆದರೆ ಇದೀಗ ಇನ್ನೊಂದು ಭಾವುಕ ನುಡಿಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಹಲವು ಅನುಮಾನ ಹುಟ್ಟಿಹಾಕಿದ್ದಾರೆ. ಸೀತಾ ಪಾತ್ರದಿಂದ ನಟಿ ದೂರವಾಗ್ತಾರೆ ಎಂದರೆ ಸೀತಾ ಪಾತ್ರ ಬೇರೆಯವರು ಮಾಡ್ತಾ ಇದ್ದಾರಾ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

Vaishnavi Gowda: ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್​ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...

ಆದರೆ ಇದಾಗಲೇ ಸೀತಾರಾಮ ಬಹುತೇಕ ವೀಕ್ಷಕರಿಗೆ ತಿಳಿದಿರುವಂತೆ, ಸೀರಿಯಲ್​ನ ಕ್ಲೈಮ್ಯಾಕ್ಸ್​ ಭಾಗ ಶುರುವಾಗಿದೆ. ಇನ್ನೇನು ಭಾರ್ಗವಿಯ ಕಿತಾಪತಿ, ರಾಮ್​ಗೆ ಗೊತ್ತಾಗುವುದು ಒಂದು ಬಾಕಿ ಇದೆ. ಸುಬ್ಬಿಗೆ ಇದಾಗಲೇ ಸಿಹಿಯಿಂದ ಎಲ್ಲಾ ಗೊತ್ತಾಗಿರುವ ಹಿನ್ನೆಲೆಯಲ್ಲಿ, ಅವಳೇ ಸತ್ಯ ಹೇಳುವ ಹಾಗಿದೆ. ಸಿಹಿ ತನಗೆ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಿಷಯಗಳನ್ನು ಹೇಳಿದ್ದಾಳೆ ಎಂದು ಸುಬ್ಬಿ ಹೇಳಿದರೆ ಹಾಗೂ ಸುಬ್ಬಿಯೇ ಸೀತಾಳ ಮಗಳು ಎಂದು ಸುಬ್ಬಿಯನ್ನು ಸಾಕಿರುವ ತಾತ ಹೇಳಿದರೆ ಅಲ್ಲಿಗೆ ಕಥೆ ಮುಗಿಯಿತು. ಭಾರ್ಗವಿಯ ಎಲ್ಲಾ ವಿಷಯಗಳೂ ಅಶೋಕ್​ಗೆ ಗೊತ್ತಿರುವ ಕಾರಣ, ಆತನೂ ವಿಷಯ ಹೇಳಿದರೆ ಒಂದೇ ದಿನದಲ್ಲಿ ಸೀರಿಯಲ್​ ಮುಗಿಯತ್ತೆ.

ಆದರೆ ಸದ್ಯ ಒಂದೇ ದಿನದಲ್ಲಿ ಮುಗಿಯುವ ಹಾಗೆ ಕಾಣಿಸುವುದಿಲ್ಲ. ಒಂದಿಷ್ಟು ದಿನ ಸೀರಿಯಲ್​ ಎಳೆದರೂ, ಸದ್ಯ ಶೂಟಿಂಗ್​ ಅಂತೂ ಮುಕ್ತಾಯ ಆಗಿದೆ ಎಂದು ಇದಾಗಲೇ ಸೀರಿಯಲ್​ ಟೀಮ್​ ಪರೋಕ್ಷವಾಗಿ ಹೇಳಿಕೊಂಡಿದೆ. ಇದೀಗ ಸೀತಾ ಪಾತ್ರಧಾರಿ ವೈಷ್ಣವಿ ಅವರೂ ಈ ಪೋಸ್ಟ್​ ಹಾಕುವ ಮೂಲಕ, ಅದಕ್ಕೆ ಪುಷ್ಟಿ ನೀಡಿದ್ದಾರೆ. ಇದಾಗಲೇ ಸೀರಿಯಲ್​ ಟೈಮಿಂಗ್ ಬದಲಾವಣೆಯಿಂದ ಟಿಆರ್​ಪಿ ಕೂಡ ಕುಸಿದಿತ್ತು ಎಂದು ತಿಳಿದುಬಂದಿದೆ. ಸಿಹಿಯ ಸಾವಿನ ಬಳಿಕ ಜನರು ಇದನ್ನು ಮತ್ತೆ ನೋಡಲು ಇಷ್ಟಪಟ್ಟಿರಲಿಲ್ಲ ಎನ್ನುವುದು ಒಂದುಕಡೆಯಾದರೆ, ಈಗ ಪ್ರಸಾರ ಆಗ್ತಿದ್ದ ಸಮಯದಲ್ಲಿ ನೋಡಲು ಬಹಳಷ್ಟು ಮಂದಿಗೆ ಆಗುತ್ತಿರಲಿಲ್ಲ ಎನ್ನುವುದೂ ಮತ್ತೊಂದು ಕಾರಣ. ಅದೇನೇ ಇದ್ದರೂ ಒಂದು ಒಳ್ಳೆಯ ರೀತಿಯಲ್ಲಿ ಸೀರಿಯಲ್​​ ಮುಕ್ತಾಯ ಕಾಣಲಿದೆ ಎನ್ನುವುದು ಸಮಾಧಾನ. ಮೂರು ವರ್ಷಗಳವರೆಗೆ ಒಂದೇ ಟೀಮ್​ನಲ್ಲಿ ಕೆಲಸ ಮಾಡುತ್ತಿದ್ದರೆ, ಅವರೇ ಕುಟುಂಬದ ಸದಸ್ಯರು ಎನ್ನಿಸಿಕೊಳ್ಳುವ ಕಾರಣ, ಅವರನ್ನು ಬಿಟ್ಟುಹೋಗುವುದು ಕಲಾವಿದರಿಗೆ ನೋವಿನ ಮಾತೇ. ಅದನ್ನೇ ಈಗ ನಟಿ ವೈಷ್ಣವಿ ಗೌಡ ಬರೆದುಕೊಂಡಿದ್ದಾರೆ. 

ಛತ್ತೀಸ್​ಗಢದ ಯುವಕನ ಜೊತೆ ಲವ್​ನಲ್ಲಿ ಬಿದ್ದದ್ದು ಹೇಗೆ? ಕೊನೆಗೂ ಮೌನ ಮುರಿದ ವೈಷ್ಣವಿ

View post on Instagram