ಸೀತಾರಾಮ ಧಾರಾವಾಹಿಯ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಛತ್ತೀಸಗಢ ಮೂಲದ ವಾಯುಪಡೆಯ ಅಧಿಕಾರಿ ಅನುಕೂಲ್ ಮಿಶ್ರಾ ಅವರೊಂದಿಗೆ ಅರೇಂಜ್ಡ್ ಮ್ಯಾರೇಜ್ ಆಗುತ್ತಿದೆ. ಮದುವೆ ವಿಚಾರವನ್ನು ರಹಸ್ಯವಾಗಿಟ್ಟಿದ್ದ ನಟಿ, ಸಾಮಾಜಿಕ ಜಾಲತಾಣದಲ್ಲಿ ಪರೋಕ್ಷವಾಗಿ ಸುಳಿವು ನೀಡಿದ್ದರು. ತಮ್ಮ ಭಾವಿ ಪತಿಯ ಬಗ್ಗೆ ಹಬ್ಬುತ್ತಿರುವ ತಪ್ಪು ಮಾಹಿತಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ವೈಷ್ಣವಿ ಗೌಡ ಅರ್ಥಾತ್​ ಸೀತಾರಾಮ ಸೀರಿಯಲ್​ ಸೀತೆ ಸದ್ಯ ಅಭಿಮಾನಿಗಳ ಬಾಯಲ್ಲಿ ಹಾಟ್​ ಟಾಪಿಕ್​ ಆಗಿದ್ದಾರೆ. ದಿಢೀರ್​ ಎಂದು ಎಲ್ಲಿಯೂ ಸದ್ದು ಮಾಡದೇ, ತಮ್ಮದೇ ಒಂದಷ್ಟು ಬಳಗಕ್ಕೆ ಮಾತ್ರ ವಿಷಯ ತಿಳಿಸಿ ಎಂಗೇಜ್​ಮೆಂಟ್​ ಆಗಿದ್ದಾರೆ. ಇದೀಗ ಮದುವೆಯ ಬಗ್ಗೆಯೂ ಸರ್​ಪ್ರೈಸ್​ ಆಗಿಯೇ ಇಟ್ಟಿದ್ದಾರೆ. ಇದನ್ನಾದರೂ ಮೊದಲೇ ತಿಳಿಸಿ ಎನ್ನುವುದು ಅಭಿಮಾನಿಗಳ ಮಾತು. ಅಂದಹಾಗೆ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಎನ್ನುವವರ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ ಷೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ ಷೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ” ಎಂದು ಹೇಳಿದ್ದರು. ಆದರೆ, ಗುಟ್ಟನ್ನು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಕೊನೆಗೂ ಗುಟ್ಟನ್ನು ಅವರೇ ರಿವೀಲ್​ ಮಾಡಿದ್ದು, ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

 ಹೊರರಾಜ್ಯದವರು ಅಂದರೆ ಛತ್ತೀಸಗಢದವರನ್ನು ವೈಷ್ಣವಿ ಮದ್ವೆ ಆಗ್ತಿರೋದು ಯಾಕೆ? ಹೇಗೆ ಇಬ್ಬರೂ ಲವ್​ನಲ್ಲಿ ಬಿದ್ದರು? ಲವ್​ ಮಾಡ್ತಾ ಎಷ್ಟು ವರ್ಷವಾಯ್ತು ಎಲ್ಲವುಗಳ ಬಗ್ಗೆ ನಟಿ ಇದೀಗ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಕುತೂಹಲದ ಸಂಗತಿ ಏನೆಂದರೆ, ಎಲ್ಲರೂ ತಿಳಿದಿರುವಂತೆ ವೈಷ್ಣವಿ ಅವರದ್ದು ಲವ್​ ಮ್ಯಾರೇಜ್​ ಅಲ್ಲ. ಅದು ಪ್ಯೂರ್​ ಅರೇಂಜ್ಡ್​ ಮ್ಯಾರೇಜ್​ ಎಂದಿದ್ದಾರೆ ನಟಿ. ನನಗೂ ತುಂಬಾ ಮಂದಿ ಕೇಳ್ತಾರೆ, ಲವ್​ ಮ್ಯಾರೇಜಾ? ಉತ್ತರದವರು ಹೇಗೆ ಪರಿಚಯವಾದ್ರು ಅಂತೆಲ್ಲಾ. ಆದ್ರೆ ನನ್ನದು ಅರೇಂಜ್ಡ್​ ಮ್ಯಾರೇಜ್​. ಅವರು ಮೊದಲು ನನಗೂ ಗೊತ್ತಿರಲಿಲ್ಲ. ಇಬ್ಬರ ಮೈಂಡ್​ಸೆಟ್​ ಒಂದೇ ರೀತಿ ಇದ್ದುದರಿಂದ ಒಪ್ಪಿಕೊಂಡೆ. ಎರಡೂ ಮನೆಯವರು ನೋಡಿ ಒಪ್ಪಿ ಮಾಡಿದ ಮದುವೆ. ಮದುವೆ ಫಿಕ್ಸ್​ ಆದ ಮೇಲೆ ನಮ್ಮ ಪರಿಚಯವಾದದ್ದು ಎಂದಿದ್ದಾರೆ. 

ಯಾರ‍್ಯಾರನ್ನೋ ನನ್​ ಗಂಡ ಮಾಡ್ಬೇಡಿ ಪ್ಲೀಸ್​... ಅವ್ರು ಅಕಾಯ್ ಅಲ್ಲ: ವೈಷ್ಣವಿ ಗೌಡ ಬೇಸರ

ಪ್ರತಿಯೊಬ್ಬ ಹೆಣ್ಣೂ ತಮ್ಮ ಗಂಡನಾಗುವವ ಹೀಗೆ ಇರಬೇಕು ಎಂದು ಇರುತ್ತದೆ. ಅನುಕೂಲ್​ ಅವರ ಬಳಿ ಮಾತನಾಡಿದಾಗ ನಾನು ಹುಡುಕುತ್ತಿರುವವರು ಇವರೇ ಎನ್ನಿಸಿತು. ನಮ್ಮಿಬ್ಬರ ಮೈಂಡ್​ಸೆಟ್​ ಒಂದೇ ರೀತಿ ಇದೆ. ಆದ್ದರಿಂದ ನಾನು ಒಪ್ಪಿಕೊಂಡೆ. ಆದ್ದರಿಂದ ಯಾರೂ ಇದನ್ನು ಲವ್​ ಮ್ಯಾರೇಜ್​ ಎಂದುಕೊಳ್ಳುವುದು ಬೇಡ ಎಂದಿದ್ದಾರೆ. ಇದೇ ಸಂದರ್ಶನದಲ್ಲಿ ವೈಷ್ಣವಿ ಅವರು ತಮ್ಮ ಭಾವಿ ಪತಿಯ ಬಗ್ಗೆ ಕೆಲವರು ತಪ್ಪು ತಪ್ಪು ಮಾಹಿತಿ ನೀಡ್ತಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದರು. 

 ನನ್ನ ಭಾವಿ ಪತಿಯ ಹೆಸರು ಅಕಾಯ್​ ಎನ್ನುತ್ತಾರೆ. ಉದ್ಯಮಿ ಎಂದು ಕೆಲವು ಯೂಟ್ಯೂಬ್​ ಚಾನೆಲ್​ಗಳಲ್ಲಿ ಬರೆಯಲಾಗಿದೆ ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ್ದರು. ಅವರ ಹೆಸರು ಅಕಾಯ್​ ಅಲ್ಲ, ಅನುಕೂಲ್​ ಎಂದು. ದಯವಿಟ್ಟು ಏನೇನೋ ಪ್ರಸಾರ ಮಾಡಬೇಡಿ. ಅದೆಷ್ಟು ಕಾನ್​ಫಿಡೆಂಟ್​ ಆಗಿ ಹೇಳಿಬಿಡುತ್ತಾರೆ ಎಂದು ಕಂಡರೆ ನನಗೇ ಅಚ್ಚರಿಯಾಗುತ್ತದೆ, ಯಾವುದೇ ಕ್ರಾಸ್​ ಚೆಕ್​ ಮಾಡಿಕೊಳ್ಳುವುದಿಲ್ಲ. ಸಂಬಂಧಪಟ್ಟವರನ್ನು ಕೇಳುವುದೂ ಇಲ್ಲ. ಮನಸ್ಸಿಗೆ ಬಂತಂತೆ ಹೇಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿರುವ ನಟಿ, ಪ್ಲೀಸ್ ಹಾಗೆಲ್ಲಾ ಮಾಡಬೇಡಿ. ಸರಿಯಾದ ವಿಷಯ ಕೇಳಿ ತಿಳಿದುಕೊಂಡು ಬರೆಯಿರಿ. ಈ ಬಗ್ಗೆ ನನ್ನ ಅಮ್ಮನೂ ಇದಾಗಲೇ ಹೇಳಿದ್ದರು. 

ಶೂಟಿಂಗ್​ ವೇಳೆ ಮುಗುಚಿ ಬಿದ್ದ ತೆಪ್ಪ: ನೀರಲ್ಲಿ ಮುಳುಗಿದ ನಟಿ ವೈಷ್ಣವಿ ಗೌಡ & ಟೀಮ್​!