Asianet Suvarna News Asianet Suvarna News
breaking news image

ತಿಳಿಯದೇ ತಪ್ಪಾಗೋಯ್ತು, ಪ್ಲೀಸ್​ ಕ್ಷಮಿಸಿ ಬಿಡಿ... ಅಭಿಮಾನಿಗಳ ಕ್ಷಮೆ ಕೋರಿದ ಸೀತಾರಾಮ ನಟಿ ವೈಷ್ಣವಿ ಗೌಡ

ಸೀತಾರಾಮ ಸೀರಿಯಲ್​ ಸೀತಾ ಅರ್ಥಾತ್​ ವೈಷ್ಣವಿ ಗೌಡ ಅವರು ಶೂಟಿಂಗ್​ ಸೆಟ್​ನಿಂದಲೇ ತಮ್ಮ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
 

Seeta Rama Seeta  Vaishnavi Gowda apologized to her fans for mismatch of saree blouse suc
Author
First Published Jun 3, 2024, 10:57 AM IST

ಇಂದು ಸೀರಿಯಲ್​ಗಳೆಂದರೆ ಅದು ಕೇವಲ ಸೀರಿಯಲ್​ಗಳಾಗಿಲ್ಲ. ಬದಲಿಗೆ ಜನಮಿಡಿತವೂ ಆಗಿಬಿಟ್ಟಿದೆ. ನಮ್ಮ ನೆಚ್ಚಿನ ತಾರೆಯರು ಹೀಗೆಯೇ ಇರಬೇಕು ಎಂದು ದೊಡ್ಡ ಪ್ರೇಕ್ಷಕ ವರ್ಗವೇ ಬಯಸುತ್ತದೆ. ಅವರು ತೊಡುವ ಉಡುಗೆ ತೊಡುಗೆಗಳಿಂದ ಎಲ್ಲವೂ ಹೀಗೆಯೇ ಇರಬೇಕು ಎಂದು ಅಭಿಮಾನಿಗಳು ಬಯಸುವುದು ಸಹಜ. ಇದೇ ಕಾರಣಕ್ಕೆ ಹೀರೋ- ಹೀರೋಯಿನ್​ಗಳಿಗೆ ಹೊರಗಡೆ ಹೋದರೂ ಅಷ್ಟೇ ಬೆಲೆ ಸಿಗುತ್ತದೆ, ವಿಲನ್​ಗಳಿಗೆ ಹೊರಗಡೆ ಕೂಡ ಛೀಮಾರಿ ಹಾಕುವುದು ಇದೆ. ಅಷ್ಟರ ಮಟ್ಟಿಗೆ ಸೀರಿಯಗಳು ದೊಡ್ಡ ಪ್ರಮಾಣದ ವೀಕ್ಷಕರನ್ನು ಹಿಡಿದುಕೊಂಡಿದ್ದು, ಅದರಲ್ಲಿಯೂ ಮಹಿಳಾ ವರ್ಗವನ್ನು ಆವರಿಸಿಕೊಂಡು ಬಿಟ್ಟಿದೆ. ಸೀರಿಯಲ್​ಗಳಲ್ಲಿ ಚಿಕ್ಕ ಪ್ರಮಾದವಾದರೂ ಅದನ್ನು ಸಹಿಸದ ಮಟ್ಟಿಗೆ ಪ್ರೇಕ್ಷಕರು ಹೋಗುತ್ತಾರೆ. ಹಿಂದೆಲ್ಲಾ ತಮ್ಮೊಳಗೇ ಈ ವಿಷಯಗಳನ್ನು ಚರ್ಚೆ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಸೋಷಿಯಲ್​  ಮೀಡಿಯಾ ಸಕತ್​ ಆ್ಯಕ್ಟೀವ್​ ಆಗಿರುವ ಕಾಲದಲ್ಲಿ ಸೀರಿಯಲ್​ಗಳನ್ನು ಎಷ್ಟರಮಟ್ಟಿಗೆ ಹೊಗಳುತ್ತಾರೋ ಅದಕ್ಕಿಂತಲೂ ಹೆಚ್ಚಿನಾದ ಬಾಯಿಗೆ ಬಂದಂತೆ ಬೈಯುವುದೂ ನಡೆಯುತ್ತದೆ.

ಇದೀಗ ಬಹು ಪ್ರೇಕ್ಷಕ ವರ್ಗದ ಮನಗೆದ್ದಿರುವ ಸೀತಾರಾಮ ಸೀರಿಯಲ್​ ಕಥೆ ಕೇಳಿ. ಇದೀಗ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸೀತಾ-ರಾಮ ಕಲ್ಯಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರುತ್ತಿದೆ. ಇನ್ನೇನು ಯಾವುದೇ ವಿಘ್ನ ಬಾರದಂತೆ ಸೀತಾ-ರಾಮ ಒಂದಾದರೆ ಸಾಕಪ್ಪ ಎನ್ನುವುದು ಅಭಿಮಾನಿಗಳ ಅಭಿಮತ. ಇದರ ನಡುವೆಯೇ ಎಲ್ಲರ ಕಣ್ಣು ಕುಕ್ಕಿದ್ದು, ಸೀತೆ ಉಟ್ಟ ಸೀರೆಯ ಬಗ್ಗೆ. ಸೀತಾಳನ್ನು ನೋಡಲು ರಾಮ್​ನ ಮನೆಯವರು ಬಂದಾಗ ಸೀತಾ ಉಟ್ಟ ಸೀರೆಯನ್ನು ನೋಡಿ ಸೋಷಿಯಲ್​  ಮೀಡಿಯಾಗಳಲ್ಲಿ ಸಕತ್​ ಟ್ರೋಲ್​  ಮಾಡಲಾಗಿತ್ತು.

ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು

ಕಡುನೀಲಿ ಅಂದರೆ ಇಂಕ್‌ ಬಣ್ಣದ ಮೇಲೆ ಬೆಳ್ಳಿ ಬಣ್ಣದ ದೊಡ್ಡ ಹೂಗಳ ಡಿಸೈನ್‌ ಇರುವ   ಸೀರೆಯನ್ನು ಸೀತಾ ಉಟ್ಟಿದ್ದಳು. ಇದಕ್ಕೆ ಕಾಂಬಿನೇಶನ್‌ ಆಗಿ ಸ್ಯಾಂಡಲ್‌ ವುಡ್‌ ಕಲರ್ ಬ್ಲೌಸ್‌ ತೊಟ್ಟಿದ್ದಳು. ಇದನ್ನು ವೀಕ್ಷಕರು ಸ್ವಲ್ಪವೂ ಇಷ್ಟಪಟ್ಟಿರಲಿಲ್ಲ. ಥೂ ಮಿಸ್​  ಮ್ಯಾಚ್​, ಅಷ್ಟೂ ಗೊತ್ತಾಗಲ್ವಾ? ಡ್ರೆಸ್​ ಸೆನ್ಸ್​ ಇಲ್ವಾ? ವಯಸ್ಸಾದವರ ರೀತಿ ಕಾಣಿಸ್ತಾ ಇದ್ದಾಳೆ ಸೀತಾ... ಹೀಗೆ ಏನೇನೋ ಕಮೆಂಟ್​ಗಳನ್ನು ಸೋಷಿಯಲ್​  ಮೀಡಿಯಾದಲ್ಲಿ ಮಾಡಿದ್ದೂ ಆಯ್ತು.  ಸೀತಾ ಸೀರೆ ಸೆಲೆಕ್ಷನ್ನೇ ಸರಿಯಾಗಿಲ್ಲ, ಬ್ಲೌಸ್ ಖರಾಬಾಗಿದೆ. ಸೀತಾ ಈ ಲುಕ್‌ನಲ್ಲಿ ಅಜ್ಜಿ ಥರ ಕಾಣ್ತಿದ್ದಾಳೆ. ಸೀತಾಗೆ ಸ್ವಲ್ಪನೂ ಡೆಸ್ ಸೆನ್ಸ್‌ ಇಲ್ಲ... ಹೀಗೆ ಬಂದಿರುವ ನೂರಾರು ಕಮೆಂಟ್‌ಗಳನ್ನು ಸೀತಾ ಓದದೇ ಇರುತ್ತಾಳೆಯೆ?

ಹೌದು ಸೀತಾರಾಮ ಸೀತೆ ಅರ್ಥಾತ್​ ವೈಷ್ಣವಿ ಗೌಡ ಅವರೂ ತಮ್ಮ ಸೀರೆಯ ಬಗ್ಗೆ ಬಂದಿರುವ ನೂರಾರು ಕಮೆಂಟ್​ಗಳನ್ನು ಓದಿ ಬೇಸರ ವ್ಯಕ್ತಪಡಿಸಿದ್ದಾರೆ. ಅಂದ ಮಾತ್ರಕ್ಕೆ ಅವರೇನೂ ಕಮೆಂಟ್​ ಮಾಡಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಲಿಲ್ಲ. ಬದಲಿಗೆ ತಾವು ಅಂದು ಉಟ್ಟುಕೊಂಡಿದ್ದ ಸೀರೆ-ಬ್ಲೌಸ್​ ನೋಡಿ ವೀಕ್ಷಕರಿಗೆ ತುಂಬಾ ಬೇಸರವಾಗಿರುವ ಬಗ್ಗೆ ವೈಷ್ಣವಿ ಅವರು ಬೇಸರಿಸಿಕೊಂಡಿದ್ದಾರೆ. ಸಾರಿ. ನಿಮ್ಮ ರಾಶಿ ರಾಶಿ ಕಮೆಂಟ್​ಗಳನ್ನು ನೋಡಿದೆ. ಅದು ಅರ್ಜೆಂಟ್​ನಲ್ಲಿ ಆಗಿ ಹೋಯ್ತು. ನಾನೂ ಸರಿಯಾಗಿ ಗಮನಿಸಲಿಲ್ಲ. ನಿಮಗೆಲ್ಲಾ ಬೇಸರವಾಗಿದೆ ಎನ್ನುವುದು ಕಮೆಂಟ್​ ನೋಡಿದರೆ ತಿಳಿಯುತ್ತದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ. ಮುಂದೆಂದೂ ಹೀಗೆ  ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸೀತಾರಾಮ ಎಂಗೇಜ್​ಮೆಂಟ್​ ಶೂಟಿಂಗ್​ ಹೇಗೆ ನಡೆಯಿತು ಎಂಬ ಬಗ್ಗೆ ಯೂಟ್ಯೂಬ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ ವೈಷ್ಣವಿ ಅವರು, ಕೊನೆಯಲ್ಲಿ ಮಿಸ್​ಮ್ಯಾಚ್​ ಸೀರೆ ಬಗ್ಗೆ ಮಾತನಾಡಿ ಕ್ಷಮೆ ಕೋರಿದ್ದಾರೆ. ಇವರ ದೊಡ್ಡತನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ಸೀರಿಯಲ್​ಗಳಲ್ಲಿ ಮಹಡಿ, ಬಾಲ್ಕನಿ ಮೇಲಿಂದ ಹೇಗೆ ಬೀಳ್ತಾರೆ ನಟರು? ಶೂಟಿಂಗ್​ ಹೀಗೆ ನಡೆಯತ್ತೆ ನೋಡಿ...

 

Latest Videos
Follow Us:
Download App:
  • android
  • ios