ಅಭಿಮಾನಿಗಳೇ ಈಗಾದ್ರೂ ಖುಷಿನಾ..? ನಿಮ್ಮಾಸೆ ಕೊನೆಗೂ ನೆರವೇರಿತು ಅಂತಿದೆ ಶ್ರೀರಸ್ತು- ಶುಭಮಸ್ತು
ಶ್ರೀರಸ್ತು ಶುಭಮಸ್ತು ಸೀರಿಯನಲ್ಲಿ ಮಹಾ ಟ್ವಿಸ್ಟ್ ಬಂದಿದೆ. ಸಮರ್ಥ್ ಬಗ್ಗೆ ಯೋಚಿಸುತ್ತಿದ್ದ ಸೀರಿಯಲ್ ಪ್ರೇಮಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಏನದು?
ಧಾರಾವಾಹಿಗಳ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ, ಅದರ ಬಗ್ಗೆ ಪರ-ವಿರೋಧಗಳ ನಿಲುವು ವ್ಯಕ್ತವಾಗುತ್ತಲೇ ಇರುತ್ತದೆ. ಹೀಗಾಗಬಾರದು, ಹಾಗೆ ಮಾಡಿದ್ದರೆ ಚೆನ್ನಾಗಿತ್ತು, ಇದು ಸರಿಯಿಲ್ಲ, ಇದ್ಯಾಕೋ ಅತಿರೇಕವಾಯ್ತು, ಅವನಿಗೆ ಹೀಗೆ ಮಾಡಲು ಆಗಲ್ವಾ... ಹೀಗೆ ನೆಗೆಟಿವ್ ಕಮೆಂಟ್ಗಳೇ ತುಂಬಿ ಹೋಗುತ್ತವೆ. ಕೆಲವು ಸಂದರ್ಭಗಳಲ್ಲಿ ಇದು ಕೇವಲ ಸೀರಿಯಲ್ ಎನ್ನುವುದನ್ನೂ ಮರೆತು ನೀನು ಹಾಗೆ ಮಾಡು, ನೀನು ಹೀಗೆ ಮಾಡು ಎಂದು ಪಾತ್ರಧಾರಿಗಳಿಗೆ ಅಭಿಮಾನಿಗಳು ಕಮೆಂಟ್ ಮೂಲಕ ಸಜೆಷನ್ ಕೊಡುವುದು ಇದೆ, ಇನ್ನು ಕೆಲವರು ಮುಂದೆ ಕಥೆ ಹೀಗೆಯೇ ಸಾಗುತ್ತದೆ ಎಂದು ತಾವೇ ಡೈರೆಕ್ಟ್ ಕೂಡ ಮಾಡಿಬಿಡುತ್ತಾರೆ. ಹಲವರು ಸೀರಿಯಲ್ಗಳಲ್ಲಿ ಒಂದಷ್ಟು ಸಿದ್ಧಸೂತ್ರಗಳು ಇರುವುದರಿಂದ ಮುಂದೆ ಹೀಗೆಯೇ ಆಗುತ್ತದೆ ಎಂದು ಪ್ರೇಕ್ಷಕರು ಸುಲಭದಲ್ಲಿ ಅರ್ಥ ಮಾಡಿಕೊಳ್ಳುವುದು ಇದೆ.
ಅದೇ ರೀತಿ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್. ಇದರಲ್ಲಿ ಮಾಧವ್ನನ್ನು ತನ್ನ ಅಮ್ಮ ತುಳಸಿ ಈ ವಯಸ್ಸಿನಲ್ಲಿ ಮದುವೆಯಾಗಿದ್ದಾಳೆ ಎನ್ನುವ ಕಾರಣಕ್ಕೆ ಮಗ ಸಮರ್ಥ್ಗೆ ತುಂಬಾ ಸಿಟ್ಟು. ಅಮ್ಮನ ಮೇಲೆ ಮಾತ್ರವಲ್ಲದೇ ಮಾಧವ್ ಮೇಲೂ ಇನ್ನಿಲ್ಲದ ಕೋಪ. ಒಳಗೊಳಗೇ ಅಮ್ಮನ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಇದ್ದರೂ ಅದನ್ನು ಸದಾ ಜಗಳದ ಮೂಲಕವೇ ತೋರಿಸುವುದು ಅವನ ಜಾಯಮಾನ. ಮಾಧವ್ ಮೇಲಂತೂ ಸಮಯ ಸಿಕ್ಕಾಗಲೆಲ್ಲವೂ ಬೈಯುತ್ತಲೇ, ಇನ್ಸಲ್ಟ್ ಮಾಡುತ್ತಲೇ ಇರುತ್ತಾನೆ. ಆದರೆ ತುಳಸಿಯಾಗಲೀ, ಮಾಧವ್ ಆಗಲೀ ಸಮರ್ಥ್ಗೆ ಏನೂ ಹೇಳದೇ ಆತ ಎಷ್ಟೇ ಬೈದರೂ ಸಮಾಧಾನಚಿತ್ತರಾಗಿಯೇ ಇರುತ್ತಾರೆ.
ಮದುಮಗಳಾದ ಆ್ಯಂಕರ್ ಅನುಶ್ರೀ ವಿಡಿಯೋ ವೈರಲ್! ಗುಟ್ಟಾಗಿ ಮದುವೆ ನಡೆದೋಯ್ತಾ ಕೇಳ್ತಿದ್ದಾರೆ ಫ್ಯಾನ್ಸ್...
ಸಮರ್ಥ್ ಮಾಧವ್ ಮನೆಯ ಡ್ರೈವರ್ ಆಗಿದ್ದಾನೆ. ಆದರೆ ಮನೆಯಲ್ಲಿ ತುಂಬಾ ಸಮಸ್ಯೆ ಇದೆ ಎನ್ನುವುದನ್ನು ಅರಿತ ಮಾಧವ್, ಹಣ ಕೊಡಲು ಬಂದಾಗ ಸಮರ್ಥ್ ಕೆಂಡಾಮಂಡಲವಾಗುತ್ತಾನೆ. ಊಟವನ್ನು ನೀಡಲು ಬಂದಾಗಲೂ ಮಾಧವ್ ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ಇವೆಲ್ಲವನ್ನೂ ನೋಡಿದ ಅಭಿಮಾನಿಗಳ ಪೈಕಿ ಕೆಲವರು ಸಮರ್ಥ್ಗೆ ಅತಿಯಾಯ್ತು ಎಂದು ಹೇಳಿದರೆ, ಇನ್ನು ಹಲವರು ಇಷ್ಟೆಲ್ಲಾ ಮಾಡುವ ಬದಲು ಆತನಿಗೆ ಒಳ್ಳೆಯ ಉದ್ಯೋಗ ಕೊಡಿಸಬಾರದೆ? ನಿಮ್ಮದೇ ಅಷ್ಟು ದೊಡ್ಡ ಕಂಪೆನಿ ಇದೆ ಅದರಲ್ಲಿ ಏನಾದರೂ ಕೊಡಬಾರದೆ? ಸಮರ್ಥ್ ಇದಾಗಲೇ ತಾನು ಕಂಪೆನಿ ನಿಭಾಯಿಸಲು ಸಮರ್ಥ ಎಂದು ತೋರಿಸಿಕೊಟ್ಟಿದ್ದಾನೆ. ಇಷ್ಟಾದರೂ ದುಡ್ಡು ಕೊಟ್ಟು ಆತನಿಗೆ ಅವಮಾನ ಮಾಡುವ ಬದಲು ಡ್ರೈವರ್ ಕೆಲಸ ಬಿಟ್ಟು ದೊಡ್ಡ ಹುದ್ದೆ ಕೊಡಬಹುದಲ್ಲ ಎಂದು ಪ್ರಶ್ನಿಸುತ್ತಿದ್ದರು.
ಇದೀಗ ಅಭಿಮಾನಿಗಳ ಈ ಆಸೆ ಈಡೇರಿಬಿಟ್ಟಿದೆ. ಕಂಪೆನಿಯಲ್ಲಿ ಅಭಿ ಮಾಡಿದ ಎಡವಟ್ಟಿನಿಂದಾಗಿ ಆತನನ್ನು ಕಂಪೆನಿಯಿಂದ ದೂರ ಇಡಲಾಗಿದೆ. ಆದರೆ ಇಷ್ಟು ದೊಡ್ಡ ಜವಾಬ್ದಾರಿಯನ್ನು ಅವಿಯೊಬ್ಬನೇ ನಿಭಾಯಿಸಲಾರ ಎನ್ನುವ ಕಾರಣಕ್ಕೆ ಈ ಜಾಗಕ್ಕೆ ಅರ್ಹರು ಯಾರು ಎಂದು ಮಾಧವ್ ಮತ್ತು ಮಹೇಶ್ ಯೋಚಿಸುವಾಗಲೇ, ಮಾಧವ್ ಸಮರ್ಥ್ ಹೆಸರು ಸೂಚಿಸಿದ್ದಾನೆ. ಇದರಿಂದ ದೀಪಿಕಾ, ಶಾರ್ವರಿ ಕಿಡಿಯಾಗಿದ್ದಾರೆ. ಮಹೇಶ್ ಕೂಡ ಇದಕ್ಕೆ ಸಮರ್ಥ್ ಅರ್ಹ ಎಂದಿದ್ದಾನೆ. ಅವಿ ಕೂಡ ಒಪ್ಪಿಗೆ ಸೂಚಿಸಿ ಸಮರ್ಥ್ಗೆ ಕಂಪೆನಿಯ ಬಗ್ಗೆ ತಿಳಿಸುತ್ತಿದ್ದಾರೆ. ಸದ್ಯ ಸಮರ್ಥ್ಗೆ ದೊಡ್ಡ ಹುದ್ದೆ ಸಿಕ್ಕಿದೆ, ಅಭಿಮಾನಿಗಳ ಆಸೆ ನೆರವೇರಿದೆ ಎನ್ನುತ್ತಿದೆ ಸೀರಿಯಲ್.
ಮಹಾನಟಿ ಷೋನಲ್ಲಿ 'ಮದವೇರಿಸೋ ಮದನಾರಿಯ ನೋಡಿ...' ಜಾಕ್ವೆಲಿನ್ ಜಾಗದಲ್ಲಿ ಯಾರಿವರು?