ಬೈದುಕೊಳ್ಳುತ್ತಲೇ ಬಿಗ್ಬಾಸ್ ನಂ.1 ಸ್ಥಾನಕ್ಕೇರಿಸಿದ ಪ್ರೇಕ್ಷಕರು: ಕಿಚ್ಚ ಸುದೀಪ್ ಪೋಸ್ಟ್ ವೈರಲ್!
ಬಿಗ್ಬಾಸ್ ಕನ್ನಡ 10 ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಈ ಖುಷಿಯಲ್ಲಿ ಕಿಚ್ಚ ಸುದೀಪ್ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.
ಬಿಗ್ಬಾಸ್ ಕನ್ನಡ ಶುರುವಾಗಿ ಎರಡನೆಯ ತಿಂಗಳಿಗೆ ಕಾಲಿಟ್ಟಿದೆ. ಬಿಗ್ ಬಾಸ್ ಎಂದ ಮೇಲೆ ಭಾಷೆ ಯಾವುದೇ ಆಗಿರಲಿ, ಅಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್ ಆಗಿವೆ. ಕೆಲವೊಮ್ಮೆ ಇದು ಸ್ಕ್ರಿಪ್ಟೆಡ್ ಎಂದೂ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದವರು ಹೇಳುವುದು ಇದೆ. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್ಬಾಸ್ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್ ಮಾಡಿ ಕೊಡಲಾಗುತ್ತದೆ ಎಂದೂ ಹೇಳಲಾಗುತ್ತದೆ. ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್ ಮಾಡುವ ದೊಡ್ಡ ವರ್ಗವೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್ ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್ಗಳು ಶೇರ್ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಹೀಗೆ ಬೈದುಕೊಳ್ಳಲಾದರೂ ಇವರಿಗೆ ಈ ಷೋ ನೋಡಬೇಕು!
ಹೌದು. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ. ಸಾಮಾನ್ಯವಾಗಿ ಧಾರಾವಾಹಿ ಪ್ರಿಯರು ದಿನವೂ ಅದನ್ನು ಬೈಯುತ್ತಲೇ ಇರುತ್ತದೆ. ಚ್ಯೂಯಿಂಗ್ ಗಮ್ನಂತೆ ಎಳೆಯುತ್ತಾರೆ. ಅಕ್ರಮ ಸಂಬಂಧ, ಅತಿಯಾದ ನಡವಳಿಕೆ... ಇತ್ಯಾದಿ ಇತ್ಯಾದಿ ಆರೋಪ ಮಾಡುತ್ತಲೇ ಒಂದು ದಿನವೂ ಮಿಸ್ ಮಾಡಿಕೊಳ್ಳದೇ ನೋಡುತ್ತಾರೆ. ಒಂದು ದಿನ ಅಕಸ್ಮಾತ್ತಾಗಿ ಯಾವುದೋ ಕಾರಣಕ್ಕೆ ಧಾರಾವಾಹಿ ಮಿಸ್ ಆಗಿಬಿಟ್ಟರೆ ಏನನ್ನೋ ಕಳೆದುಕೊಂಡ ಅನುಭವ. ಅದೇ ರೀತಿ ಬಿಗ್ಬಾಸ್ ಕೂಡ. ಇಲ್ಲಿನ ಹುಚ್ಚಾಟಗಳನ್ನು ನೋಡಿ ಅದರಲ್ಲಿ ಮುಳುಗಿ ಹೋಗಿ ಖುಷಿ ಪಡುವವರೇ ಹೆಚ್ಚಿನವರು. ಇದೇ ಕಾರಣಕ್ಕೆ ದಿನದಿಂದ ದಿನಕ್ಕೆ ಬಿಗ್ಬಾಸ್ ಕನ್ನಡದ TRP ಜಾಸ್ತಿಯಾಗುತ್ತಲೇ ಸಾಗಿದೆ.
BIGG BOSS: ಎಣ್ಣೆ ಮಸಾಜ್ ಮಾಡ್ತಾ ಮಾಡ್ತಾ ಲವ್ ಶುರು? ಕಾರ್ತಿಕ್- ಸಂಗೀತಾ ಪ್ರೇಮ್ ಕಹಾನಿ
ಇದರ ಬಗ್ಗೆ ಇದೀಗ ಬಿಗ್ಬಾಸ್ ನಡೆಸಿಕೊಡುತ್ತಿರುವ ಕಿಚ್ಚ ಸುದೀಪ್ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಕೇಳಿಸ್ತಿರೋ ಮಾತಿನ ಪಟಾಕಿಗಿಂತ ನಿಮ್ಮ ಚಪ್ಪಾಳೆ ಸೌಂಡೇ ಜೋರು ಎಂದು ಕಲರ್ಸ್ ವಾಹಿನಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿದೆ. ಇದರಲ್ಲಿ ಸುದೀಪ್ ಅವರು ನಂ.1 ಪೋಸ್ಟ್ ಹಿಡಿದು ನಿಂತಿದ್ದಾರೆ. ಅದರಲ್ಲಿ TVR 7.6 ಎಂದು ನಮೂದಿಸಲಾಗಿದೆ. ಪ್ರೋಗ್ರಾಂ/ಚಾನೆಲ್‌ನ ಜನಪ್ರಿಯತೆಯನ್ನು ಅಳೆಯಲು TRP ಅನ್ನು ಬಳಸಲಾಗುತ್ತದೆ. TVR ಅನ್ನು ಜಾಹೀರಾತುದಾರರು ಹೆಚ್ಚು ವ್ಯಾಪಕವಾಗಿ ವೀಕ್ಷಿಸುವ ಕಾರ್ಯಕ್ರಮವನ್ನು ಶೋಧಿಸಿ ಹೆಚ್ಚು ವೀಕ್ಷಿಸುವ ಕಾರ್ಯಕ್ರಮಗಳಿಗೆ ನೀಡುವ ಜಾಹೀರಾತಿನ ರೇಟ್ ಫಿಕ್ಸ್ ಮಾಡುತ್ತಾರೆ. ಇದರಲ್ಲಿ ಬಿಗ್ಬಾಸ್ ನಂಬರ್ 1 ಆಗಿದೆ.
ಅಷ್ಟಕ್ಕೂ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಬಿಗ್ಬಾಸ್ ನೋಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಪ್ರತಿ ಸೀಸನ್ನಲ್ಲಿಯೂ ಹೊಸತನವನ್ನು ಮಾಡುತ್ತಾರೆ. ಅದೇ ರೀತಿ ಕನ್ನಡದ ಬಿಗ್ಬಾಸ್ 10 ನಲ್ಲಿ ಕೂಡ ಹೊಸತನ ಇರಲಿದೆ ಎಂದು ಕಲರ್ಸ್ ವಾಹಿನಿ ತಂಡ ಮತ್ತು ಸುದೀಪ್ ಹೇಳಿದ್ದರು. ಹೊಸತನದ ಬಗ್ಗೆ ಆಯಾ ಪ್ರೇಕ್ಷಕರು ಬೇರೆ ಬೇರೆ ರೀತಿಯಲ್ಲಿ ಕಲ್ಪನೆ ಮಾಡಿಕೊಳ್ಳಬಹುದಾದರೂ ಇದನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಟಿಆರ್ಪಿ ರೇಟ್ ಸಾಕ್ಷಿಯಾಗಿದೆ.
ಮೋಸ ಆಗ್ತಿದೆ ಎಂದು ಡ್ರೋನ್ ಪ್ರತಾಪ್ ಪೋಸ್ಟ್: ನಿಮ್ ಪರ ನಾವಿದ್ದೀವಿ ಎಂದ ಫ್ಯಾನ್ಸ್