ಸೀತಾರಾಮ ಸೀರಿಯಲ್ ಅಂತ್ಯಗೊಳ್ಳುವ ಸೂಚನೆಗಳು ಗೋಚರಿಸುತ್ತಿವೆ. ಸೀತೆಗೆ ಅವಳಿ ಮಕ್ಕಳಿದ್ದು, ಸುಬ್ಬಿ ಕೂಡ ಆಕೆಯ ಮಗಳೇ ಎಂಬ ರಹಸ್ಯ ಬಯಲಾಗಿದೆ. ಸಿಹಿ ಸಾವಿನ ಸತ್ಯ ಸೀತೆಗೆ ತಿಳಿದಿದೆ. ಸುಬ್ಬಿಯನ್ನು ದತ್ತು ಪಡೆಯಲು ಬೇರೆಯವರು ಬಂದಿದ್ದಾರೆ. ಸಿಹಿ, ಅಶೋಕ್‌ಗೆ ತನ್ನ ಅಸ್ತಿತ್ವ ತಿಳಿಸಲು ಯತ್ನಿಸುತ್ತಿದ್ದಾಳೆ. ವೈಷ್ಣವಿ ಗೌಡ ಅವರ ಮದುವೆಗೂ ಮುನ್ನ ಸೀರಿಯಲ್ ಮುಕ್ತಾಯವಾಗುವ ಸಾಧ್ಯತೆ ಇದೆ.
ಸದ್ಯ ಸೀತಾರಾಮ ಸೀರಿಯಲ್ ಮುಗಿಯುವ ಎಲ್ಲಾ ಮುನ್ಸೂಚನೆ ಕಾಣಿಸುತ್ತಿದೆ. ಸೀತೆಗೆ ಸಿಹಿಯ ಜೊತೆ ಇನ್ನೊಬ್ಬಳು ಮಗಳು ಹುಟ್ಟಿದ್ದಳು ಎನ್ನುವ ರಹಸ್ಯ ಇದಾಗಲೇ ಸುಬ್ಬಿ ಕೇಳಿಸಿಕೊಂಡಿದ್ದು, ತಾವು ಸೀತಾಳ ಮಗಳೇ ಎನ್ನುವುದು ಆಕೆಗೆ ತಿಳಿದಿದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತ ಸೀತೆಗೆ ಹುಟ್ಟಿದ್ದು ಅವಳಿ ಮಕ್ಕಳು, ಅವರಲ್ಲಿ ಒಬ್ಬಳು ಸಿಹಿ ಇದಾಗಲೇ ಕಾನೂನುಬದ್ಧವಾಗಿ ಸೀತೆಗೆ ಸಿಕ್ಕೂ ಆಗಿದೆ. ಆಕೆ ಸತ್ತು ಸುಬ್ಬಿಗೆ ಕಾಣಿಸಿಕೊಳ್ತಿರೋದೂ ಆಗಿದೆ. ಇದೀಗ ಸುಬ್ಬಿ ಕೂಡ ಸೀತಾ-ರಾಮ ಮನೆಯನ್ನು ಸೇರಿದ್ದರೂ ಅವಳೇ ಸೀತೆಯ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸುಬ್ಬಿಯನ್ನು ಇದೀಗ ದತ್ತು ಪಡೆದುಕೊಳ್ಳಲು ಬೇರೊಬ್ಬರು ಬಂದಿದ್ದಾರೆ. ಇದೇ ಸಮಯದಲ್ಲಿ ಸುಬ್ಬಿಗೆ ಆತನ ಸಾಕು ತಾತ ತಾನು ಮಗುವನ್ನು ಕದ್ದು ಬಂದಿದ್ದ ವಿಷ್ಯ ಹೇಳಿದ್ದಾನೆ.
ಇದೊಂದು ಟ್ವಿಸ್ಟ್ ಬರುತ್ತಿದ್ದಂತೆಯೇ ಅತ್ತ ಭಾರ್ಗವಿ ಚಿಕ್ಕಿ, ಸೀತಾಳಿಗೆ ಸಿಹಿ ಸತ್ತುಹೋಗಿದ್ದು, ಮನೆಯಲ್ಲಿ ಇರುವವಳು ಬೇರೆ ಯಾರೋ ಎನ್ನುವ ಸತ್ಯ ತಿಳಿಸಲು ಸಿಹಿ ಅಪಘಾತದಲ್ಲಿ ಮೃತಪಟ್ಟ ದಿನವನ್ನು ನೆನಪಿಸಿದ್ದಾಳೆ. ಅಂದು ನಡೆದ ಘಟನೆ, ಸಿಹಿಗೆ ವಾಹನವೊಂದು ಬಂದು ಗುದ್ದಿದ್ದು ಸೀತಾಳಿಗೆ ನೆನಪಾಗಿ ಆಕೆ ಮೂರ್ಚೆ ಹೋಗಿದ್ದಾಳೆ. ಭಾರ್ಗವಿ ಚಿಕ್ಕಿ ಆ ದಿನವನ್ನು ನೆನಪು ಮಾಡಿದ್ದಕ್ಕೆ ರಾಮ್ ಕೆಂಡಾಮಂಡಲನಾಗಿದ್ದು, ಚಿಕ್ಕಿಯನ್ನು ಬಾಯಿಗೆ ಬಂದಂತೆ ಬೈದಿದ್ದಾನೆ. ಇದನ್ನು ಕೇಳಿ ಭಾರ್ಗವಿ ಚಿಕ್ಕಿ ಗಾಬರಿಯಾಗಿ ಹೋಗಿದ್ದಾಳೆ. ರಾಮ್ ತನ್ನ ವಿರುದ್ಧ ತಿರುಗಿ ಬಿದ್ದದ್ದನ್ನು ಆಕೆ ಸಹಿಸಲು ಆಗುತ್ತಿಲ್ಲ. ಅಲ್ಲಿಗೆ ಸೀತಾಳಿಗೆ ಈಗ ಸಿಹಿ ಸತ್ತಿರುವ ವಿಷಯ ತಿಳಿದುಹೋಗಿದೆ.
ಅದೇ ಇನ್ನೊಂದೆಡೆ ಸಿಹಿಯ ಅಸ್ಥಿ ತೆಗೆದುಕೊಂಡು ಹೋಗುವ ವೇಳೆ ಆ ಅಸ್ಥಿಯನ್ನು ವಿಸರ್ಜನೆ ಮಾಡಿದರೆ, ತಮಗೆ ಮೋಕ್ಷ ಸಿಗುತ್ತದೆ, ತಾನಿನ್ನು ಯಾರಿಗೂ ಕಾಣಿಸಿಕೊಳ್ಳುವುದಿಲ್ಲ ಎಂದು ಅರಿತ ಸಿಹಿ ಅದನ್ನು ಅಲ್ಲಿಂದ ಎತ್ತಿಕೊಂಡು ಅಡಗಿಸಿ ಇಡುತ್ತಿದ್ದಾಳೆ. ಇದನ್ನು ನೋಡಿದ ಅಶೋಕ್‌ಗೆ ಏನಾಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಅದೇ ಸಮಯದಲ್ಲಿ ಸಿಹಿ ಕಾರಿನ ಮೇಲಿರುವ ಧೂಳಿನಿಂದ ಐ ಆ್ಯಮ್ ಸಿಹಿ (ನಾನು ಸಿಹಿ) ಎಂದು ಬರೆಯುತ್ತಾಳೆ. ಇದನ್ನು ನೋಡುತ್ತಿದ್ದಂತೆಯೇ ಅಶೋಕ್‌ಗೆ ಶಾಕ್ ಆಗುತ್ತದೆ. ಸಿಹಿ ಅಲ್ಲಿಯೇ ಇರುವ ವಿಷಯ ಆತನಿಗೆ ತಿಳಿಯುತ್ತದೆ.
ಆದ್ದರಿಂದ ಇದೀಗ ಸೀರಿಯಲ್ನಲ್ಲಿ ಎಲ್ಲವೂ ತಿಳಿದಂತೆಯೇ ಆಗಿದೆ. ಸೀತಾಳಿಗೆ ವಿಷ್ಯ ತಿಳಿದಿದೆ. ಇನ್ನು ಸಿಹಿ ಹೇಗಾದರೂ ತನ್ನ ಶಕ್ತಿ ಬಳಸಿ ಅಶೋಕ್‌ಗೆ ಇರೋ ವಿಷಯವನ್ನು ತಿಳಿಸಿದರೆ ಅಲ್ಲಿಗೆ ಭಾರ್ಗವಿ ಚಿಕ್ಕಿಯ ಮುಖವಾಡ ಕಳಚಿ ಬೀಳುತ್ತದೆ. ಹೇಗಿದ್ದರೂ ಆತನಿಗೆ ಅವಳ ಬಗ್ಗೆ ಗೊತ್ತೇ ಇದೆ. ಇನ್ನು ಸುಬ್ಬಿ ಸಿಹಿ ಮಗಳು ಎನ್ನುವ ವಿಷಯವೂ ತಿಳಿಯುತ್ತದೆ. ನಟಿ ವೈಷ್ಣವಿ ಗೌಡ ಅವರ ಮದುವೆಯ ಮುಂಚೆ ಸೀರಿಯಲ್ ಮುಗಿಯುವ ನಿರೀಕ್ಷೆ ಇದೆ. ವಿನಾ ಕಾರಣ ಮತ್ತಷ್ಟು ಎಳೆಯದೇ ಸೀರಿಯಲ್ ಮುಗಿಸಿ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು.
ಛತ್ತೀಸ್ಗಢದ ಯುವಕನ ಜೊತೆ ಲವ್ನಲ್ಲಿ ಬಿದ್ದದ್ದು ಹೇಗೆ? ಕೊನೆಗೂ ಮೌನ ಮುರಿದ ವೈಷ್ಣವಿ
