ತಂದೆಯನ್ನು ಕಳೆದುಕೊಂಡ ಭುವಿಯನ್ನು ಮಾತನಾಡಿಸಲು ಬಂದ ಅಮ್ಮಮ್ಮ ವೈಜ್ಞಾನಿಕ ವಿಚಾರವೊಂದನ್ನು ತಿಳಿಸಿಕೊಟ್ಟಿದ್ದಾರೆ... ಏನದು? 

ಹಸಿರು ಪೇಟೆಯಲ್ಲಿ ತಂದೆಯ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿ ಬೆಂಗಳೂರಿನ ಕಡೆ ಮುಖ ಮಾಡಿದ ಭುವಿ ಹಾಗೂ ಬಿಂದು ಅವರನ್ನು ಮಾತನಾಡಿಸಲು ಅಮ್ಮಮ್ಮ ಮನೆಗೆ ಭೇಟಿ ನೀಡುತ್ತಾರೆ. ಮನೆಯೊಳಗೆ ಬರುತ್ತಿದ್ದಂತೆ ಎರಡು ದೊಡ್ಡ ಮೂಟೆ ಹೊತ್ತು ತರುವುದನ್ನು ಕಂಡು ಬಿಂದು ಆಶ್ಚರ್ಯದಿಂದ ಹಸಿರುಪೇಟೆ ಜನರ ಪಾಲಿಸುವ ಸಂಪ್ರದಾಯದ ಬಗ್ಗೆ ಪ್ರಶ್ನೆ ಕೇಳುತ್ತಾಳೆ.

ಅವಾರ್ಡ್‌ ಕಾರ್ಯಕ್ರಮಕ್ಕೆ ವರುಧಿನಿ ಗೈರು; ಅಜ್ಜಿ ಕೊಟ್ಟ ಉತ್ತರ ಇದೇ ಕಣಪ್ಪ! 

ಸಾವಿನ ಮನೆಗೆ ಸಂತಾಪ ಸೂಚಿಸಲು ಬರುವ ಜನರು ಕೈಯಲ್ಲಿ ಸಿಹಿತಿಂಡಿ ತರುತ್ತಾರಾ? ಕೇಳೋಕೆ ವಿಚಿತ್ರ ಎಂದೆನಿಸಬಹುದು. ಆದರೆ, ಇದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ಅಮ್ಮಮ್ಮ ತಿಳಿಸಿಕೊಟ್ಟಿದ್ದಾರೆ.

'ಸಾವು ಅಂದ್ಮೇಲೆ ಅಳು, ನೋವು, ಸಂಕಟ, ನಿದ್ದೆ ಹಾಳು ಇಂಥದ್ದೆಲ್ಲ ಕಹಿ ಅನುಭವ ಇರುತ್ತದೆ. ಕೊನೆ ಪಕ್ಷ ಮಾತನಾಡಿಸೋಕೆ ಬರೋರು ಸಿಹಿ ಆದರೂ ಮಾತನಾಡಬೇಕು. ಮುಂದೆ ಆಗೋದೆಲ್ಲಾ ಒಳ್ಳೆಯದು ಆಗುತ್ತೆ, ಚಿಂತೆ ಬೇಡವೆಂದು ಧೈರ್ಯ ತುಂಬಬೇಕು. ಅದನ್ನ ಹೇಳೋಕೆ ಇರೋದು ಒಂದೇ ದಾರಿ, ನಾಲಿಗೆ ಸಿಹಿ ಮಾಡೋದು. ಇದು ವೈಜ್ಞಾನಿಕವಾಗಿ ಸರಿ ಕೂಡ ಹೌದು. ಮಕ್ಕಳು ತುಂಬಾ ಅಳುತ್ತಿದ್ದರೆ, ಅವರ ಬಾಯಿಗೆ ಸಕ್ಕರೆ ಹಾಕುತ್ತಾರೆ ಅಲ್ವಾ ಇದೂ ಹಾಗೆ,' ಎಂದು ಅಮ್ಮಮ್ಮ ಕಾರಣ ತಿಳಿಸಿ ಕೊಟ್ಟಿದ್ದಾರೆ. 

ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌;ಮಿಸ್ ಮಾಡದೆ ನೋಡಿ! 

ಕನ್ನಡತಿ ಧಾರಾವಾಹಿಯಲ್ಲಿ ಕನ್ನಡವನ್ನು ಮಾತ್ರ ಉಳಿಸುವ ಕೆಲಸವಾಗುತ್ತಿಲ್ಲ. ಬದಲಾಗಿ ಮಾಡರ್ನ್ ಜನರ ನಡುವೆ ಕಳೆದು ಹೋದ ಸಂಪ್ರಾದಾಯವನ್ನು ಮತ್ತೆ ಕಲಿಸುತ್ತಿರುವುದು, ಈ ಬಗ್ಗೆ ಮಾಹಿತಿ ನೀಡುತ್ತಿರುವುದು ಮತ್ತೊಂದು ಸಂತೋಷ ಎನ್ನುತ್ತಾರೆ ವೀಕ್ಷಕರು.

View post on Instagram