ಈ ಬಾರಿಯ ಅನುಬಂಧ ಅವಾರ್ಡ್ಸ್ನಲ್ಲಿ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಭಾಗವಹಿಸಿದ್ದಾರೆ. ಜೊತೆಗೆ ಕಲರ್ಸ್‌ ಕನ್ನಡದ ನಟನಟಿಯರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದು ವಿಶೇಷ. ಈ ವೇಳೆ ‘ಮಜಾಭಾರತ’ದ ಕೆಲವು ಕಲಾವಿದರ ಜೀವನದ ಕಥೆಗಳನ್ನು ತಾವೇ ಎಲ್ಲರಿಗೂ ತಿಳಿಹೇಳಿದರು. ಇಷ್ಟೇ ಅಲ್ಲದೆ ಅವರ ನೆರವಿಗೆ ನಿಂತರು. ಇದನ್ನು ನೋಡಿದ ಕಲರ್ಸ್‌ ಕನ್ನಡದ ಕ್ಲಸ್ಟರ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌ ‘ಒಬ್ಬ ನಟ ಹೀರೋ ಆಗುವುದು ಹೀಗೆ’ ಎಂದು ಕೊಂಡಾಡಿದರು.

ಕಲರ್ಸ್‌ ಕನ್ನಡದ ಎಲ್ಲಾ ಕಾರ್ಯಕ್ರಮಗಳೂ ನನಗೆ ತುಂಬಾ ಇಷ್ಟ. ಆದರೂ ಅವುಗಳಲ್ಲಿ ಒಂದು ಫೇವರಿಟ್‌ ಎಂದು ಆಯ್ಕೆ ಮಾಡಬೇಕಾದರೆ ನಾನು ಹೇಳುವುದು ಅನುಬಂಧ ಅವಾರ್ಡ್ಸ್ ಎಂದು. ಏಕೆಂದರೆ ಇದು ಭಾವನೆಗಳನ್ನು ಸಂಭ್ರಮಿಸುವ ಹಬ್ಬ. - ಪರಮೇಶ್ವರ್‌ ಗುಂಡ್ಕಲ್‌, ಬ್ಯುಸಿನೆಸ್‌ ಹೆಡ್‌, ಕಲರ್ಸ್‌ ಕನ್ನಡ

ಮಗುವಿಗೆ ನಾಮಕರಣ ಮಾಡಿದ ಹಂಸಲೇಖ

ಬೆಳಗಾವಿ ಅಥಣಿಯಿಂದ ಕನ್ನಡತಿ ಸೀರಿಯಲ್‌ನ ಅಭಿಮಾನಿ ಗಂಡ ಹೆಂಡತಿ ತಮ್ಮ ಹಸುಗೂಸಿನ ಜೊತೆಗೆ ಈ ಕಾರ್ಯಕ್ರಮಕ್ಕೆ ಬಂದಿದ್ದರು. ಮರಾಠಿ ಭಾಷಿಗರಿಂದ ಸುತ್ತುವರಿದಿರುವ ಪ್ರದೇಶದಲ್ಲಿರುವ ಅವರು ಕನ್ನಡತಿ ಧಾರಾವಾಹಿಯಿಂದ ಪ್ರೇರಣೆ ಪಡೆದು ತಮ್ಮ ಮಗುವಿಗೆ ಅನುಬಂಧ ಕಾರ್ಯಕ್ರಮದಲ್ಲೇ ನಾಮಕರಣ ಮಾಡಿಸಲು ನಿರ್ಧರಿಸಿದ್ದರು. ನಾದಬ್ರಹ್ಮ ಹಂಸಲೇಖ ಹಾಗೂ ಕನ್ನಡ ಪುರೋಹಿತ ಹಿರೇಮಗಳೂರ್‌ ಕಣ್ಣನ್‌ ಮಗುವಿಗೆ ‘ಕನ್ನಡ’ ಎಂದೇ ಹೆಸರಿಟ್ಟರು.

ತೋಟದ ಮನೆಯಲ್ಲಿ ಕರು, ಕುರಿ ಮರಿಗಳನ್ನು ಮುದ್ದಾಡಿದ ರಕ್ಷಿತಾ ಪ್ರೇಮ್ 

ತಾರೆಗಳ ಸಮಾಗಮ

ಸುದೀಪ್‌, ಹಂಸಲೇಖ, ರಚಿತಾರಾಮ್‌, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ, ಡಾರ್ಲಿಂಗ್‌ ಕೃಷ್ಣ, ಮಿಲನಾ ನಾಗರಾಜ್‌, ವಿಜಯ ರಾಘವೇಂದ್ರ, ಶ್ರೀಮುರಳಿ, ಅದಿತಿ ಪ್ರಭುದೇವ, ದೊಡ್ಡಣ್ಣ ಮತ್ತಿತರರ ಜೊತೆಗೆ ಕಲರ್ಸ್‌ ಕನ್ನಡದ ಕಲಾವಿದರು ನಕ್ಕು ನಲಿದರು. ಇಂಪಾದ ಸಂಗೀತದಿಂದ ರಂಜಿಸಲು ರಘು ದೀಕ್ಷಿತ್‌, ವಾಸುಕಿ ವೈಭವ್‌ ಇದ್ದರು. ಕುರಿ ಪ್ರತಾಪ್‌ ಹಾಸ್ಯವಿತ್ತು. ರಾಜಕೀಯದಿಂದ ಯುವ ಸಂಸದ ತೇಜಸ್ವಿ ಸೂರ್ಯ, ಕ್ರೀಡಾ ಕ್ಷೇತ್ರದಿಂದ ಅಂತಾರಾಷ್ಟ್ರೀಯ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.