ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್ ಮಾಡ್ಬೇಕು... ಏನದು? ಸೀತಾಳ ಪ್ರಶ್ನೆಗೆ ನಿಮ್ಗೆ ಗೊತ್ತಾ ಉತ್ತರ?
ಸೀತಾರಾಮ ಸೀರಿಯಲ್ ಸೀತಾ ಅಂದ್ರೆ ವೈಷ್ಣವಿ ಗೌಡ ಅವರು ಸೀತಾರಾಮ ಟೀಂಗೆ ಪ್ರಶ್ನೆ ಕೇಳಿದ್ದಾರೆ. ಅವರು ಕೇಳಿದ ಪ್ರಶ್ನೆಗೆ ನಿಮ್ಗೆ ಉತ್ತರ ಗೊತ್ತಾ?
ಸದ್ಯ ಸೀತಾರಾಮ ಸೀರಿಯಲ್ನಲ್ಲಿ ಸಿಹಿಯ ವಿಚಾರದಲ್ಲಿ ಮನೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಕುತಂತ್ರಿ ಚಿಕ್ಕಿ ಭಾರ್ಗವಿ ಮತ್ತು ಆಕೆಯ ಗಂಡ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ಗೆ ಹಾಕಲು ಹೊಂಚು ಹಾಕುತ್ತಿದ್ದಾರೆ. ತಾತನ ಕಿವಿಯನ್ನು ಕೂಡ ಭಾರ್ಗವಿ ಊದಿದ್ದಾಳೆ. ಆಕೆಯ ಕುತಂತ್ರ ಅರಿಯದ ತಾತ ಕೂಡ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್ಗೆ ಹಾಕುವ ಯೋಚನೆ ಮಾಡಿದ್ದಾನೆ. ಗಂಡ-ಹೆಂಡತಿ ಒಟ್ಟಾಗಿ ಕಾಲ ಕಳೆಯಲು ಮಗಳು ದೂರ ಇರಬೇಕು ಎನ್ನುವುದು ಅವನ ಯೋಚನೆ. ಆದರೆ ಸೀತಾಳಿಗಿಂತಲೂ ಹೆಚ್ಚಾಗಿ ರಾಮ್ಗೆ ಸಿಹಿಯನ್ನು ತನ್ನಿಂದ ದೂರ ಕಳಿಸಲು ಇಷ್ಟವಿಲ್ಲ. ಆದರೆ ಮನೆಯಲ್ಲಿಯೇ ಇದ್ದರೆ ಆಕೆಯ ಪ್ರಾಣಕ್ಕೆ ಅಪಾಯ ಎಂದು ಜ್ಯೋತಿಷಿಗಳು ಹೇಳಿರುವ ಕಾರಣ, ಗೊಂದಲದಲ್ಲಿದ್ದಾರೆ ಸೀತಾ-ರಾಮ. ಈ ಮಧ್ಯೆಯೇ, ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ವಿಡಿಯೋ ಶೇರ್ ಮಾಡುತ್ತಾರೆ. ಟೈಂ ಸಿಕ್ಕಾಗಲೆಲ್ಲಾ ಸೀತಾರಾಮ ಟೀಂನ ಪಾತ್ರಧಾರಿಗಳ ಜೊತೆ ಎಂಜಾಯ್ ಮಾಡುತ್ತಾರೆ. ಬಿಜಿ ಷೆಡ್ಯೂಲ್ ನಡುವೆ ಒಂದಿಷ್ಟು ರಿಲ್ಯಾಕ್ಸ್ ಮೂಡಿಗೆ ಬರುತ್ತದೆ ಟೀಂ.
ಇದೀಗ ವೈಷ್ಣವಿ ಅವರು ಸೀತಾರಾಮ ಟೀಮ್ನ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ ಸೇರಿದಂತೆ ವಿವಿಧ ಪಾತ್ರಧಾರಿಗಳಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ತಿನ್ಬೇಕು ಅಂದ್ರೆ ಒಂದು ದಿನ ಬ್ರೇಕ್ ಮಾಡ್ಬೇಕು... ಏನದು ಎಂದು ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ಕೊಟ್ಟಿದ್ದಾರೆ. ಆದರೆ ಯಾವುದಕ್ಕೂ ವೈಷ್ಣವಿ ಅಲ್ಲ ಎಂದು ಹೇಳಿದ್ದಾರೆ. ಕೊನೆಗೆ ಅವರು ಹೇಳಿದ್ದ ಉತ್ತರ ಏನು ಗೊತ್ತಾ? ಲಂಚ್ ಬ್ರೇಕ್! ಇದಕ್ಕೂ ಮುನ್ನ ವೈಷ್ಣವಿ ಅವರು, ಕೋಳಿಯ ಅಪ್ಪ ಯಾರು ಎಂದು ಪ್ರಶ್ನೆ ಕೇಳಿದ್ದರು. ಇದನ್ನು ಕೇಳಿದ ರಾಮ್, ಇವೆಲ್ಲಾ ನಿಮಗೆ ಎಲ್ಲಿ ಸಿಗುತ್ತೆ ಎಂದು ಪ್ರಶ್ನಿಸಿದ್ದರು. ಇವೆಲ್ಲಾ ಜೋಕ್ ಎನ್ನುತ್ತಲೇ ವೈಷ್ಣವಿ ಉತ್ತರ ಹೇಳಿ ಅಂದಿದ್ದಾರೆ. ತನಗೆ ಗೊತ್ತಿಲ್ಲ ಎಂದು ರಾಮ್ ಹೇಳಿದರೆ, ನಿಮಗೆ ಕೋಳಿಯ ಅಮ್ಮ ಬೇಕೋ, ಅಪ್ಪ ಬೇಕೋ ಎಂದು ಸಿಹಿ ಕೇಳಿದ್ದಾಳೆ. ಒಟ್ಟಿನಲ್ಲಿ ಈ ಪ್ರಶ್ನೆ ಎಲ್ಲರ ತಲೆ ಕೆಡಿಸಿತ್ತು. ಕೊನೆಗೆ ಅದ್ಯಾವುದೂ ಸರಿಯಲ್ಲ ಎಂದು ವೈಷ್ಣವಿ ಹೇಳಿದ್ದರು. ಕೊನೆಯಲ್ಲಿ ಉತ್ತರಿಸಿದ್ದ ಅವರು, ವೈಷ್ಣವಿ, ಕೋಳಿಯ ಅಪ್ಪ ಚಿಕನ್ ಕಾ ಬಾಪ್ ಎಂದಿದ್ದರು! ಇದನ್ನು ಕೇಳಿ ನೆಟ್ಟಿಗರು, ಇದೇನು ಉತ್ತರನಾ? ಅರ್ಥವೇ ಇಲ್ಲ ಎಂದು ಕೆಲವರು ಹೇಳಿದರೆ, ಚೆನ್ನಾಗಿದೆ ಉತ್ತರ ಎಂದು ಮತ್ತೆ ಕೆಲವರು ಹೇಳಿದ್ದರು.
ಒಳಗಡೆ ಷರ್ಟ್ ಇದ್ಯಾ ನಮ್ಗೆ ಕಾಣಿಸ್ಲೇ ಇಲ್ಲ! ಸೀತಾರಾಮ ಸೀತಾಳ ಹೀಗೆ ಕಾಲೆಳೆಯೋದಾ ಟ್ರೋಲಿಗರು?
ಈ ಹಿಂದೆಯೇ ವೈಷ್ಣವಿ ಪ್ರಶ್ನೆ ಕೇಳಿ ಟ್ರೋಲ್ಗೆ ಒಳಗಾಗಿದ್ದರು. ಇದಕ್ಕೆ ಕಾರಣ, ಪ್ರಶ್ನೆಗೂ ಉತ್ತರಕ್ಕೂ ತಾಳಮೇಳ ಇಲ್ಲ ಎನ್ನುವುದು. ಅಷ್ಟಕ್ಕೂ ಸೀತಾ ಅರ್ಥಾತ್ ವೈಷ್ಣವಿ ಅವರು ರಾಮ್ ಅಂದರೆ ಗಗನ್ ಅವರಿಗೆ ಕೇಳಿದ ಪ್ರಶ್ನೆ ಏನೆಂದರೆ, ಗಿಡ ಬೆಳೆಯದ ಕಾಡು ಯಾವುದು ಎನ್ನುವುದು. ಇದಕ್ಕೆ ತಲೆ ಕೆಡಿಸಿಕೊಂಡ ರಾಮ್ ಬಾಲ್ಕನಿ ಸೇರಿದಂತೆ ಕೆಲವು ಉತ್ತರ ಕೊಟ್ಟಿದ್ದರು. ಅಲ್ಲಿದ್ದ ಸೀತಾರಾಮ ಸಿಬ್ಬಂದಿ ಕೂಡ ಇದಕ್ಕೆ ಉತ್ತರ ಹೇಳುವಲ್ಲಿ ವಿಫಲರಾಗಿದ್ದರು. ಕೊನೆಗೆ ಇದಕ್ಕೆ ಉತ್ತರ ಹೇಳಿದ ಸೀತಾ, ಅದು ಸಿಮ್ ಕಾರ್ಡ್ ಎಂದಿದ್ದರು. ಇದಕ್ಕೇ ಸಕತ್ ಟ್ರೋಲ್ ಆದರು. ಉತ್ತರ ಏನೆಂದು ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳು ಉತ್ತರ ಕೇಳಿ ಥೂ ಎಂದಿದ್ದರು. ಕಾಡಿಗೂ ಕಾರ್ಡಿಗೂ ವ್ಯತ್ಯಾಸ ಇಲ್ವಾ ಎನ್ನುವುದು ನೆಟ್ಟಿಗರ ಪ್ರಶ್ನೆಯಾಗಿತ್ತು. ಈಗಲೂ ಈ ಪ್ರಶ್ನೆಗೆ ಅರ್ಥವಿಲ್ಲದ ಉತ್ತರ ಎಂದು ಹೇಳುತ್ತಿದ್ದಾರೆ.
ವೈಷ್ಣವಿ ಅವರ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ.
ಕೋಳಿಯ ಅಪ್ಪ ಯಾರು? ರಾಮ್, ಸಿಹಿಗೆ ಸೀತಾ ಪ್ರಶ್ನೆ- ಉತ್ತರ ಕೇಳಿ ಫ್ಯಾನ್ಸ್ ಸುಸ್ತು!