ಸತ್ಯ ಸೀರಿಯಲ್ ಮುಗಿದ ಬೆನ್ನಲ್ಲೇ ರಿಯಲ್ ಪತಿ ಜೊತೆ ಗೌತಮಿ ಜಾಲಿ ಮೂಡ್- ವಿಡಿಯೋ ವೈರಲ್
ಸತ್ಯ ಸೀರಿಯಲ್ ಮುಗಿದ ಬೆನ್ನಲ್ಲೇ ರಿಯಲ್ ಪತಿ ಅಭಿಷೇಕ್ ಕಾಸರಗೋಡು ಜೊತೆ ಜಾಲಿ ಮೂಡ್ನಲ್ಲಿದ್ದಾರೆ ಸತ್ಯ ಉರ್ಫ್ ಗೌತಮಿ ಜಾಧವ್. ಹಲವು ವಿಡಿಯೋಗಳು ವೈರಲ್
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಸತ್ಯ ಸೀರಿಯಲ್ ಮೂರುವರೆ ವರ್ಷಗಳ ತನ್ನ ಪಯಣವನ್ನು ನಿನ್ನೆ ಅಂದರೆ ಆಗಸ್ಟ್ 10ರಂದು ಮುಗಿಸಿದೆ. ಒಂದು ಗಂಟೆಗಳ ಮಹಾ ಸಂಚಿಕೆಯ ಜೊತೆಗೆ ಸೀರಿಯಲ್ ಮುಗಿಸಲಾಗಿದೆ. ಯಾವುದೇ ರೀತಿಯ ಗಡಿಬಿಡಿಯನ್ನು ಮಾಡದೇ ನಿಧಾನವಾಗಿಯೇ ಸಂಪೂರ್ಣಗೊಳಿಸಲಾಗಿದೆ ಸಂಚಿಕೆಯನ್ನು. ಒಂದಿಷ್ಟು ಕಲಾವಿದರು ಕೊನೆಕ್ಷಣದಲ್ಲಿ ಮಿಸ್ ಆಗಿರುವ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಲೇ ಇದ್ದಾರೆ. ಸತ್ಯಾಳ ಮಾವ, ಊರ್ಮಿಯ ಗಂಡ ಲಕ್ಷ್ಮಣ, ಆತನ ಎರಡನೆಯ ಪತ್ನಿ ಹಾಗೂ ರೀತುವಿನ ಸ್ನೇಹಿತ ಸೇರಿದಂತೆ ಕೆಲವು ಕಲಾವಿದರು ಕೊನೆಯ ಸಂಚಿಕೆಯಲ್ಲಿ ಮಿಸ್ ಆಗಿದ್ದಾರೆ. ಆದರೆ ವಿಶೇಷವೆಂದರೆ ಈ ಸೀರಿಯಲ್ನಲ್ಲಿ ಹೈಲೈಟ್ ಎನಿಸಿದರುವ ಕೀರ್ತನಾ ಪಾತ್ರಧಾರಿ ಬಿಟ್ಟರೆ ಬಹುತೇಕ ಎಲ್ಲರೂ ಮೊದಲಿನಿಂದಲೂ ಅವರೇ ಇರುವುದು. ಕೆಲವು ಸೀರಿಯಲ್ಗಳಲ್ಲಿ ನಾಯಕ-ನಾಯಕಿಯರೇ ಬದಲಾಗಿ ವೀಕ್ಷಕರ ಬೇಸರಕ್ಕೆ ಕಾರಣವಾಗುವುದು ಇದೆ. ಆದರೆ ಸತ್ಯ ಸೀರಿಯಲ್ನಲ್ಲಿ ಮೇನ್ ಕ್ಯಾರೆಕ್ಟರ್ಗಳು ಅವರೇ ಇರುವುದೇ ಸಮಾಧಾನ ಎನ್ನುತ್ತಿದ್ದಾರೆ ವೀಕ್ಷಕರು. ಜೊತೆಗೆ ಎಲ್ಲರೂ ಒಳ್ಳೆಯವರಾಗಿ ಮಾಡಿ ಸೀರಿಯಲ್ಮುಗಿಸಿರುವುದಕ್ಕೂ ಸಮಾಧಾನ ತಂದಿದೆ.
ಸೀರಿಯಲ್ ನಿನ್ನೆ ಮುಗಿದರೂ, ಇದರ ಶೂಟಿಂಗ್ ಕೆಲವು ತಿಂಗಳ ಹಿಂದೆಯೇ ಮುಗಿದಿದೆ. ಶೂಟಿಂಗ್ ಮುಗಿಸಿದ ಬೆನ್ನಲ್ಲೇ ಸತ್ಯ ರಿಯಲ್ ಪತಿಯ ಜೊತೆ ರೀಲ್ಸ್ ಮಾಡಿದ್ದಾರೆ. ಅಂದಹಾಗೆ ಬಾಬ್ ಕಟ್ ಮಾಡಿಸಿಕೊಂಡು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರೋ ಸತ್ಯಳ ಅಸಲಿ ಮುಖವೇ ಬೇರೆ. ಸತ್ಯಳ ನಿಜವಾದ ಹೆಸರು ಗೌತಮಿ ಜಾಧವ್. ಸತ್ಯ ಸೀರಿಯಲ್ನಲ್ಲಿ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ವರ್ಕ್ಔಟ್ ಮಾಡಿದ್ದಾರೆ ಗೌತಮಿ. ಆದರೆ ಇವರನ್ನು ರಿಯಲ್ ಆಗಿ ನೋಡಿದಾಗ ಅಬ್ಬಾ ಇವರೂ ಅಷ್ಟೆಲ್ಲಾ ಮಾಡಲು ಸಾಧ್ಯನಾ ಎನ್ನಿಸುವುದು ಉಂಟು. ಸತ್ಯ ಸೀರಿಯಲ್ನಲ್ಲಿ ಕಾರ್ತಿಕ್ ಅವರ ಪತಿಯಾದರೆ ರಿಯಲ್ ಲೈಫ್ನ ಪತಿಯ ಹೆಸರು ಅಭಿಷೇಕ್ ಕಾಸರಗೋಡು. ಪತಿಯ ಜೊತೆ ಆಗಾಗ್ಗೆ ಫೋಟೋಶೂಟ್, ರೀಲ್ಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಗೌತಮಿ.
ಅಂದಹಾಗೆ, ನಟಿ ಗೌತಮಿ ಅವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದರು. ಅವರಿಗೆ ಈಗ 31 ವರ್ಷ ವಯಸ್ಸು. ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ. ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆಪರೇಶನ್ ಅಲಮೇಲಮ್ಮ', 'ಮಾಯಾಬಜಾರ್', 'ಅನಂತು v/s ನುಸ್ರತ್' ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಕೆಲಸ ಕೂಡ ಮಾಡಿದ್ದಾರೆ.
2012ರ ಪ್ರಖ್ಯಾತ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ. ಮಾತ್ರವಲ್ಲದೇ ಪೊಲೀಸ್ ಪಾತ್ರಕ್ಕಾಗಿ ಟಫ್ ಎನ್ನುವ ಪೊಲೀಸ್ ಟ್ರೇನಿಂಗ್ ಕೂಡ ಪಡೆದಿದ್ದಾರೆ.