ಪ್ರಭಾವಿಗಳು ಆರೋಪಿಯಾದ್ರೆ ದಕ್ಷ ಪೊಲೀಸರಿಗೆ ಇದೇನಾ ಗತಿ? ಸತ್ಯಳ ಸ್ಥಿತಿಗೆ ಫ್ಯಾನ್ಸ್ ಹೇಳ್ತಿರೋದೇನು?
ರೇಪಿಸ್ಟ್‌ನನ್ನು ಎನ್‌ಕೌಂಟರ್ ಮಾಡಿರೋ ಸತ್ಯ ಅಮಾನತುಗೊಂಡಿದ್ದಾಳೆ. ದಕ್ಷ ಪೊಲೀಸರ ಕುರಿತು ಅಭಿಮಾನಿಗಳು ಹೇಳ್ತಿರೋದೇನು?
ಪ್ರಭಾವಿಗಳು ಕೊಲೆ, ಅತ್ಯಾಚಾರದಂಥ ಭಯಾನಕ ಕೇಸ್‌ಗಳಲ್ಲಿ ಆರೋಪಿಗಳಾದರೆ ಅವರ ಬಿಡುಗಡೆಗೆ ಯಾವ ಪರಿಯ ಒತ್ತಡ ಇರುತ್ತದೆ ಎನ್ನುವ ಸತ್ಯ ಬಹುತೇಕ ಎಲ್ಲರಿಗೂ ತಿಳಿದದ್ದೇ. ಇಂಥ ಸಂದರ್ಭಗಳಲ್ಲಿ ದಕ್ಷರು ಎನಿಸಿಕೊಂಡಿರುವ ಪೊಲೀಸರು ಕೂಡ ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತುಕೊಳ್ಳುವ ಘಟನೆಗಳೂ ನಡೆಯುತ್ತವೆ. ಕೆಲವೊಂದು ಕೇಸ್‌ಗಳು ಮೀಡಿಯಾ ಅಟೆನ್ಷನ್ ಪಡೆದು ಭಾರಿ ಮಟ್ಟದಲ್ಲಿ ಸದ್ದು ಮಾಡಿದರೆ ಅಂಥ ಕೇಸ್‌ಗಳಲ್ಲಿ ಏನೂ ಮಾಡಲು ಪ್ರಭಾವಿಗಳಿಗೆ ಸಾಧ್ಯವಾಗುವುದಿಲ್ಲ ಎನ್ನುವುದು ಸತ್ಯವಾದರೂ, ದಕ್ಷ ಪೊಲೀಸರ ಸಂಕಟ ಅವರಿಗೇ ಗೊತ್ತು. ಅದೇ ಇನ್ನೊಂದೆಡೆ ಕೋರ್ಟ್‌ಗಳಲ್ಲಿ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದರೆ ಸೂಕ್ತ ಸಾಕ್ಷ್ಯಾಧಾರಗಳು ಬೇಕು. ಸಾಕ್ಷ್ಯಾಧಾರಗಳನ್ನು ನಾಶ ಮಾಡುವಲ್ಲಿ ಈ ಪ್ರಭಾವಿಗಳು ಯಶಸ್ವಿಯಾಗಿಬಿಟ್ಟರೆ ಅಲ್ಲಿಗೆ ಕೇಸ್ ಟುಸ್ ಆದಂತೆ, ಕೋರ್ಟ್‌ಗಳೂ ಏನೂ ಮಾಡಲು ಆಗುವುದಿಲ್ಲ.
ಇದೀಗ ಇದನ್ನೇ ತೋರಿಸಿರೋ ಸತ್ಯ ಸೀರಿಯಲ್ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್‌ನಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸತ್ಯ ಅಮಾನತುಗೊಂಡಿದ್ದಾಳೆ. ಇದಕ್ಕೆ ಕಾರಣ ಎನ್‌ಕೌಂಟರ್! ರೇಪಿಸ್ಟ್ ಒಬ್ಬನ ಎನ್‌ಕೌಂಟರ್ ಮಾಡಿದ್ದಾಲೆ ಸತ್ಯ. ಸತ್ಯಳ ಮಾವನ ಅತ್ಯಂತ ಆತ್ಮೀಯ ಸ್ನೇಹಿತನ ಮಗ ಯುವತಿಯೊಬ್ಬಳ ಅತ್ಯಾಚಾರ ಮಾಡಿದ್ದ. ಆಕೆ ಪೊಲೀಸ್ ಕಾನ್ಸ್ಟೆಬಲ್ ಮಗಳು. ಅವಳಿಗೆ ನ್ಯಾಯ ಕೊಡಿಸಲು ಸತ್ಯ ಎಲ್ಲ ರೀತಿ ಪ್ರಯತ್ನ ಮಾಡಿದಳು. ಭಾರಿ ಶ್ರೀಮಂತನಾಗಿರುವ ಆರೋಪಿಯ ಅಪ್ಪ, ತನ್ನದೇ ಪ್ರಭಾವ ಬಳಸಿ ಬೇರೆ ಬೇರೆ ರೀತಿಯಲ್ಲಿ ಕೇಸ್ ಮುಚ್ಚಿಹಾಕುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಆದರೆ ನೀಚ ಅತ್ಯಾಚಾರಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಸಿಗದೇ ಕೋರ್ಟ್‌ನಲ್ಲಿ ಅವನಿಗೆ ಶಿಕ್ಷೆ ಆಗುವುದಿಲ್ಲ. ಸಂತ್ರಸ್ತೆಗೆ ನ್ಯಾಯ ಕೊಡಿಸಲು ಆಗಲಿಲ್ಲ ಎನ್ನುವ ಕೊರಗು ಸತ್ಯಳದ್ದು.
ಶ್ರೀರಸ್ತು ಶುಭಮಸ್ತು ತಾರೆಯರಿಂದ ಭರ್ಜರಿ ಪಾರ್ಟಿ: ಹಳೆ ಶಾರ್ವರಿಗೆ ಒಂದೇ ಸಮನೆ ಬೈತಿರೋ ಅಭಿಮಾನಿಗಳು!
ಕೊನೆಗೆ, ರೇಪಿಸ್ಟ್ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಸತ್ಯ ಆತನ ಮೇಲೆ ಶೂಟ್ ಮಾಡಿ ಎನ್‌ಕೌಂಟರ್ ಮಾಡಿದ್ದಾಳೆ. ಆ ಮಟ್ಟಿಗೆ ಸಂತ್ರಸ್ತೆಗೆ ನ್ಯಾಯ ಒದಗಿಸಿರುವ ಸಂತೃಪ್ತಿ ಅವಳಿಗೆ. ಆದರೆ ಇದೇ ವಿಷಯವಾಗಿ ಸತ್ಯಳನ್ನು ಅಮಾನತು ಮಾಡಲಾಗಿದೆ. ಅವಳ ಜೊತೆ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅಮಾನತು ಮಾಡಲಾಗಿದೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡುತ್ತಿದ್ದಂತೆಯೇ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಇದು ನಿಜ ಜೀವನದ ಕಥೆಯೇ ಅಲ್ವೆ? ದಕ್ಷ ಪೊಲೀಸ್ ಅಧಿಕಾರಿಯಾಗಿ ಬಾಳೋದು ತುಂಬಾ ಕಷ್ಟ ಎಂದು ಹಲವರು ಹೇಳುತ್ತಿದ್ದಾರೆ. ಅಪರಾಧಿಗಳು ಏನೇನೋ ಕಾರಣದಿಂದ ತಪ್ಪಿಸಿಕೊಳ್ಳುತ್ತಾರೆ, ಆದರೆ ಸತ್ಯಳಂಥ ದಕ್ಷ ಅಧಿಕಾರಿಗಳು ಇದ್ದರೂ ಅವರಿಗೆ ಇಂಥ ಶಿಕ್ಷೆ, ಇದ್ಯಾವ ನ್ಯಾಯ ಎಂದು ಪ್ರಶ್ನಿಸುತ್ತಿದ್ದಾರೆ. ಇದು ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ ಎನ್ನುತ್ತಿದ್ದಾರೆ.
ಅಷ್ಟಕ್ಕೂ ಸತ್ಯ ಸೀರಿಯಲ್‌ನಲ್ಲಿ ನಾಯಕಿ ಸತ್ಯ ಎಲ್ಲಾ ಅಡೆತಡೆಗಳನ್ನು ಎದುರಿಸಿ, ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದಾಳೆ. ಗಂಡ, ಅತ್ತೆ ಸೇರಿದಂತೆ ಯಾರಿಗೂ ಈಕೆಯನ್ನು ಕಂಡರೆ ಆರಂಭದಲ್ಲಿ ಆಗುತ್ತಿರಲಿಲ್ಲ. ಆದರೆ ಈಗ ಎಲ್ಲರಿಗೂ ಸತ್ಯ ಎಂದರೆ ಪಂಚಪ್ರಾಣ. ಸೊಸೆಯನ್ನು ಕಂಡರೆ ಉರಿದು ಬೀಳುತ್ತಿದ್ದ ಅತ್ತೆ ಸೀತಾ ಕೂಡ ಸೊಸೆಯನ್ನು ಮಗಳಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದಾಳೆ. ಒಂದು ಹಂತದಲ್ಲಿ ಸತ್ಯ ಕುಟುಂಬದ ಒತ್ತಾಸೆಗಾಗಿ ಇನ್ಸ್‌ಪೆಕ್ಟರ್ ಹುದ್ದೆ ಬಿಡಲು ರೆಡಿಯಾದಾಗ ಅತ್ತೆಯೇ ಆಕೆಯ ಮನವೊಲಿಸಿ ಈ ಹುದ್ದೆಯಲ್ಲಿ ಮುಂದುವರೆಯುವಂತೆ ಹೇಳಿದ್ದಾಳೆ. ನಿನ್ನಂಥ ಇನ್ಸ್‌ಪೆಕ್ಟರ್ ಇದ್ದರೆ ಪೊಲೀಸ್ ಇಲಾಖೆ ಗೌರವ ಹೆಚ್ಚುತ್ತದೆ ಎನ್ನುತ್ತಲೇ ಸೊಸೆಯನ್ನು ಹುರಿದುಂಬಿಸುತ್ತಿದ್ದಾಳೆ.
ಸತ್ಯ ಸೀರಿಯಲ್ ದಿವ್ಯಾ-ಬಾಲಾ ದಂಪತಿ ಸಕತ್ ರೀಲ್ಸ್: ನಖರಾ ಬಿಟ್ಟು ಗಂಡನ ಜೊತೆ ಬಾಳು ಎಂದ ಫ್ಯಾನ್ಸ್