Asianet Suvarna News Asianet Suvarna News

ಗಂಡಸ್ರಿಗೆ ಹೆಂಡ್ತಿಗಿಂತ ಬೇರೆಯವಳೇ ಬುದ್ಧಿವಂತೆ ಅನಿಸತ್ತಂತೆ! ಸತ್ಯ ಸೀರಿಯಲ್​ ಲಕ್ಷ್ಮಣ ಹೇಳ್ತಿರೋದೇನು?

 ಹೆಂಡತಿಗಿಂತ ಹೊರಗಡೆಯಿರುವ ಬೇರೆಯವಳೇ ಬುದ್ಧಿವಂತೆ ಅನಿಸತ್ತೆ ಎಂದಿದ್ದಾನೆ ಸತ್ಯ ಸೀರಿಯಲ್​ ಲಕ್ಷ್ಮಣ. ಇದರ ಬಗ್ಗೆ ವೀಕ್ಷಕರು ಹೇಳ್ತಿರೋದೇನು?
 

Sathya serial Lakshmana comparing  wife with other ladies netizens reacts suc
Author
First Published Jan 11, 2024, 5:01 PM IST | Last Updated Jan 11, 2024, 5:01 PM IST

ಈ ಗಂಡಸರಿಗೆ ತಮ್ಮ ಹೆಂಡತಿಗಿಂತ ಹೊರಗೆ ಸಿಗೋ ಹೆಣ್ಣೇ ಬುದ್ಧಿವಂತೆ ಅನಿಸತ್ತೆ. ಇದೇ ಕಾರಣಕ್ಕೆ ನಾನೂ ಇಷ್ಟೊಳ್ಳೆ ಪತ್ನಿ ಇದ್ರೂ ಬೇರೊಬ್ಬಳ ಸಹವಾಸ ಮಾಡಿದೆ. ಅವಳನ್ನು ಮದ್ವೆಯಾದೆ ಅಂತ ಸತ್ಯ ಸೀರಿಯಲ್​ ಲಕ್ಷ್ಮಣ ಹೇಳ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸತ್ಯ ಸೀರಿಯಲ್​ನಲ್ಲಿ ಈ ಒಂದು ಡೈಲಾಗ್​ ಇದ್ದು, ಇದೀಗ ಇದರ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಸಂಪ್ರದಾಯಸ್ಥ ಕುಟುಂಬದ ಲಕ್ಷ್ಮಣ ಮನೆಯಲ್ಲಿ ಒಳ್ಳೆಯ, ತುಂಬಾ ಪ್ರೀತಿ ಮಾಡುವ ಪತ್ನಿಯಿದ್ದರೂ, ವಯಸ್ಸಿಗೆ ಬಂದ ಮಗಳಿದ್ದರೂ ಇನ್ನೊಂದು ಮದುವೆಯಾಗಿ,  ಪುಟ್ಟ ಮಗುವಿನ ತಂದೆ ಕೂಡ ಆಗಿದ್ದಾನೆ! ಇಷ್ಟು ವರ್ಷ ಮುಚ್ಚಿಟ್ಟ ಈ ಸತ್ಯ ಇದೀಗ ಬಯಲಾಗಿದೆ. ಎರಡನೆಯ ಪತ್ನಿ ಪದ್ಮಾ ಮತ್ತು ಆಕೆಯ ಮೂಕ ಮಗ ಇಬ್ಬರೂ ತುಂಬಾ ಒಳ್ಳೆಯವರೇ. ಅವರು ಕೂಡ ಲಕ್ಷ್ಮಣ ಮನೆ ಸೇರಿದ್ದಾರೆ. ಲಕ್ಷ್ಮಣ ಮತ್ತು ಪದ್ಮಾಳ ಸಂಬಂಧ ಮನೆಯಲ್ಲಿದ್ದ ಎಲ್ಲರಿಗೂ ತಿಳಿದುಬಿಟ್ಟಿದೆ. ಲಕ್ಷ್ಮಣನ ಪತ್ನಿ ಊರ್ಮಿಳಾ ಒಬ್ಬಳಿಗೇ ತಿಳಿಯುವುದು ಬಾಕಿ ಇದೆ.

ಈ ನಡುವೆಯೇ, ಕೋಟೆ ಮನೆಯ ಮಾನ ಕಾಪಾಡುವ ನಿಟ್ಟಿನಲ್ಲಿ ಪದ್ಮಾ ಮತ್ತು ಆಕೆಯ ಮಗನನ್ನು ತಮ್ಮ ಮನೆಗೇ ಕರೆದುಕೊಂಡು ಬಂದಿದ್ದಾರೆ ಸತ್ಯ ಮತ್ತು ಆಕೆಯ ಮಾವ. ಮೊದಲಿಗೆ ಇವರಿಬ್ಬರಿಗೇ ಗೊತ್ತಿದ್ದ ಗುಟ್ಟು ಈಗ ಲಕ್ಷ್ಮಣನ ಪತ್ನಿ ಬಿಟ್ಟು ಎಲ್ಲರಿಗೂ ತಿಳಿದಿದೆ. ಸೀತಾಳ ಅತ್ತೆಗೆ ವಿಷಯ ತಿಳಿದು ಸತ್ಯಳ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಅದೇ ಇನ್ನೊಂದೆಡೆ ಅತ್ತಿಗೆ ಸತ್ಯನ ಮೇಲೆ ಪ್ರಾಣನೇ ಇಟ್ಟಿದ್ದ ಲಕ್ಷ್ಮಣ ಮಗಳು ಕೂಡ ಸತ್ಯ ಮೋಸ ಮಾಡಿದಳು ಎಂದೇ ಅಂದುಕೊಂಡಿದ್ದಾಳೆ. ಪದ್ಮಾಳನ್ನು ಮನೆಯಿಂದ ಹೊರಗೆ ಹಾಕುವ ಅತ್ತೆಯನ್ನು ಸತ್ಯಳೇ ತಡೆದಿದ್ದು, ಕೋಟೆ ಮನೆಯಿಂದ ಯಾರಿಗೂ ಮೋಸ ಆಗಬಾರದು ಎನ್ನುತ್ತಿದ್ದಾಳೆ. ಆದರೆ ತನ್ನ ತಂಗಿಯ ಬಾಳು ಹಾಳಾಗುತ್ತಿರುವುದನ್ನು ನೋಡಲಾಗದ ಸತ್ಯಳ ಅತ್ತೆ ಸೀತಾ ಮಾತ್ರ ಸೊಸೆಯ ವಿರುದ್ಧ ಕಿಡಿ ಕಾರುತ್ತಿದ್ದು, ಪದ್ಮ ಮತ್ತು ಮಗನನ್ನು ಹೊರಗೆ ಹಾಕುವಂತೆ ಹೇಳುತ್ತಿದ್ದಾಳೆ.
ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್​ಬಾಸ್​ ಡ್ರಾಮಾಕ್ವೀನ್ ​ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್​ ಹೇಳಿಕೆ!

ಇದೀಗ ಮನೆಯವರಿಗೆಲ್ಲರಿಗೂ ಸತ್ಯ ತಿಳಿದಾಗ, ಲಕ್ಷ್ಮಣನ ಪತ್ನಿಯಿಂದ ಇನ್ನು ಮುಂದೆ ಈ ಸತ್ಯ ಮುಚ್ಚಿಟ್ಟು ಪ್ರಯೋಜನವಿಲ್ಲ ಎಂದುಕೊಂಡ ಸತ್ಯ, ಇದನ್ನು ಪತ್ನಿ ಊರ್ಮಿಳಾಳಿಗೆ ತಿಳಿಸುವಂತೆ ಲಕ್ಷ್ಮಣನ ಮನಸ್ಸು ಓಲೈಕೆ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ, ಲಕ್ಷ್ಮಣ  ಗಂಡಸ್ರಿಗೆ ಹೆಂಡ್ತಿಗಿಂತ ಬೇರೆಯವಳೇ ಬುದ್ಧಿವಂತೆ ಅನಿಸತ್ತೆ. ಇದೇ ಕಾರಣಕ್ಕೆ ನಾನು ಪದ್ಮಾ ಜೊತೆ ಪ್ರೀತಿಯಲ್ಲಿ ಬಿದ್ದೆ ಎನ್ನುತ್ತಾರೆ. ಈ ಮಾತು ಇದೀಗ ಬಹಳ ಚರ್ಚೆಗೆ ಗ್ರಾಸವಾಗಿದೆ.

ಈ ಮಾತು ಕೇಳಿ ಕೆಲವು ಗಂಡಸರು ಗರಂ ಕೂಡ ಆಗಿದ್ದಾರೆ. ಇದು ಒಪ್ಪುವಂಥ ಮಾತಲ್ಲ ಎಂದಿದ್ದರೆ, ಇನ್ನು ಕೆಲವರು, ಇದು ಗಂಡಸರಿಗೆ ಮಾತ್ರ ಅನ್ವಯ ಆಗುವುದಿಲ್ಲ, ಕೆಲವು ಹೆಂಗಸರಿಗೂ ಅನ್ವಯ ಆಗುತ್ತದೆ. ಹೀಗೆ ಕೇವಲ ಪುರುಷ ದ್ವೇಷಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಪ್ರೀತಿಗೆ ಕಣ್ಣಿಲ್ಲ ಎನ್ನುವಂತೆ ಲಕ್ಷ್ಮಣ ಕೂಡ ಬೇರೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನಷ್ಟೇ. ಹೀಗೆ ಸಮಾಜದಲ್ಲಿ ಹಲವಾರು ಕೇಸ್​ ನೋಡಬಹುದು. ಆದರೆ ಪುರುಷರಿಗೆ ತಮ್ಮ ಮೇಲೆ ನಿಯಂತ್ರಣವಿರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ನನಗೆ ಯಾರೂ ಸಿಗಲೇ ಇಲ್ವಲ್ಲಾ ಅಂತ ಕಾಲೆಳೆಯುತ್ತಿದ್ದಾರೆ ಕೂಡ. ಒಟ್ಟಿನಲ್ಲಿ ಬುದ್ಧಿವಂತೆ ಹೆಣ್ಣಿನ ಜೊತೆ ಸಂಬಂಧ ಬೆಳೆಸಿದ ಲಕ್ಷ್ಮಣನ ಕಥೆ ಏನಾಗುತ್ತದೋ ನೋಡಬೇಕು.

ಯಶ್​ ಜೊತೆ ಟಾಕ್ಸಿಕ್​ನಲ್ಲಿ ಕರೀನಾ ಕಪೂರ್​ ನಟಿಸ್ತಾ ಇರೋದು ನಿಜನಾ? ನಟಿ ನೀಡಿದ ಅಪ್​ಡೇಟ್​ ಏನು?


 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios