Asianet Suvarna News Asianet Suvarna News

ಮಗನ ಹೊಡೆದು, ಚಪ್ಪಲಿ ಎಸೆದ ಬಿಗ್​ಬಾಸ್​ ಡ್ರಾಮಾಕ್ವೀನ್ ​ಅಂಕಿತಾ ಲೋಖಂಡೆ ಅತ್ತೆಯಿಂದ ಶಾಕಿಂಗ್​ ಹೇಳಿಕೆ!

ಬಿಗ್​ಬಾಸ್​ನಲ್ಲಿ ಸದಾ ಹಲ್​ಚಲ್​ ಸೃಷ್ಟಿಸುತ್ತಿರುವ ಅಂಕಿತಾ ಲೋಖಂಡೆ ಕುರಿತು ಅವರ ಅತ್ತೆ ರಂಜನಾ ಹೇಳಿದ್ದೇನು? 
 

Ankita Lokhandes mother in law Ranjana about Ankita Jain who is always creating a stir in Bigg Boss suc
Author
First Published Jan 11, 2024, 12:55 PM IST

ನಟ ಸುಶಾಂತ್​ ಸಿಂಗ್​ ಅವರ ಪ್ರೇಯಸಿಯಾಗಿದ್ದ ಅಂಕಿತಾ ಲೋಖಂಡೆ ಮೊದಲಿನಿಂದಲೂ ಸುದ್ದಿಯಲ್ಲಿ ಇರುವವರೇ. ಇದೀಗ ಬಿಗ್​ಬಾಸ್​ ಮನೆಗೆ ಹೋದ ಮೇಲಂತೂ ಅವರು ಮತ್ತು ಪತಿ ವಿಕ್ಕಿ ಜೈನ್​ ಡ್ರಾಮಾ ಅಷ್ಟಿಷ್ಟಲ್ಲ. ಸುಶಾಂತ್ ಸಿಂಗ್​ಗೆ ಕೈಕೊಟ್ಟವರು ಎಂದೇ ಖ್ಯಾತಿ ಪಡೆದಿರುವ ಅಂಕಿತಾ ನಂತರ ವಿಕ್ಕಿ ಜೈನ್​ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್​ಬಾಸ್​ 17ನ ಒಳಗೆ ಹೋಗಿದೆ.  ಪ್ರತಿದಿನವೂ ಹಲ್​ಚಲ್​ ಸೃಷ್ಟಿಸುವ ಮೂಲಕ ಅಸಭ್ಯ, ಅಶ್ಲೀಲ ವರ್ತನೆಗಳಿಂದ ಬಿಗ್​ಬಾಸ್​ನ ಟಿಆರ್​ಪಿ ಹೆಚ್ಚಿಸುತ್ತಿದೆ.  ಈ ಸಲದ ಹಿಂದಿ ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡುತ್ತಿದ್ದಾರೆ. ಒಂದು ಹಂತದಲ್ಲಿ ಅಂಕಿತಾ ಪತಿಯ ಮೇಲೆ ಚಪ್ಪಲಿ ಕೂಡ ಎಸೆದಿದ್ದಾರೆ.

ಇದೀಗ ವಿಕ್ಕಿ ಜೈನ್​ ಅವರ ತಾಯಿ ರಂಜನಾ ಅವರು ತಮ್ಮ ಸೊಸೆಯ ಕುರಿತು ಕೆಲವೊಂದು ಶಾಕಿಂಗ್​ ಹೇಳಿಕೆಗಳನ್ನು ನೀಡಿದ್ದಾರೆ.  ಅದರಲ್ಲಿ ಮೊದಲನೆಯದ್ದು ಅಂಕಿತಾ ಮತ್ತು ವಿಕ್ಕಿ ಅವರ ಮದುವೆಯ ಕುರಿತಾದದ್ದು ಆಗಿದೆ. ಅಂಕಿತಾ ಮತ್ತು ವಿಕ್ಕಿಗೆ 2021ರಲ್ಲಿ ವಿವಾಹವಾಗಿತ್ತು. ಆದರೆ, ಅವರು ಜತೆಯಲ್ಲಿ ಇಲ್ಲ. ಇದೀಗ ಮತ್ತೆ ಈ ಸಂಬಂಧ ಮುಂದುವರೆಯುವ ಸೂಚನೆ ಇದೆ. ಇದೇ ವಿಷಯದ ಕುರಿತು ರಂಜನಾ ಅವರು  ಮಾತನಾಡಿದ್ದಾರೆ. ಸುಶಾಂತ್​ ಸಿಂಗ್​ ಪ್ರೇಯಸಿಯಾಗಿದ್ದ ಅಂಕಿತಾ ಜೊತೆ ತಮ್ಮ ಮಗನ ಮದುವೆ ಮಾಡುವ ಇಷ್ಟವಿರಲಿಲ್ಲ ಎಂದು ರಂಜನಾ ಹೇಳಿದ್ದಾರೆ. ಈ ಮದುವೆಗೆ ನಮ್ಮ ಸಪೋರ್ಟ್​ ಇರಲಿಲ್ಲ. ಈಗಲೂ ಈ ಮದುವೆ ಇಷ್ಟವಿಲ್ಲ. ಆದರೆ ವಿಕ್ಕಿ ಅವಳ ಜೊತೆಗಿನ ಸಂಬಂಧವನ್ನು ಮುಂದುವರೆಸಲು ಸಿದ್ಧನಾಗಿರುವ ಕಾರಣ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಈ ಸಂಬಂಧ ಮುಂದುವರೆಸುವುದು ಬಿಡುವುದು ಅವನಿಗೆ ಬಿಟ್ಟಿದ್ದು ಎಂದಿದ್ದಾರೆ.  

ಬಿಗ್​ಬಾಸ್​ನಲ್ಲಿ ಪತಿಗೆ ಚಪ್ಪಲಿ ಎಸೆದು, ಈಗ ಮುದ್ದಾಡ್ತಿರೋ ಅಂಕಿತಾ: ಥೂ ನಿನ್​ ಜನ್ಮಕ್ಕೆ ಅಂತಿದ್ದಾರೆ ನೆಟ್ಟಿಗರು!
 
ಇದೇ ವೇಳೆ, ಪದೇ ಪದೇ ಅಂಕಿತಾ ಸುಶಾಂತ್​ ಸಿಂಗ್​ ಅವರ ಹೆಸರನ್ನು ಪ್ರಚಾರಕ್ಕಾಗಿ ಬಳಸುತ್ತಿರುವ ಬಗ್ಗೆ ರಂಜನಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಂಕಿತಾ ಸುಶಾಂತ್​ ಹೆಸರನ್ನು  ಬಿಗ್‌ಬಾಸ್​ನಲ್ಲಿ ಸಿಂಪಥಿ ಗಳಿಸಲು ಬಳಸುತ್ತಿರುವುದು ಸರಿಯಾದ ಕ್ರಮವಲ್ಲ. ಈಗ ಅವರಿಗೆ ವಿಕ್ಕಿ ಜೊತೆ ಮದುವೆಯಾಗಿದೆ. ಹೀಗಿರುವಾಗ ಸತ್ತವನ ಹೆಸರನ್ನು ಪದೇ ಪದೇ ಬಳಸಿ ಸಿಂಪಥಿ ಗಳಿಸುವುದರಲ್ಲಿ ಅರ್ಥವಿಲ್ಲ. ಸುಶಾಂತ್​ ಬದುಕಿದ್ದಾಗ ಎಲ್ಲರ ಪ್ರೀತಿ ಗಳಿಸಿದ ವ್ಯಕ್ತಿ. ಆದರೆ ಇದೀಗ ಇವಳು ಹೀಗೆ ಅವನ ಹೆಸರನ್ನು ಬಳಸುತ್ತಿರುವುದು ಮುಜುಗರ ತರುತ್ತಿದೆ ಎಂದಿದ್ದಾರೆ.
 
ಅಂತೆಯೇ, ಪಿಂಕ್‌ವಿಲ್ಲಾ ಜೊತೆ ನೀಡಿದ ಸಂದರ್ಶನದಲ್ಲಿ ರಂಜನಾ ಅವರು, ತಮ್ಮ ಮಗನ ಮೇಲೆ ಸೊಸೆ ಚಪ್ಪಲಿ ಎಸೆದಿದ್ದುದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇದು ತಮಾಷೆಗಾಗಿ ಎಂದು ಅವಳು ಹೇಳಿಕೆ ಕೊಟ್ಟಿದ್ದಾಳೆ.  ಇದು ಯಾವ ರೀತಿಯ ತಮಾಷೆ ಎಂದು ನನಗೆ ಗೊತ್ತಾಗುತ್ತಿಲ್ಲ.  ಗಂಡನಿಗೆ ಚಪ್ಪಲಿ ಎಸೆಯುವುದು ಯಾವ ಪತ್ನಿಗಾದರೂ ತಮಾಷೆ ಎನ್ನಿಸುತ್ತಾ ಎಂದು ಪ್ರಶ್ನಿಸಿದ್ದಾರೆ.  ಈ ಹಿಂದೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಕೂಡ ಅವರು  ಮಗ ಮತ್ತು ಸೊಸೆಯ ನಡುವಿನ ಜಗಳದ ಕುರಿತು ಮಾತನಾಡಿದ್ದರು. ಆಗ  ಅಂಕಿತಾ, ವಿಕ್ಕಿ ಜೈನ್‌ಗೆ ಹೊಡೆದ ವಿಡಿಯೋ ವೈರಲ್‌ ಆಗಿತ್ತು. ಇದು ತುಂಬಾ ದುಃಖಕರ ಸಂಗತಿ ಎಂದಿದ್ದರು.

ಪುಷ್ಪಾ ಶೂಟಿಂಗ್​ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್​ ಕೊಟ್ಟ ರಣಬೀರ್​- ವಿಡಿಯೋ ವೈರಲ್
 
ಇದೇ ವೇಳೆ ಸೊಸೆಗೆ ಬುದ್ಧಿಮಾತನ್ನೂ ಹೇಳಿರುವ ರಂಜನಾ ಅವರು,  ನಾನು ಅಂಕಿತಾಳಿಗೆ ಕೆಲವೊಂದು ವಿಷಯಗಳನ್ನು ಹೇಳಲು ಬಯಸುತ್ತೇನೆ.  ಅವಳು ಬುದ್ಧಿವಂತಿಕೆಯಿಂದ ಮಾತನಾಡಬೇಕು. ಮಾತನಾಡುವ ವಿಷಯದ ಕುರಿತು ಗಮನ ಇರಬೇಕು. ತನ್ನ ಗಂಡನನ್ನು ಗೌರವಿಸಲು ಆರಂಭಿಸಬೇಕು. ಮದುವೆಯಾದ ನಂತರ ಕುಟುಂಬದ ಬಗ್ಗೆ ಮರೆಯಬಾರದು ಎಂದಿದ್ದಾರೆ. 
 

Follow Us:
Download App:
  • android
  • ios