Seetharaama serial: ಸಂಕ್ರಾಂತಿಯಂದು ರಾಮನ ತೋಳಲ್ಲಿ ಕಬ್ಬಿನ ಜಲ್ಲೆಯಂಥಾ ಹುಡುಗಿ!

ಸೀತಾರಾಮ ಸೀರಿಯಲ್‌ ಟೀಮ್ ಸಂಕ್ರಾಂತಿ ಹಬ್ಬಕ್ಕೆ ವೀಕ್ಷಕರ ಮೊಗದಲ್ಲಿ ನಗು ಅರಳಿಸುವಂಥಾ ಎಪಿಸೋಡ್ ಪ್ರಸಾರ ಮಾಡ್ತಿದೆ. ಈ ಸೀರಿಯಲ್‌ ಕಬ್ಬಿನ ಜಲ್ಲೆಯಂಥಾ ಹುಡುಗಿ ಸೀತಾ ರಾಮನ ತೋಳಲ್ಲಿದ್ದಾಳೆ. ಅಷ್ಟಕ್ಕೂ ನಡೆದದ್ದೇನು?

Sankrathi special episode in seetharaama serial of Zee kannada ani

ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ ಟೀಮ್ ಸಹ ಸಖತ್ ಜೋಷ್‌ನಲ್ಲಿ ಹಬ್ಬದ ಸಿಹಿ ಪೊಂಗಲ್ ವೀಕ್ಷಕರ ಬಾಯಿಗಿಡಲು ಮುಂದಾಗಿದೆ. ಸೀತಾರಾಮ ಸೀರಿಯಲ್ಲಿನಲ್ಲಿ ಚೆಂದದೊಂದು ರೊಮ್ಯಾಂಟಿಕ್ ಸೀನ್ ತಂದು ಕಚಗುಳಿ ಇಡುತ್ತಿದೆ. ಹೌದು ಶ್ರೀ ರಾಮ್ ದೇಸಾಯಿ ಸೀತಾಳ ಸಿಟ್ಟು, ನೋವಿಗೆ ಮಮ್ಮಲ ಮರುಗಿದ್ದ. ಎಲ್ಲರೂ ಹಬ್ಬದ ಖುಷಿಯಲ್ಲಿರುವಾಗ ತಾನು ಮಾತ್ರ ಬೇಸರದಿಂದ ಸಮಯ ದೂಡುತ್ತಿದ್ದ. ಆದರೆ ರಾಮನ ನಿಷ್ಕಲ್ಮಶ ಮನಸ್ಸಿಗೆ ವಿಧಿಗೇ ಇನ್ನು ಆಟ ಆಡಿಸೋದು ಸಾಕು ಅಂತನ್ನಿಸಿರಬೇಕು. ಸಂಕ್ರಾಂತಿ ದಿನ ರಾಮನ ಮುಖದಲ್ಲಿ ನಗು ಮೂಡೋ ಹಾಗೆ ಮಾಡಿದೆ.

ಜೀ ಕನ್ನಡ 'ಸೀತಾರಾಮ' ಧಾರಾವಾಹಿ ಸಿಕ್ಕಾಪಟ್ಟೆ ಇಷ್ಟವಾಗುತ್ತಾ ಇದೆ. ಸೀತಾ-ರಾಮ ಇಬ್ಬರ ಬಾಂಡಿಂಗ್ ಪ್ರೇಕ್ಷಕರಿಗೆ ಖುಷಿ ಕೊಡುತ್ತಿದೆ. ಅದರಲ್ಲೂ ಸಿಹಿ ಮಾತನ್ನು ಯಾರೂ ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಸಿಹಿ ಅಷ್ಟು ಕ್ಯೂಟ್ ಡಾಲ್. ಇಡೀ ಧಾರಾವಾಹಿಯಲ್ಲಿ ಮನಸ್ಸಿಗೆ ಖುಷಿ ಕೊಡುವುದು ಸಿಹಿ. ಎಲ್ಲರ ಮನೆಯ ಮಗಳೇ ಆಗಿ ಹೋಗಿದ್ದಾಳೆ. ರಾಮ-ಸೀತಾ ಆಫೀಸಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಸಾಮಾನ್ಯ ಎಂಪ್ಲಾಯ್ ಆಗಿದ್ದ ಕಾರಣ ಸೀತಾ- ರಾಮ್ ಜೊತೆಗೆ ಫ್ರೆಂಡ್ ಆಗಿದ್ದಳು. ಜೊತೆಗೆ ಸಿಹಿ ಇವರಿಬ್ಬರ ಫ್ರೆಂಡ್ಶಿಪ್ ಎಂಬ ಸೇತುವೆ ಗಟ್ಟಿಯಾಗಲೂ ಕಾರಣವಾಗಿದ್ದಳು. ಆದರೆ, ಈಗ ಮುಚ್ಚಿಟ್ಟ ದೊಡ್ಡ ಸತ್ಯ ಬಟಾಬಯಲಾಗಿದೆ. ಸೀತಾಗೆ ಅರಗಿಸಿಕೊಳ್ಳುವುದಕ್ಕೆ ಆಗದಷ್ಟು ಆಘಾತವಾಗಿದೆ. ಮತ್ತೆ ಮನಸ್ಸನ್ನು ಸರಿ ಮಾಡಿಕೊಳ್ಳುವ ಮನಸ್ಸು ಮಾಡುವಂತೆ ಕಾಣುತ್ತಿಲ್ಲ.

ತಾಂಡವ್‌ಗೆ ಮಗಳಿದ್ದಾಳೆ, ಅಪ್ಪನಿಗೆ ಸತ್ಯ ಹೇಳಿದ ಶ್ರೇಷ್ಠಾ; ಮುಂದೆ ಕಾವ್ಯಾಗೆ ಕಾದಿದ್ಯಾ ಮಾರಿಹಬ್ಬ!?

ಸಿಹಿಗೆ ರಾಮ ಬೆಸ್ಟ್ ಫ್ರೆಂಡ್ (best friend) . ರಾಮ ತನ್ನ ಜೊತೆ ಹೇಗಿದ್ದಾನೆ ಎಂಬುವುದನ್ನಷ್ಟೇ ಸಿಹಿ ನೋಡಿವುದು‌. ತಾನೂ ಕಷ್ಟದಲ್ಲಿದ್ದಾಗೆಲ್ಲ ಕಾಪಾಡಿದ್ದಾನೆ ಎಂಬುದಷ್ಟೇ ಮುಖ್ಯ. ಅವನ ಶ್ರೀಮಂತಿಕೆ, ಸೀತಮ್ಮನ ಬಾಸ್ ಎಂಬುದೆಲ್ಲ ಅವಳಿಗೆ ಅರ್ಥವೂ ಆಗಿಲ್ಲ. ಅರ್ಥವಾದರೂ ಅದು ಬೇಕಾಗಿಲ್ಲ. ಹೀಗಾಗಿ ರಾಮ್ ಜೊತೆಗೆ ಮಾತನಾಡಬೇಕೆಂಬ ಹಠ ಮಾಡುತ್ತಿದ್ದಾಳೆ. ಆದರೆ, ಸೀತಾ ಅದಕ್ಕೆ ಕಡಿವಾಣ ಹಾಕುತ್ತಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ 'ಸೀತಾರಾಮ' ಧಾರಾವಾಹಿಯ ಪ್ರೋಮೋ ಬಿಡಲಾಗುತ್ತಿದೆ. ಆ ವಿಡಿಯೋಗಳಲ್ಲಿ ಸೀತಾ-ರಾಮನನ್ನು ನೆಗ್ಲೆಕ್ಟ್ ಮಾಡುತ್ತಿರುವುದು ಕಾಣಿಸುತ್ತಿದೆ. ಇದು ಫ್ಯಾನ್ಸ್‌ಗೆ (Fans) ಬೇಸರವನ್ನೇ ತರಿಸಿದೆ. "ರಾಮ್‌ದು ಯಾವುದೇ ತಪ್ಪಿಲ್ಲ. ರಾಮ್ ಬೇಕು ಅಂತ ಏನು ತಪ್ಪು ಮಾಡಿಲ್ಲ. ಸೀತಾ ಅದನ್ನು ಅರ್ಥ ಮಾಡಿಕೊಳ್ಳಬೇಕು. ರಾಮ್ ಮತ್ತು ಸೀತಾ ಮತ್ತೆ ಹೊಂದಾಗಬೇಕು" ಎಂದೇ ಬೇಡಿಕೆ ಇಡುತ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಇದೀಗ ಸೀತೆಯ ಎಲ್ಲ ಸಿಟ್ಟನ್ನೂ ವಿಧಿಯೇ ಕಡಿಮೆ ಮಾಡೋ ಸೂಚನೆ ಕಾಣ್ತಿದೆ. ಸಂಕ್ರಾಂತಿ ಹಬ್ಬದ (Pongal) ಹವಾ ಜೋರಾಗಿದೆ. ಇದರಲ್ಲಿ ಎಲ್ಲರು ಹಬ್ಬದ ಖುಷಿಯಲ್ಲಿ ಎಳ್ಳು ಬೆಲ್ಲ ತಿನ್ನುತ್ತಾ ಕಬ್ಬು ಜಗಿಯುತ್ತಾ ಗಾಳಿಪಟ ಹಾರಿಸುತ್ತ ಖುಷಿಯಲ್ಲಿದ್ದಾರೆ. ಆದರೆ ಸೀತಾ ಮಾತ್ರ ರಾಮನನ್ನು 'ಸರ್' ಎಂದು ಸಂಭೋದಿಸಿ ಗ್ಯಾಪ್ ಮೇಂಟೇನ್ ಮಾಡ್ತಿದ್ದಾಳೆ. 'ಹಬ್ಬಕ್ಕೆ ಎಲ್ಲರೂ ಖುಷಿಯಾಗಿದ್ದಾರೆ. ನನ್ನ ಲೈಫ್‌ (life) ಮಾತ್ರ ಹೀಗಿದೆ' ಎಂದು ರಾಮ ಹೇಳ್ತಿದ್ದಾನೆ. 'ನಿಮ್ಮ ಲೈಫಿನ ಸೂತ್ರ ನನ್ನ ಕೈಯಲ್ಲಿದೆ ಅನ್ನೋ ರೀತಿ ಮಾತಾಡ್ತಿದ್ದೀರಲ್ಲಾ..' ಅನ್ನೋ ಮಾತನ್ನು ಸೀತಾ ಹೇಳಿದರೆ ರಾಮನಿಗೆ ಅದು ನಿಜ ಆದರೂ ನಿಜ ಅನ್ನಲು ಮಾತು ಬರ್ತಿಲ್ಲ. ಆದರೆ ವಿಧಿಗೇ ಇವರಿಬ್ಬರ ನಡುವಿನ ಗ್ಯಾಪ್ ಇಷ್ಟವಿದ್ದ ಹಾಗಿಲ್ಲ. ಗಾಳಿಪಟ ಹಾರಿಸೋ ಸೀತಾಳನ್ನು ರಾಮನ ತೋಳಿಗೆ ಬೀಳಿಸಿ ಇಬ್ಬರೂ ರೊಮ್ಯಾಂಟಿಕ್ (romantic) ಮೂಡ್‌ಗೆ ಮರಳೋ ಹಾಗೆ ಮಾಡಿದೆ.

ದೇವಸ್ಥಾನ ಪ್ರವೇಶ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಜನಾಂಗದ ಇಂಟರೆಸ್ಟಿಂಗ್ ವಿಷ್ಯವಿದು!

Latest Videos
Follow Us:
Download App:
  • android
  • ios