ದೇವಸ್ಥಾನ ಪ್ರವೇಶ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಜನಾಂಗದ ಇಂಟರೆಸ್ಟಿಂಗ್ ವಿಷ್ಯವಿದು!

ರಾಮನ ದೇಗುಲದಲ್ಲಿ ಪ್ರವೇಶವೇ ನಿಷಿದ್ಧವೆಂದು ದೇಹವನ್ನೇ ರಾಮನ ಗುಡಿ ಮಾಡಿಕೊಂಡ ಈ ಜನಾಂಗದ ಕುತೂಹಲದ ಮಾಹಿತಿ ತೆರೆದಿಟ್ಟಿದ್ದಾರೆ ಡಾ.ಬ್ರೋ. 
 

This community made body the temple of Rama, who were  forbidden to enter the temple of Rama suc

ಅಯೋಧ್ಯೆಯ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಮಧ್ಯೆಯೇ ಎಲ್ಲೆಲ್ಲೂ ರಾಮನಾಮ ಜಪಿಸಲಾಗುತ್ತಿದೆ. ವಿದೇಶಿಗಳಲ್ಲಿಯೂ ಶ್ರೀರಾಮ ಪಠಣೆ ನಡೆದಿದೆ. ಆದರೆ ಯಾರ ಅರಿವಿಗೂ ಬಾರದೇ ಹುಟ್ಟಿನಿಂದಲೇ ಸಾಯುವವರೆಗೂ, ಸತ್ತ ಮೇಲೂ ಶ್ರೀರಾಮನ ಜಪವನ್ನೇ ಮಾಡುತ್ತಾ, ಇಡೀ ದೇಹವನ್ನೇ ಶ್ರೀರಾಮನ ದೇಗುಲ ಮಾಡಿಕೊಂಡ, ತಮ್ಮ ಸಂಪೂರ್ಣ ಆಸ್ತಿ ಸೇರಿದಂತೆ ಇಡೀ ಜೀವನವನ್ನೇ ಶ್ರೀರಾಮನಿಗಾಗಿ ಅರ್ಪಿಸಿದ ಕುತೂಹಲದ ಜನಾಂಗವೊಂದರ ಪರಿಯಚ ಮಾಡಿಸಿದ್ದಾರೆ ಡಾ.ಬ್ರೋ ಅರ್ಥಾತ್​ ಗಗನ್​. ಒಂದು ಕಾಲದಲ್ಲಿ ಶ್ರೀರಾಮನ ದೇಗುಲಕ್ಕೆ ಪ್ರವೇಶ ನಿಷೇಧ ಮಾಡಿದ ಕಾರಣದಿಂದ ಇಡೀ ದೇಹವನ್ನೇ ದೇವಸ್ಥಾನ ಮಾಡಿಕೊಂಡ ಜನಾಂಗವಿದು. ಉಳ್ಳವರು ಶಿವಾಲಯ ಮಾಡುವರಯ್ಯ... ಎನ್ನುವ ಬಸವಣ್ಣನವರ ವಚನಕ್ಕೆ ಅನ್ವರ್ಥವಾಗಿರುವ ಈ ಜನಾಂಗ ಎನ್ನುತ್ತಲೇ ಇವರ ಪರಿಚಯ ಮಾಡಿಸಿದ್ದಾರೆ ಡಾ.ಬ್ರೋ. 


ಅದುವೇ ರಾಮನಾಮಿ ಜನಾಂಗ. ಛತ್ತೀಸಗಢದಲ್ಲಿರುವ ಈ ಬುಡಕಟ್ಟು ಜನಾಂಗದವರ ಕುತೂಹಲದ ವಿಷಯಗಳನ್ನು ತೆರೆದಿಟ್ಟಿದ್ದಾರೆ ಗಗನ್​. ಭಾರತದಲ್ಲಿಯೂ ಅನೇಕ ಬುಡಕಟ್ಟುಗಳ ಜನರು ವಾಸಿಸುತ್ತಿದ್ದಾರೆ.  ಅದೆಷ್ಟೋ ನಿಗೂಢವಾಗಿರುವ ಬುಡಕಟ್ಟು ಜನರಿದ್ದಾರೆ. ಮುಖ್ಯ ವಾಹಿನಿಯಿಂದ ಬಹು ದೂರವಾಗಿರುವ ಈ ಜನರು ತಮ್ಮದೇ ಪ್ರಪಂಚದಲ್ಲಿ ಬದುಕುತ್ತಿದ್ದಾರೆ. ಇಂಥದ್ದೇ ಒಂದು  ಬುಡಕಟ್ಟಿನ ಪರಿಚಯ ಮಾಡಿಸಿದ್ದಾರೆ ಡಾ. ಬ್ರೋ.  ತಮ್ಮ ಜೀವನವನ್ನು ಸಂಪೂರ್ಣವಾಗಿ ಭಗವಾನ್ ರಾಮನಿಗೆ ಅರ್ಪಿಸಿದ ರಾಮನಾಮಿ ಕುಟುಂಬವಿದು. ಇನ್ನು ಈ ಬುಡಕಟ್ಟಿನ ಜನರ ದೇಹವು ರಾಮನ ಹೆಸರಿನ ಹಚ್ಚೆಗಳಿಂದಲೇ ತುಂಬಿ ಹೋಗಿವೆ. ಸುಮಾರು 150 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಇವರಿಗೆ ಪ್ರವೇಶ ನೀಡಲಿಲ್ಲ. ಆಗಿನಿಂದಲೂ ತಮ್ಮದೇ ಗುಡಿಯನ್ನು ಕಟ್ಟಿಕೊಂಡು ರಾಮನ ಜಪ ಮಾಡುತ್ತಿದ್ದಾರೆ. ಈ ದೇಗುಲಕ್ಕೆ  ಗೋಡೆ, ಬಾಗಿಲು ಯಾವುದೂ ಇಲ್ಲ. ಹಾಗೆಂದು ಇವರ ಪ್ರಾರ್ಥನೆ ನಿಲ್ಲುತ್ತಿಲ್ಲ. ಗುಡಿಯಷ್ಟೇ ಅಲ್ಲದೇ, ಶರೀರವನ್ನೇ ಶ್ರೀರಾಮನಿಗೆ ಅರ್ಪಿಸಿದ್ದಾರೆ. ಹುಟ್ಟಿನಿಂದ ಸಾಯುವವರೆಗೂ ಶ್ರೀರಾಮನ ಜಪ ಮಾಡುತ್ತಾರೆ. ಸತ್ತ ಮೇಲೆ ಸಮಾಧಿಯ ಮೇಲೆ ಶ್ರೀರಾಮನ ಹೆಸರು ಬರೆಸುತ್ತಾರೆ.   

ರಾಮ ಭಕ್ತರ ಆಸೆ ಕೊನೆಗೂ ಈಡೇರಿಸಿದ ಡಾ.ಬ್ರೋ: ರಾಮಲಲ್ಲಾ ಮಂದಿರದ ಮುಖ್ಯದ್ವಾರದಲ್ಲಿ ಗಗನ್​ ವಿವರಣೆ...

ಇದೇ ವೇಳೆ ಡಾ. ಬ್ರೋ. ಅವರು ಹಚ್ಚೆಹಾಕಿಸಿಕೊಳ್ಳುವ ವಿಧಾನ, ಬಳಸುವ ಸೂಜಿ ಎಲ್ಲವುಗಳ ಮಾಹಿತಿ ಈ ವಿಡಿಯೋದಲ್ಲಿ ನೀಡಿದ್ದಾರೆ. ಈ ಬುಡಕಟ್ಟಿನ ಬಗ್ಗೆ ಇನ್ನಷ್ಟು ತಿಳಿಯುತ್ತಾ ಹೋಗುವುದಾದರೆ, ಮೊಘಲರು ತಮ್ಮನ್ನು ರಾಮನಿಂದ ಬೇರ್ಪಡಿಸಲು ಪ್ರಯತ್ನಿಸಿದಾಗ, ಪ್ರತಿಯೊಬ್ಬರೂ ತಮ್ಮ ಇಡೀ ದೇಹದ ಮೇಲೆ ರಾಮನ ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಭಕ್ತಿಯನ್ನು ತೋರಿಸಿದ್ದಾರೆ ಎನ್ನಲಾಗುತ್ತದೆ. ಈ ಜನರು ನವಿಲು ಗರಿಗಳ ಕಿರೀಟವನ್ನು ಧರಿಸುತ್ತಾರೆ.ದಿನವಿಡೀ ಈ ಬುಡಕಟ್ಟಿನವರು ರಾಮನ ನಾಮವನ್ನು ಜಪಿಸುತ್ತಲೇ ಇರುತ್ತಾರೆ. ಆದರೆ ಇಂದು ಈ ಬುಡಕಟ್ಟಿನ ಇಂದಿನ ಯುವಕರು ಹೀಗೆ ಹಚ್ಚೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಸದದ್ಯ  ಬುಡಕಟ್ಟಿನಲ್ಲಿ ಕೇವಲ ಇಪ್ಪತ್ತರಿಂದ ಮೂವತ್ತು ಜನರು ಮಾತ್ರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವಕರು ತಮ್ಮ ಈ ಸಂಪ್ರದಾಯವನ್ನು ಉಳಿಸುತ್ತಿಲ್ಲ ಎನ್ನುವ ಕೊರಗು ಕೂಡ ಹಿರಿಯರದ್ದು.   

ಇದೇ ವಿಡಿಯೋದಲ್ಲಿ ಡಾ.ಬ್ರೋ ಅಯೋಧ್ಯೆಯಿಂದ 30 ಕಿಲೋ ಮೀಟರ್​ ದೂರ ಇರುವ ರಾಜಾ ದಶರಥ ಸಮಾಧಿಯ ಪರಿಚಯವನ್ನೂ ಮಾಡಿಸಿದ್ದಾರೆ. ಇದಾಗಲೇ ಅಯೋಧ್ಯೆಯ ಮೂಲೆಮೂಲೆಗಳ ಪರಿಚಯ ಮಾಡಿಸುತ್ತಿದ್ದಾರೆ ಗಗನ್​. ಈಚೆಗಷ್ಟೇ ಪ್ರಾಣಪ್ರತಿಷ್ಠೆ ಮಾಡಿಸಿಕೊಳ್ಳಲಿರುವ ಶ್ರೀರಾಮಲಲ್ಲಾ ದೇಗುಲದ ಸಮೀಪದ ದರ್ಶನವನ್ನೂ ಮಾಡಿಸಿದ್ದರು. 

ಸಕತ್​ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...
 

Latest Videos
Follow Us:
Download App:
  • android
  • ios