ಸಂಗೀತಾ ಭಟ್ ಅವರ ಬಿಗ್‌ ಬಾಸ್‌ ಪಯಣ ಐದು ವಾರಗಳಿಗೆ ಅಂತ್ಯಗೊಂಡಿರುವುದು ಕಾರ್ಯಕ್ರಮದ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಅವರ ಎಲಿಮಿನೇಷನ್ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅವರು ಗಳಿಸಿರಬಹುದಾದ ಹಣದ ಲೆಕ್ಕಾಚಾರ ವೈರಲ್ ಅಗುತ್ತಿದೆ. ಹಾಗಿದ್ರೆ, ಸಂಗೀತಾಗೆ ಸಿಕ್ಕಿದ್ದೆಷ್ಟು?

ಬಿಗ್‌ ಬಾಸ್‌ ಮನೆಯಿಂದ ಸಂಗೀತಾ ಭಟ್ ಔಟ್‌! 5 ವಾರಕ್ಕೆ ನಟಿಗೆ ಸಿಕ್ಕ ಸಂಭಾವನೆ ಎಷ್ಟು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ಆಟದ ಜೊತೆಗೆ ಅವರ ವೈಯಕ್ತಿಕ ವಿಚಾರಗಳೂ ಭಾರಿ ಚರ್ಚೆಗೆ ಗ್ರಾಸವಾಗುತ್ತಿವೆ. ಇದೀಗ ನಟಿ ಸಂಗೀತಾ ಭಟ್ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಕೇವಲ ಐದು ವಾರಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದ ನಟಿ ತಮ್ಮ ಆಟಕ್ಕೆ ಅಂತ್ಯ ಹಾಡಿದ್ದು, ಇದರ ಬೆನ್ನಲ್ಲೇ ಅವರು ಪಡೆದ ಸಂಭಾವನೆಯ ಕುರಿತಾದ ಕುತೂಹಲಕಾರಿ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಐದು ವಾರಗಳ ಆಟಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ?

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮನೆಯಲ್ಲಿ ಎಷ್ಟು ದಿನ ಉಳಿಯುತ್ತಾರೆ ಎಂಬುದರ ಆಧಾರದ ಮೇಲೆ ಅವರ ಸಂಭಾವನೆಯ ಬಗ್ಗೆಯೂ ಆಗಾಗ ಚರ್ಚೆಗಳು ನಡೆಯುತ್ತವೆ. ಇದೀಗ ಸಂಗೀತಾ ಭಟ್ ಅವರ ವಿಚಾರದಲ್ಲೂ ಇದೇ ಕುತೂಹಲ ಮೂಡಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ನಟಿ ಸಂಗೀತಾ ಭಟ್ ಅವರಿಗೆ ಪ್ರತಿ ವಾರಕ್ಕೆ ಅಂದಾಜು 1.5 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಈ ಲೆಕ್ಕಾಚಾರದ ಪ್ರಕಾರ, ಅವರು ಐದು ವಾರಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲಿ ಕಳೆದಿದ್ದರಿಂದ ಸುಮಾರು 7.5 ಲಕ್ಷ ರೂಪಾಯಿ ಸಂಭಾವನೆ ಪಡೆದಿರಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಆದರೆ, ಇಲ್ಲೊಂದು ಮತ್ತೊಂದು ಕುತೂಹಲಕಾರಿ ವಿಚಾರವೂ ಇದೆ. ಪ್ರಾಯೋಜಕರ ಕಡೆಯಿಂದ ದೊರೆತಿದೆ ಎನ್ನಲಾದ ಮೂರು ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಸೇರಿಸಿದರೆ, ಸಂಗೀತಾ ಭಟ್ ಅವರ ಒಟ್ಟು ಗಳಿಕೆ ಸುಮಾರು 10.5 ಲಕ್ಷ ರೂಪಾಯಿಗಳಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಈ ಅಂಕಿಅಂಶಗಳು ಸದ್ಯದ ಊಹಾಪೋಹಗಳಿಗೆ ಸೀಮಿತವಾಗಿವೆ. ಸಂಗೀತಾ ಭಟ್ ಅವರ ನಿಖರ ಸಂಭಾವನೆ ಎಷ್ಟು ಎಂಬುದರ ಕುರಿತು ಬಿಗ್‌ ಬಾಸ್‌ ತಂಡವಾಗಲಿ, ವಾಹಿನಿಯಾಗಲಿ ಅಥವಾ ನಟಿಯ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಹೀಗಾಗಿ ಈ ಮೊತ್ತವನ್ನು ಖಚಿತವಾದ ಸಂಭಾವನೆ ಎಂದು ಪರಿಗಣಿಸಲು ಸಾಧ್ಯವಿಲ್ಲ.

ವಿಭಿನ್ನ ಆಟದ ಮೂಲಕ ಗಮನ ಸೆಳೆದಿದ್ದ ನಟಿ

ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶಿಸಿದ ಆರಂಭದ ದಿನಗಳಿಂದಲೇ ಸಂಗೀತಾ ಭಟ್ ತಮ್ಮದೇ ಆದ ಆಟದ ಶೈಲಿಯಿಂದ ಗಮನ ಸೆಳೆದಿದ್ದರು. ಎಲ್ಲ ಸಂದರ್ಭಗಳಲ್ಲೂ ಹೆಚ್ಚು ಮಾತನಾಡುವುದಕ್ಕಿಂತ, ತಮ್ಮ ನಿರ್ಧಾರಗಳು ಮತ್ತು ನಡೆಗಳ ಮೂಲಕ ಗುರುತಿಸಿಕೊಳ್ಳಲು ಅವರು ಪ್ರಯತ್ನಿಸಿದ್ದರು. ಅವರ ಆಟದ ವೈಖರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು.

ಇದರ ನಡುವೆ ಟಾಸ್ಕ್‌ನಲ್ಲಿ ಭಾಗವಹಿಸುವಾಗ ಸಂಗೀತಾ ಭಟ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂಬ ಮಾಹಿತಿಯೂ ವರದಿಯಾಗಿತ್ತು. ಈ ಘಟನೆಯ ಬಳಿಕ ಅವರ ಆರೋಗ್ಯ ಮತ್ತು ಮುಂದಿನ ಆಟದ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದರು.

ಎಲಿಮಿನೇಷನ್ ಬೆನ್ನಲ್ಲೇ ಸಂಭಾವನೆ ಚರ್ಚೆ

ಸಂಗೀತಾ ಭಟ್ ಅವರ ಬಿಗ್‌ ಬಾಸ್‌ ಪಯಣ ಐದು ವಾರಗಳಿಗೆ ಅಂತ್ಯಗೊಂಡಿರುವುದು ಕಾರ್ಯಕ್ರಮದ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಅವರ ಎಲಿಮಿನೇಷನ್ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅವರು ಗಳಿಸಿರಬಹುದಾದ ಹಣದ ಲೆಕ್ಕಾಚಾರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೇರೆ ಏನೂ ಅಲ್ಲ, ಅವರಸಂಗೀತಾ ಭಟ್ ಅವರ ಬಿಗ್‌ ಬಾಸ್‌ ಪಯಣ ಐದು ವಾರಗಳಿಗೆ ಅಂತ್ಯಗೊಂಡಿರುವುದು ಕಾರ್ಯಕ್ರಮದ ವೀಕ್ಷಕರಲ್ಲಿ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಅವರ ಎಲಿಮಿನೇಷನ್ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಅವರು ಗಳಿಸಿರಬಹುದಾದ ಹಣದ ಲೆಕ್ಕಾಚಾರ ಅನಾರೋಗ್ಯದ ಕಾರಣಕ್ಕೇ ಅವರ ಎಲಿಮಿನೇಶನ್ ಆಗಿದೆ ಎಂಬ ಸುದ್ದಿ ಇದೆ.

ಒಟ್ಟಿನಲ್ಲಿ, ಬಿಗ್‌ ಬಾಸ್‌ ಮನೆಯಲ್ಲಿ ಸಂಗೀತಾ ಭಟ್ ಅವರ ಆಟದ ಅವಧಿ ಮುಗಿದಿದ್ದರೂ, ಅವರ ಸಂಭಾವನೆಯ ಕುರಿತಾದ ಕುತೂಹಲ ಮಾತ್ರ ಕಡಿಮೆಯಾಗಿಲ್ಲ. ಆದರೆ ವೈರಲ್ ಆಗುತ್ತಿರುವ ಮೊತ್ತಗಳ ಬಗ್ಗೆ ಅಧಿಕೃತ ಸ್ಪಷ್ಟನೆ ಸಿಗುವವರೆಗೆ ಅವುಗಳನ್ನು ಅಂದಾಜು ಮಾಹಿತಿ ಎಂದೇ ಪರಿಗಣಿಸುವುದು ಸೂಕ್ತ. ಸ್ವತಃ ಸಂಗೀತಾ ಭಟ್ ಅವರಾಗಲೀ ಅಥವಾ ಹಣ ನೀಡಿರುವ ಎಂಡೇಮಾಲ್ ಕಂಪನಿಯಾಗಲೀ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಲೇಬೇಕು!