ಮೊನ್ನೆ ಅಧ್ಯಾತ್ಮ ಪಾಠ ಮಾಡಿದ ಸಂಗೀತ ಈಗ ಒಬ್ಬೊಬ್ರೇ ಮಾತಾಡ್ತಿದ್ದಾರೆ, ಅಯ್ಯೋ ಸಂಗೀತಾಗೆ ಏನಾಯ್ತು!
ಮೊನ್ನೆ ಮೊನ್ನೆ ಸಂಗೀತಾ ಶೃಂಗೇರಿ ಅಧ್ಯಾತ್ಮದ ಬಗ್ಗೆ ಅದ್ಭುತವಾಗಿ ಪಾಠ ಮಾಡಿದ್ರು. ಈಗ ಒಬ್ಬೊಬ್ರೆ ಮಾತಾಡ್ತಿದ್ದಾರೆ. ಚಾರ್ಲಿ ಬೆಡಗಿಗೆ ಏನಾದ್ರೂ ಹೆಚ್ಚು ಕಮ್ಮಿ ಆಯ್ತಾ?
ಸಂಗೀತಾ ಶೃಂಗೇರಿ ಈ ಬಾರಿಯ ಬಿಗ್‌ಬಾಸ್‌ನ ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್. ಒಂದಿನ ಇದ್ದ ಹಾಗೆ ಇನ್ನೊಂದಿನ ಇರಲ್ಲ ಅನ್ನೋದು ಅವರ ಸ್ಪೆಷಾಲಿಟಿ. ಶುರುವಲ್ಲಿ ಕಾರ್ತಿಕ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಈಕೆ ಆಮೇಲೆ ಶತ್ರು ಥರ ನೋಡೋಕೆ ಶುರು ಮಾಡಿದ್ರು. ವಿನಯ್ ಜೊತೆಗೆ ಒಮ್ಮೆ ಜಗಳ ಆಡಿದ್ರು. ಮತ್ತೊಮ್ಮೆ ಫ್ರೆಂಡ್ ಆದ್ರು. ಟಾಸ್ಕ್‌ವೊಂದರಲ್ಲಿ ಕಣ್ಣಿಗೆ ಸೋಪಿನ ನೀರು ಬಿದ್ದ ಪರಿಣಾಮ ಸಂಗೀತಾ ಅವರು ಆಸ್ಪತ್ರೆಗೆ ಹೋಗಿದ್ದರು. ಎರಡು ದಿನಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅದಾಗಿ ಕೆಲವೇ ದಿನಕ್ಕೆ ಟೀಚರ್ ಟಾಸ್ಕ್‌ನಲ್ಲಿ ಅಧ್ಯಾತ್ಮದ ಬಗ್ಗೆ ಅದ್ಭುತವಾಗಿ ಮಾತನಾಡಿದ್ರು. ಈಗ ಸಂಗೀತಾ ಅವಸ್ಥೆ ನೋಡಿ ಗಾಬರಿ ಬೀಳೋ ಸರದಿ ವೀಕ್ಷಕರದ್ದು.
ಹೌದು, ಚಾರ್ಲಿ ಬೆಡಗಿ ಒಬ್ಬೊಬ್ಬರೇ ಮಾತಾಡೋದಕ್ಕೆ ಶುರು ಮಾಡಿದ್ದಾರೆ. ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯಲ್ಲಿ ಸಂಗೀತಾ ಅವರು ಈಗ ಏಕಾಂಗಿಯಾಗಿದ್ದಾರೆ. ಡ್ರೋನ್ ಪ್ರತಾಪ್ ಬಿಟ್ಟರೆ ಬೇರೆ ಯಾರ ಜೊತೆಯೂ ಅವರು ಈಗ ಫ್ರೆಂಡ್‌ಶಿಪ್ ಬೆಳೆಸಿಲ್ಲ. ಆದರೆ ಒಬ್ಬೊಬ್ಬರೇ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಈಗ ಈಕೆ ಕಾರ್ತಿಕ್, ತನಿಷಾ ಜೊತೆ ಫ್ರೆಂಡ್‌ಶಿಪ್ ಮಾಡಿಕೊಂಡಿಲ್ಲ. ಹೀಗಾಗಿ ಅಂದರೆ ಸಂಗೀತಾ ಒಂದು ಕಡೆಯಾದರೆ, ಇಡೀ ಮನೆ ಇನ್ನೊಂದು ಕಡೆ ಆಗುವುದು. ಯಾವುದೋ ಒಂದು ವಿಷಯಕ್ಕೆ ಚರ್ಚೆ ನಡೆದರೆ ಎಲ್ಲಿ ಸಂಗೀತಾ ಇರೋದಿಲ್ಲ, ಸಂಗೀತಾ ಇಲ್ಲದಿರೋದನ್ನು ಗಮನಿಸಿ ಅವರನ್ನು ಕರೆಯುವವರು ಕೂಡ ಯಾರೂ ಇಲ್ಲ ಅನ್ನೋ ಹಾಗಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್, ತುಕಾಲಿ ಸ್ಟಾರ್ ಸಂತು ಅವರಿಗೆ ಹೆಡ್ ಶೇವ್ ಟಾಸ್ಕ್ ಕೊಟ್ಟಾಗ ಎಲ್ಲವೂ ಸಂಗೀತಾ ಅವರ ವಿರುದ್ಧವೇ ಇದ್ದಂತೆ ಇತ್ತು. ಆಗ ಅವರು ಎಲ್ಲವನ್ನು ವಿನಯ್ ತಂಡದ ಜೊತೆ ಶೇರ್ ಮಾಡಿಕೊಳ್ಳಲು ಇಷ್ಟಪಡದೆ, ಕಾರ್ತಿಕ್-ತನಿಷಾ ಬಳಿ ಏನೂ ಹೇಳಿಕೊಳ್ಳಲಾಗದೆ ಬಿಗ್ ಬಾಸ್ ಕ್ಯಾಮರಾ ಮುಂದೆ ಬಂದು ಆಗಾಗ ಏನೇನೋ ಹೇಳುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲಿ ಕ್ಲಾಸ್ ಕಲರವ, ವರ್ತೂರ್ ಕ್ಲಾಸ್‌ನಲ್ಲಿ ಎಲಿಮಿನೇಷನ್ ಪ್ರಾಣ ಸಂಕಟ!
ಕಾರ್ತಿಕ್ ಜೊತೆ ಸಂಗೀತಾ ಸ್ನೇಹ ಚೆನ್ನಾಗಿದೆ. ಆದರೆ ಸಂಗೀತಾ ಹೇಳಿದ್ದಕ್ಕೆಲ್ಲ ಓಕೆ ಎಂದುಕೊಂಡು, ಅವರು ಹೇಳಿದ್ದೇ ವೇದವಾಕ್ಯ ಎನ್ನುತ್ತ, ಸಂಗೀತಾ ಮಾಡಿದ್ದಕ್ಕೆಲ್ಲ ಜೈ ಎನ್ನುವ ಕೆಲಸವನ್ನು ಕಾರ್ತಿಕ್ ಮಾಡುತ್ತಿಲ್ಲ. ಇದು ಕೂಡ ಸಂಗೀತಾಗೆ ಅರ್ಥ ಆಗಿದೆ. ಕಾರ್ತಿಕ್ ಬದಲಾಗಿದ್ದಾರೆ ಅಂತ ಸಂಗೀತಾಗೆ ಅನಿಸಿದೆ. ಹೀಗಾಗಿ ಸಂಗೀತಾಗೆ ಏಕಾಂಗಿ ಫೀಲ್ ಆಗ್ತಿರಬೇಕು.
ಸದ್ಯ ಪ್ರತಿದಿನ ಏನೋ ಒಂದು ವಿಷಯಕ್ಕೆ ಜಗಳ ಆಡಬೇಕು, ಸ್ಟ್ಯಾಂಡ್ ತಗೋಬೇಕು ಅಂತ ಸಂಗೀತಾ ಅಂದುಕೊಂಡ ಹಾಗಿದೆ. ಆದರೆ ತಾನು ಒಂದು ಕಡೆ, ಉಳಿದವರು ಒಂದು ಕಡೆ ಎನ್ನೋದು ಕೂಡ ಸಂಗೀತಾಗೆ ಅರ್ಥ ಆಗಿದೆ. ತಾನು ಜಗಳ ಆಡಿದಾಗ ತನಗೆ ಬೇಸರ ಆದಾಗ ಯಾರಾದರೂ ಬಂದು ಸಮಾಧಾನ ಮಾಡಿದರೆ ಓಕೆ, ಇಲ್ಲ ಅಂದರೆ ಸಂಗೀತಾ ಅವರು ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾರೆ. ಇನ್ನೊಂದೆಡೆ ಸಂಗೀತಾ ಅವರು ಈ ಬಾರಿ ಫಿನಾಲೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ವೀಕ್ಷಕರು ಸಂಗೀತಾಗೆ ಬೆಂಬಲ ಸೂಚಿಸುತ್ತಿದ್ದಾರೆ.
ಬಿಗ್ಬಾಸ್ನಲ್ಲಿ ಮುದ್ದೆಗಾಗಿ ಗುದ್ದಾಟ! ಗ್ಯಾಸ್ ಖಾಲಿಯಾಗಿ ಪರದಾಟ: ಪ್ರತಾಪ್ ಮೇಲೆ ಮುಗಿಬಿದ್ದ ವಿನಯ್
ಈ ಬಾರಿ ಕಿಚ್ಚನ ಚಪ್ಪಾಳೆ ಸಂಗೀತಾಗೇ ಸಿಗಬೇಕು ಅಂತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಂಗೀತಾ ಫಿನಾಲೆಗೆ ಹೋಗೋದು ಮಾತ್ರ ಅಲ್ಲ, ಅಲ್ಲಿ ಉಳಿದ ಸ್ಪರ್ಧಿಗಳಿಗೆ ಟಫ್ ಫೈಟ್ ಕೊಡೋದು ಗ್ಯಾರಂಟಿ ಅನಿಸ್ತಿದೆ. ಇನ್ನೊಂದೆಡೆ ಎಲ್ಲರಿಗಿಂತ ಡಿಫರೆಂಟ್ ಆಟಿಟ್ಯೂಡ್‌ನ ಸಂಗೀತ ಬಿಗ್‌ಬಾಸ್ ಮನೆಯಲ್ಲೂ ಡಿಫರೆಂಟ್ ಆಗಿ ಗುರುತಿಸಿಕೊಂಡಿರೋದು ಅವರಿಗೆ ಪಾಸಿಟಿವ್ ಆಗೋ ಎಲ್ಲ ಸಾಧ್ಯತೆ ಇದೆ.