Asianet Suvarna News Asianet Suvarna News

ಬಿಗ್​ಬಾಸ್​ನಲ್ಲಿ ಮುದ್ದೆಗಾಗಿ ಗುದ್ದಾಟ! ಗ್ಯಾಸ್​ ಖಾಲಿಯಾಗಿ ಪರದಾಟ: ಪ್ರತಾಪ್​ ಮೇಲೆ ಮುಗಿಬಿದ್ದ ವಿನಯ್​

ಬಿಗ್​ಬಾಸ್​ ಮನೆಯಲ್ಲಿ ಮುದ್ದೆ ಮಾಡುವ ಸಮಯದಲ್ಲಿಯೇ ಗ್ಯಾಸ್​ ಖಾಲಿ ಆಗಿದೆ. ಇದಕ್ಕಾಗಿ ಹೊಟ್ಟೆ ಹಸಿವಿನಿಂದ ವಿನಯ್​ ಡ್ರೋನ್​ ಪ್ರತಾಪ್​ ಮೇಲೆ ಮುಗಿ ಬಿದ್ದಿದ್ದಾರೆ. ಆಗಿದ್ದೇನು? 
 

Bigg Boss runs out of gas Vinay angry with Drone Pratap what had happened suc
Author
First Published Dec 15, 2023, 12:46 PM IST

ಬಿಗ್​ಬಾಸ್​ ಮನೆಯಲ್ಲಿ ಗ್ಯಾಸ್​ ಖಾಲಿಯಾಗಿದ್ದು, ಸ್ಪರ್ಧಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಕ್ಷಸರಾಗಿರುವ ಕೆಲ ಸ್ಪರ್ಧಿಗಳು ಡ್ರೋನ್​ ಪ್ರತಾಪ್​ ಮೇಲೆ ಮುಗಿ ಬೀಳುತ್ತಿದ್ದಾರೆ. ರಾಗಿಮುದ್ದೆ ಸಿಗದೇ ಉಪವಾಸದಿಂದ ಸ್ಪರ್ಧಿಗಳು ಪರದಾಡುತ್ತಾ ಕಿರುಚಾಡುತ್ತಿರುವ ಪ್ರೊಮೋ ಅನ್ನು ಕಲರ್ಸ್​ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.   ಗ್ಯಾಸ್​ ಖಾಲಿಯಾದ್ರೆ ಡ್ರೋನ್​ ಪ್ರತಾಪ್​ ಮೇಲೆ ಏಕಿಷ್ಟು ಕೋಪ ಎನ್ನುವುದಕ್ಕೂ ಕಾರಣವಿದೆ. ಅದೇನೆಂದರೆ, ಡ್ರೋನ್​ ಪ್ರತಾಪ್​ ಇದ್ದಬಿದ್ದ ಗ್ಯಾಸ್​ ಖಾಲಿ ಮಾಡಿದ್ದಾರೆ ಎನ್ನುವ ಕಾರಣಕ್ಕೆ!

ಹೌದು. ಅಷ್ಟಕ್ಕೂ ಆಗಿದ್ದೇನೆಂದರೆ, ಪ್ರತಾಪ್​ ಮತ್ತು ಕಾರ್ತಿಕ್ ಸೇರಿ ರಾಗಿ ಮುದ್ದೆ ಮಾಡಿದ್ದಾರೆ. ಅದನ್ನು ವರ್ತೂರು ಸಂತೋಷ್​ ಮತ್ತು ತುಕಾಲಿ ಸಂತೋಷ್​ ಸವಿದಿದ್ದಾರೆ. ಉಳಿದವರು ಮುದ್ದೆಗಾಗಿ ಕಾಯುತ್ತಿದ್ದಾರೆ. ಆದರೆ ಅಷ್ಟರಲ್ಲಿಯೇ ಗ್ಯಾಸ್​ ಖಾಲಿಯಾಗಿಬಿಟ್ಟಿದೆ. ಡ್ರೋನ್​ ಪ್ರತಾಪ್​ಗೆ ಮುದ್ದೆ ಮಾಡಿಕೊಡಲು ಸ್ಪರ್ಧಿಗಳೇ ಕೇಳಿಕೊಂಡಿದ್ದರು.  ಎಲ್ಲರಿಗೂ ಮುದ್ದೆ ತಿನ್ನಬೇಕು ಎನಿಸಿದ್ದರಿಂದ ಮುದ್ದೆ ಬೇಕು ಎಂದಿದ್ದರು. ಅವರ ಆಸೆ ಈಡೇರಿಸಲು ಹೋದ  ಡ್ರೋನ್ ಪ್ರತಾಪ್  ಅವರು  ಮುದ್ದೆ  ಮಾಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿಯೇ ಗ್ಯಾಸ್​ ಖಾಲಿಯಾಗಿಬಿಟ್ಟಿದೆ. ವಿನಯ್​ ಸೇರಿದಂತೆ ಇತರ ಸ್ಪರ್ಧಿಗಳ ಹೊಟ್ಟೆ ಚುರುಕ್​ ಎನ್ನುತ್ತಿದೆ. ಆದರೆ ಗ್ಯಾಸ್​ ಇಲ್ಲದೇ ಎಲ್ಲರೂ ಕಂಗಾಲಾಗಿಬಿಟ್ಟಿದ್ದಾರೆ. ಡ್ರೋನ್​ ಪ್ರತಾಪ್​ ಮುದ್ದೆ ಮಾಡುವಾಗ  ಗ್ಯಾಸ್ ಅತಿಯಾಗಿ ಬಳಸಿದ್ದಾರೆ ಎಂದು ವಿನಯ್​ ಗರಂ ಆಗಿದ್ದಾರೆ.

ಹೆಣ್ಣೆಂದರೆ 'ಅನಿಮಲ್'​ ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು

ಬಿಗ್​ಬಾಸ್​ ಸ್ಪರ್ಧಿಗಳಿಗೆ ನೀಡುವ ಗ್ಯಾಸ್​ ಲಿಮಿಟ್​ ಮುಗಿದ ಹಿನ್ನೆಲೆಯಲ್ಲಿ  ಸಂಜೆ ಅಡುಗೆ ಮಾಡೋಕೆ ಬಿಗ್ ಬಾಸ್ ಗ್ಯಾಸ್ ಕೊಟ್ಟಿಲ್ಲ. ಇದರಿಂದ ಮನೆಯವರು ಡ್ರೋನ್​ ಪ್ರತಾಪ್​ ಮೇಲೆ ಸಿಟ್ಟಾಗಿದ್ದಾರೆ.  ‘ಎಲ್ಲರೂ ರಾಕ್ಷಸರಾಗುತ್ತಿದ್ದಾರೆ. ಗ್ಯಾಸ್ ಕೊಡಿ’ ಎಂದು ಸಂತೋಷ್, ಪ್ರತಾಪ್ ಬಿಗ್​ಬಾಸ್​ಗೆ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿನಯ್​ಗೆ ಕೋಪ ನೆತ್ತಿಗೇರಿದ್ದು,  ಎಲ್ಲರ ವಿರುದ್ಧ ಹರಿಹಾಯ್ದಿದ್ದಾರೆ. ರಾತ್ರಿ ನಂಗೆ ಊಟ ಬೇಕೇ ಬೇಕು ಇಲ್ಲಾ ಅಂದ್ರೆ ನಾನು ಸುಮ್ನಿರೋದಿಲ್ಲ ಅಂತ ವಿನಯ್​ ರೇಗಾಡಿದ್ದಾರೆ.

 ಇವರಿಗೆ ಊಟವನ್ನು ಖುದ್ದು ಕಿಚ್ಚ ಸುದೀಪ್​ ಅವರೇ ತಂದುಕೊಡುತ್ತಾರೆ ಎಂದೂ ಹೇಳಲಾಗ್ತಿದೆ. ಸುದೀಪ್ ಮಾಡಿರೋ ಅಡುಗೆ ಬರುವುದರಲ್ಲಿದೆ. ಹೀಗಾಗಿ, ಗ್ಯಾಸ್ ಹಚ್ಚೋಕೆ ಬಿಗ್ ಬಾಸ್ ಅವಕಾಶ ನೀಡಿಲ್ಲ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಗ್​ಬಾಸ್​ನಲ್ಲಿ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ ಫ್ಯಾನ್ಸ್​. 

ಕೋಳಿ ಕೂಗಿದ್ರೆ ಬೆಳಗಾಗ್ತದೆಂಬ ಭ್ರಮೆ ಗಂಡಸ್ರಿಗೆ ಬೇಡ: ಹೆಣ್ಣಿನ ಶಕ್ತಿಯೇನು? ಭಾಗ್ಯಲಕ್ಷ್ಮಿ ಕುಸುಮಾ ಮಾತು ಕೇಳಿ...
 

Follow Us:
Download App:
  • android
  • ios