Samyuktha Hegde on New Reality Show ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಅವರು 'ರಿಯಾಲಿಟಿ ರಾಣೀಸ್ ಆಫ್ ಜಂಗಲ್' ಎಂಬ ಹೊಸ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಈ ಶೋನಲ್ಲಿ ಪ್ರಾಣಿಗಳ ಹಸಿ ಕಣ್ಣುಗಳನ್ನು ತಿನ್ನುವ ವಿವಾದಾತ್ಮಕ ಟಾಸ್ಕ್ ನೀಡಲಾಗಿದೆ.
ಬೆಂಗಳೂರು (ಸೆ.25): ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಮಾಡಿದ ಬಳಕ ಬಾಲಿವುಡ್ ಗೀಳಿನಿಂದ ಉತ್ತರದ ಕಡೆ ಹಾರಿಹೋಗಿದ್ದ ನಟಿ ಸಂಯುಕ್ತಾ ಹೆಗ್ಡೆ ಈಗ ಹೊಸ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೆಲವೊಂದು ಹಿಂದಿ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದ ಆಕೆ, ಕೆಲ ಕಾಲ ನಟ ಬಸೀರ್ ಅಲಿಯ ಗರ್ಲ್‌ಫ್ರೆಂಡ್ ಆಗಿಯೂ ಗುರುತಿಸಿಕೊಂಡಿದ್ದರು. ವಾರ್ನರ್ ಬ್ರೋಸ್, ಡಿಸ್ಕವರಿಯ 'ರಿಯಾಲಿಟಿ ರಾಣೀಸ್ ಆಫ್ ಜಂಗಲ್'ನ 2ನೇ ಸೀಸನ್ ಆರಂಭವಾಗಿದ್ದು, ಅದರಲ್ಲಿ ಸಂಯುಕ್ತಾ ಹೆಗ್ಡೆ ಕೂಡ 12 ಮಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ರಿಯಲ್ ಐ ಬಕೆಟ್ ಚಾಲೆಂಜ್
ಡಿಸ್ಕವರಿಯಲ್ಲಿ ಚಾನೆಲ್ ಇಂಡಿಯಾದಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಅದರಲ್ಲಿ ಸ್ಪರ್ಧಿಗಳಿಗೆ ಪ್ರಾಣಿಗಳ ಹಸಿಯಾದ ಕಣ್ಣು ತಿನ್ನುವ ಚಾಲೆಂಜ್ ನೀಡಲಾಗಿದೆ. ಕ್ಯಾಪ್ಟನ್‌ಶಿಪ್ ಟಾಸ್ಕ್ ಎನ್ನುವ ರೀತಿಯಲ್ಲಿ ಈ ಟಾಸ್ಕ್ ನೀಡಲಾಗಿದ್ದು, ಯಾವ ಸ್ಪರ್ಧಿಗಳು ಪ್ರಾಣಿಗಳ ಕಣ್ಣು ತಿನ್ನುತ್ತಾರೋ ಅವರು ವಿಜಯಿ ಎನ್ನುವ ಟಾಸ್ಕ್ ಇದಾಗಿದೆ.
ಇದರಲ್ಲಿ ಸಂಯುಕ್ತಾ ಹೆಗ್ಡೆ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಭಾಗವಹಿಸಿದ್ದು, ಕೆಲವು ಸ್ಪರ್ಧಿಗಳು ಪ್ರಾಣಿಗಳ ಕಣ್ಣು ತಿನ್ನಲು ಹೋಗಿ ವಾಂತಿ ಮಾಡಿಕೊಂಡಿದ್ದಾರ. ಈ ಟಾಸ್ಕ್‌ನ ಪ್ರೋಮೋ ವಿಡಿಯೋವನ್ನು ವಾಹಿನಿ ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಬಸೀರ್ ಅಲಿ ಜೊತೆ ಸಂಯುಕ್ತಾ ಬ್ರೇಕಪ್!
ಇನ್ನು ಆಕೆಯ ವೈಯಕ್ತಿಕ ಜೀವನಕ್ಕೆ ಬರೋದಾರೆ, ಕಳೆದ ಜುಲೈನಲ್ಲಿ ಸಂಯುಕ್ತಾ ಹೆಗ್ಡೆ ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಗೆಳೆಯ, ನಟ ಬಸೀರ್ ಅಲಿ ಬಗ್ಗೆ ಮಾತನಾಡಿದ ವಿಚಾರ ಭಾರಿ ವೈರಲ್ ಆಗಿತ್ತು.
ಸಂಯುಕ್ತಾ ಹೆಗ್ಡೆ ಹೇಳಿದ್ದೇನು?
ಸಂಯುಕ್ತಾ ಹೆಗ್ಡೆ ಅವರು ಬಸೀರ್ ಅಲಿಯವರನ್ನು ತಮ್ಮ ಸ್ನೇಹಿತ ಎಂದು ಒಪ್ಪಿಕೊಂಡರೂ, ಅವರು ಉತ್ತಮ ಸ್ನೇಹಿತನಲ್ಲ ಮತ್ತು "ಒಬ್ಬ ಭಯಾನಕ ಬಾಯ್‌ಫ್ರೆಂಡ್" ಎಂದು ವಿವರಿಸಿದ್ದರು. ಅವರು "ಅವನ ಸ್ವಭಾವವೇ ಹುಡುಗಿಯರ ಜೊತೆ ಚೆಲ್ಲಾಟವಾಡುವುದು. ತನ್ನ ಗೆಳತಿ ಜೊತೆಗಿರುವಾಗಲೂ ಅವನು ಇತರ ಹುಡುಗಿಯರೊಂದಿಗೆ ಕುಚೇಷ್ಟೆ ಮಾಡುತ್ತಾನೆ. ಅದಕ್ಕಾಗಿಯೇ ಅವನು ಉತ್ತಮ ಸಂಗಾತಿಯಲ್ಲ" ಎಂದು ಹೇಳಿದ್ದಾರೆ. ಇದರ ಹೊರತಾಗಿ, "ಬಸೀರ್ ಆಕರ್ಷಕ ವ್ಯಕ್ತಿ ಎಂದು ನನಗೆ ಅನ್ನಿಸುವುದಿಲ್ಲ" ಎಂದೂ ಸಂಯುಕ್ತಾ ಹೇಳಿಕೆ ನೀಡಿದ್ದರು.
