ಗೆಳತಿಗೆ ಲಿಪ್‌ಲಾಕ್ ಮಾಡಿ ವೈರಲ್ ಆದ ನಟಿ ಸಂಯುಕ್ತಾ ಹೆಗ್ಡೆ, ಮದುಮಗ ಕಂಗಾಲ್!
ನಟಿ ಸಂಯುಕ್ತಾ ಹೆಗ್ಡೆ ತಮ್ಮ ಗೆಳತಿಯ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಗೆಳತಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
- FB
- TW
- Linkdin
Follow Us

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದಿದ್ದ ನಟಿ ಸಂಯುಕ್ತಾ ಹೆಗ್ಡೆ ನಂತರ ಗೊತ್ತುಗುರಿ ಇಲ್ಲದಂತೆ ನಾಪತ್ತೆಯಾಗಿಬಿಟ್ಟಿದ್ದರು. ಈಗ ಹೊಸ ಪೋಸ್ಟ್ ಮೂಲಕ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಿಟ್‌ನೆಸ್ ಫೋಟೋಗಳು ಹಾಗೂ ಡಾನ್ಸ್ ವಿಡಿಯೋಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿರುವ ಸಂಯುಕ್ತಾ ಹೆಗ್ಡೆ ಎರಡು ದಿನಗಳ ಹಿಂದೆ ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಗೆಳತಿಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ.
ಬರ್ತ್‌ಡೇ ವಿಶ್ ಮಾಡಲು ಆಕೆ ಆಯ್ಕೆ ಮಾಡಿಕೊಂಡಿರುವ ಫೋಟೋ ಎಲ್ಲರ ಗಮನಸೆಳೆದಿದೆ. ಗೆಳತಿಯ ಮದುವೆಯ ಸಮಯದಲ್ಲಿ ಆಕೆಯ ತುಟಿಗೆ ಮುತ್ತಿಟ್ಟು ವಿಶ್ ಮಾಡಿದ ಫೋಟೋವನ್ನು ಸಂಯುಕ್ತಾ ಪೋಸ್ಟ್ ಮಾಡಿದ್ದಾರೆ. ಇನ್ನು ಸ್ನೇಹಿತೆಯ ಗಂಡ ಇದನ್ನು ನೋಡಿ ಅಚ್ಚರಿ ಪಟ್ಟಿರುವಂತೆ ದಾಖಲಾಗಿದೆ.
ಸ್ನೇಹಿತೆ ಪೂಜಿತಾ ಭಾಸ್ಕರ್‌ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟು ಬರ್ತ್‌ಡೇ ವಿಶ್ ಮಾಡಿದ್ದಾರೆ. ಇತ್ತೀಚೆಗೆ ಆಕೆಯ ವಿವಾಹವಾಗಿದೆ. ವಿವಾಹಕ್ಕೂ ಮುನ್ನ ತೆಗೆದಿರುವ ಫೋಟೋ ಇದಾಗಿದೆ.
ಇನ್ನು ಸಂಯುಕ್ತಾ ಹೆಗ್ಡೆ ಫೋಟೋ ಹಂಚಿಕೊಂಡ ಬೆನ್ನಲ್ಲಿಯೇ ನಿರೀಕ್ಷಿತವಾಗಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ನೀವಿಬ್ಬರೂ ಲೆಸ್ಬಿಯನ್ಸಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ಇದು ತಪ್ಪಲ್ಲ. ನೆಗೆಟಿವ್ ಕಾಮೆಂಟ್ಸ್‌ಗೆ ತಲೆ ಕೆಡಿಸಿಕೊಳ್ಳಬೇಡಿ. ಇಂಥವುಗಳನ್ನು ಸಾಧ್ಯವಾದಷ್ಟು ಪೋಸ್ಟ್ ಮಾಡಿ ಎಂದು ನೆಟ್ಟಿಗರು ಬರೆದಿದ್ದಾರೆ.
ಈ ಫೋಟೋ ನೋಡಿದ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ನಟಿಯನ್ನು ಟೀಕಿಸಿದ್ದಾರೆ. ‘ಹಿಂಭಾಗದಲ್ಲಿ ಇರೋ ವರ ಶಾಕ್ನಲ್ಲಿ ಇದ್ದಾನೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಇವರಿಗೆಲ್ಲ ಏನಾಗಿದೆ’ ಎಂದು ಕೇಳಿದ್ದಾರೆ.
ಫೋಟೋ ನೋಡಿದರೆ, ನಿಮ್ಮಿಬರ ಮದುವೆ ಆಯಿತು ಎಂದುಕೊಂಡೆ, ನನ್ನ ಪುಣ್ಯಕ್ಕೆ ಹಾಗಾಗಿಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ, ಈ ಟ್ರೋಲ್‌ಗಳಿಗೆ ಸಂಯುಕ್ತಾ ತಲೆಕೆಡಿಸಿಕೊಂಡಿಲ್ಲ.
2022ರಲ್ಲಿ ಬಂದ ತುರ್ತು ನಿರ್ಗಮನ ಸಿನಿಮಾದ ಬಳಿಕ ಸಂಯುಕ್ತಾ ಹೆಗ್ಡೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ವೆಬ್‌ಸಿರೀಸ್‌ಗಳಲ್ಲೂ ನಟಿಸಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವರ್ಕ್‌ಔಟ್ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.