ರಾತ್ರಿ ಆದರೆ ಸಾಕು ಕುಟುಂಬದವರ ಜೊತೆ ಸೇರಿ ಮತ್ತೊಂದು ಮನೆಯ ವಿಚಾರವನ್ನು ಮನೋರಂಜನೆಯ ರೀತಿಯಲ್ಲಿ ನೋಡುವ ರಿಯಾಲಿಟಿ ಶೋನೇ ಬಿಗ್‌ಬಾಸ್‌.

 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 13 ರಂದು ಸಂಜೆ 6 ಗಂಟೆಗೆ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದ್ದು ಸೋಮವಾರದಿಂದ (ಅ.14) ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಕಳೆದ ವರ್ಷ ಸಾಮಾನ್ಯರು ಹಾಗೂ ಸೆಲೆಬ್ರಿಟಿಗಳು ಇದ್ದು ಸೀಸನ್-7 ರಲ್ಲಿ ಸೆಲೆಬ್ರಿಟಿಗಳು ಮಾತ್ರ ಭಾಗಿಯಾಗುತ್ತಿದ್ದಾರೆ.

ಸತ್ಯ ಬಹಿರಂಗ: ಬಿಗ್‌ಬಾಸ್ ಮನೆಯಲ್ಲಿ ಸಿಗರೇಟಿಗೂ ಇದೆ ಒಂದು ರೂಮ್!

 

ಇನ್ನು ಯಾರ್ಯಾರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ? ಏನೆಲ್ಲಾ ಮನೆಯಲ್ಲಿ ನೀಡುತ್ತಾರೆ? ಸೀಕ್ರೆಟ್‌ ರೂಮ್ ಇರುತ್ತಾ? ಎಂದೆಲ್ಲಾ ಪ್ರಶ್ನೆಗಳಿಗೆ ಕಲರ್ಸ್ ಕನ್ನಡ ಬ್ಯುಸಿನೆಸ್‌ ಹೆಡ್‌ ಹಾಗೂ ನಟ ನಿರೂಪಕ ಕಿಚ್ಚ ಸುದೀಪ್ ಪ್ರೆಸ್ ಮೀಟ್ ಮಾಡುವ ಮೂಲಕ ಉತ್ತರಿಸಿದ್ದರು.

ನಿವೇದಿತಾ-ಚಂದನ್ ಶೆಟ್ಟಿ ಮದ್ವೆ; ಈ ಜೋಡಿ ಲವ್ ಸ್ಟೋರಿ ಕೇಳಿದ್ದೀರಾ?

ಸಿಗರೇಟ್ ಅಭ್ಯಾಸ ಇರುವವರಿಗೆ ಸಿಗರೇಟ್‌ ನೀಡಲಾಗುತ್ತದೆ ಎಂದಿದ್ದರು. ಆದರೆ ಅದನ್ನು ಆಟ ಆಡಿಸುತ್ತಾ ಕೆಲವೊಮ್ಮೆ ನೀಡುತ್ತಾ ಕೆಲವೊಮ್ಮೆ ಸತಾಯಿಸುತ್ತಾ ನೀಡುತ್ತಾರೆ. ಅಷ್ಟೇ ಅಲ್ಲದೇ ಲಕ್ಷುರಿ ಟಾಸ್ಕ್ ಆದ ನಂತರ ಮನೆಗೆ ಬೇಕಾದ ಸಾಮಾಗ್ರಿಗಳನ್ನು ಕೊಳ್ಳಬಹುದು ಈ ವೇಳೆ ಸ್ಪರ್ಧಿಗಳು ಹೆಚ್ಚಾಗಿ ಪ್ರಾಮುಖ್ಯತೆ ಕೊಡುವುದು ಚಿಕನ್, ಹಾಲು. ಆದರೆ ಪ್ರೇಕ್ಷಕರ ಊಹೆ ಪ್ರಕಾರ ಈ ಬಾರಿ ಬಿಯರ್, ಮೊಬೈಲ್‌ ಎಲ್ಲಾ ಕೊಡುತ್ತಾರೆ ಎಂದು ಮಾತುಗಳು ಹರಿದಾಡುತ್ತಿದೆ.

ಮದುವೆಗೆ ಮುನ್ನ ಬಿಗ್ಬಾಸ್ ಆ್ಯಂಡಿ ತೂಕ ಇಳಿಸುವ ಟಾಸ್ಕ್, ಲೇಡಿ ಯಾರು?

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;