ಬೆಂಗಳೂರು[ಸೆ.19] ಬಿಗ್ ಬಾಸ್ ಶೋ ಮೂಲಕ ಅನೇಕರನ್ನು ರಂಜಿಸಿದ್ದ.. ಕಿರಿಕಿರಿಗೆ ಹೆರಾಗಿದ್ದ ಆ್ಯಂಡಿ ಮದುವೆಯಾಗುತ್ತಿದ್ದಾರೆ. ಮದುವೆಗೆ ಮುನ್ನವೇ ತೂಕ ಇಳಿಸುವ ಟಾಸ್ಕ್ ತೆಗೆದುಕೊಂಡಿದ್ದು ಸಖತ್ ವರ್ಕೌಟ್ ಮಾಡುತ್ತ ಇದ್ದಾರೆ.

ಆ್ಯಂಡಿ ಕೈ ಹಿಡಿಯುತ್ತಿರುವುದು ಅವರ ಬಾಲ್ಯದ ಗೆಳತಿ ಜನನಿ ಗಣೇಶ್. ಕುಟುಂಬಕ್ಕೆ ಮೊದಲಿನಿಂದ ಪರಿಚಯವಿದ್ದ ಜನನಿ ಅವರನ್ನು ಬಿಗ್ ಬಾಸ್ ನಲ್ಲಿ ಕೊನೆಯ ತನಕ ಇದ್ದ ಸ್ಪರ್ಧಿ ಮದುವೆಯಾಗುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 7ಗೆ ಪ್ರವೇಶ ಪಡೆಯಲಿರುವ ಸೆಲೆಬ್ರಿಟಿಗಳು

ತಿಂಗಳಿನಿಂದ ವರ್ಕೌಟ್ ಮಾಡುತ್ತಿರುವ ಆಂಡಿ ಬರೋಬ್ಬರಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 7 ಗೆ ದಿನಗಣನೆ ಆರಂಭವಾಗಿದ್ದು ಅಕ್ಟೋಬರ್ 2ನೇ ವಾರದಿಂದ ಶೋ ಶುರುವಾಗಲಿದೆ ಎಂದಿ ಕಿಚ್ಚ ಸುದೀಪ್ ತಿಳಿಸಿದ್ದಾರೆ.