ಭೂಮಿಕಾಳನ್ನು ಡ್ರಮ್ನಲ್ಲಿ ಹೂತು ಹಾಕಿದ ರೌಡಿಗಳು! ಅತ್ತ ಮಲ್ಲಿಯ ಪ್ರಾಣಕ್ಕೂ ಸಂಚಕಾರ...
ಭೂಮಿಕಾಳನ್ನು ಅಪಹರಿಸಿದ್ದ ರೌಡಿಗಳು ಅವಳನ್ನು ಡ್ರಮ್ನಲ್ಲಿ ಹೂತು ಹಾಕಿದ್ದಾರೆ. ಅತ್ತ ಶಕುಂತಲಾ ದೇವಿ ಮಲ್ಲಿಗೆ ವಿಷ ನೀಡಿದ್ದಾಳೆ. ಮುಂದೇನು?
ಇನ್ನೇನು ಭೂಮಿಕಾ ಮತ್ತು ಗೌಡಮ್ ಒಂದಾಗುತ್ತಾರೆ, ಮುಂದೇನು ಎನ್ನುವ ಹೊತ್ತಲ್ಲೇ ಬರಿಸಿಡಿಲು ಬಡಿದಿದೆ. ಭೂಮಿಕಾಳ ಅಪಹರಣವಾಗಿದೆ. ರೌಡಿಗಳು ಭೂಮಿಕಾಳನ್ನು ಎತ್ತಾಕ್ಕೊಂಡು ಹೋಗಿದ್ದಾರೆ. ಇತ್ತ ಪತ್ನಿ ಕಾಣದೇ ಗೌತಮ್ ಚಡಪಡಿಸುತ್ತಿದ್ದಾನೆ. ಗೆಳೆಯ ಆನಂದ್ ಕೂಡ ಸ್ಥಳಕ್ಕೆ ಧಾವಿಸಿದ್ದ. ಭೂಮಿಕಾಳ ಹುಡುಕಾಟ ಶುರುವಾಗಿದೆ. ಅದೇ ಇನ್ನೊಂದೆಡೆ ಜಾಣ ಭೂಮಿಕಾ ರಾಮಾಯಣದ ಸೀತಾಮಾತೆಯ ಐಡಿಯಾನೇ ಫಾಲೋ ಮಾಡಿದ್ದಳು ಭೂಮಿಕಾ. ತನ್ನನ್ನು ಅಪಹರಿಸಿರುವ ಗುರುತು ಸಿಗಲೆಂದು ಅಪಹರಣದ ದಾರಿಯುದ್ದಕ್ಕೂ ಸೀತೆ ಕುರುಹು ಬಿಟ್ಟು ಸಾಗಿರುತ್ತಾಳೆ. ಅದೇ ರೀತಿ ಭೂಮಿಕಾ ಅಪಹರಣಕಾರರು ತನ್ನನ್ನು ಕರೆದುಕೊಂಡು ಹೋಗುತ್ತಿರುವ ದಾರಿಯಲ್ಲಿ ಕಿವಿಯೋಲೆ, ಬಳೆಗಳನ್ನು ಎಸೆಯುತ್ತಾ ಸಾಗುತ್ತಾಳೆ. ಗೌತಮ್ಗೆ ಭೂಮಿಕಾಳ ಕಿವಿಯೋಲೆ ಸಿಗುತ್ತದೆ. ಇದೇ ದಾರಿಯಲ್ಲಿ ಅವಳ ಅಪಹರಣ ಮಾಡಿರುವುದು ತಿಳಿದು ಅದೇ ದಾರಿಯಲ್ಲಿ ಸಾಗುತ್ತಾನೆ.
ಅದೇ ವೇಳೆ ಹಣಕ್ಕಾಗಿ ರೌಡಿಗಳ ಕರೆ ಬರುತ್ತದೆ. ಭೂಮಿಕಾಳ ಕಥೆ ಮುಗಿಸಿದರೆ ದುಡ್ಡು ನೀಡುವುದಾಗಿ ಜೈದೇವ್ ಹೇಳಿರುತ್ತಾನೆ. ಅವನ ಬಳಿ ಹಣ ಪಡೆಯುವ ಬದಲು ನೇರವಾಗಿ ಗೌತಮ್ಗೆ ಬ್ಲ್ಯಾಕ್ಮೇಲ್ ಮಾಡಿದ್ರೆ ಹೆಚ್ಚು ಹಣ ಸಿಗುತ್ತದೆ ಎಂದು ರೌಡಿ ಕೆಂಚ ಕರೆ ಮಾಡುತ್ತಾನೆ. ಆ ಸಮಯದಲ್ಲಿ ದೇವಸ್ಥಾನದ ಗಂಟೆ ಕೇಳಿಸುತ್ತದೆ. ಭೂಮಿಕಾ ಬಿಟ್ಟ ಕುರುಹು ಮತ್ತು ಗಂಟೆಯ ನಾದ ಇವುಗಳ ಬೆನ್ನತ್ತಿ ಗೌತಮ್ ಮತ್ತು ಆನಂದ್ ಅದೇ ದಾರಿಯಲ್ಲಿ ಸಾಗುತ್ತಾರೆ. ಕೊನೆಗೂ ಕೆಂಚ ಸಿಗುತ್ತಾನೆ. ಬಂದೂಕಿನಿಂದ ಕೆಂಚನನ್ನು ಗೌತಮ್ ಹೆದರಿಸುತ್ತಾನೆ. ಈ ಆಟದ ಗನ್ ಬೇಡ ಎಂದು ಕೆಂಚ ತಮಾಷೆ ಮಾಡುತ್ತಾನೆ. ನಂತರ ಬಂದೂಕಿನಿಂದ ಕೆಂಚನ ಕಾಲಿಗೆ ಗುಂಡು ಹಾರಿಸುತ್ತಾನೆ ಗೌತಮ್.
ಪುಟ್ಟಕ್ಕನ ಮನೆಯಲ್ಲಿ ಶ್ರಾದ್ಧ ಮಾಡುವ ಹೊತ್ತಲ್ಲೇ ಸಹನಾ ಪ್ರತ್ಯಕ್ಷ! ಆದರೆ ಇವಳು ಅವಳಲ್ಲ?
ಆಗ ಭಯದಿಂದ ಕೆಂಚ ಡ್ರಮ್ನಲ್ಲಿ ಹೂತು ಹಾಕಿರುವ ಭೂಮಿಕಾಳ ಬಳಿ ಕೈ ಮಾಡುತ್ತಾನೆ. ಗಾಬರಿಗೊಂಡ ಗೌತಮ್ ಮತ್ತು ಆನಂದ್ ನೆಲದ ಒಳಗಿನ ಡ್ರಮ್ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆಯುತ್ತಾರೆ. ಭೂಮಿಕಾ ಎಚ್ಚರ ತಪ್ಪಿದ್ದಾಳೆ. ಮುಂದೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅಷ್ಟಕ್ಕೂ ಈ ಅಪಹರಣದ ಹಿಂದಿರುವ ಕುತಂತ್ರ ಬುದ್ಧಿ ಗೌತಮ್ ಚಿಕ್ಕಮ್ಮ ಶಕುಂತಲಾ ದೇವಿಯದ್ದು ಎಂದು ಬೇರೆ ಹೇಳಬೇಕಾಗಿಲ್ಲ. ಹೌದು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಮನೆಗೆ ಬಂದು ಧಮ್ಕಿ ಹಾಕಿ ಹೋಗಿದ್ದರು. ಆ ಜಮೀನು ಇರುವುದು ಚಿಕ್ಕಮಗಳೂರಿನಲ್ಲಿ. ಆ ಜಮೀನಿನ ವಿವಾದದ ಬಗ್ಗೆ ಗೌತಮ್ಗೆ ಯಾವುದೇ ಮಾಹಿತಿ ಇಲ್ಲ. ಇದನ್ನೇ ದಾಳವಾಗಿಸಿಕೊಂಡ ಶಕುಂತಲಾ ಇಬ್ಬರನ್ನೂ ಹನಿಮೂನ್ ನೆಪದಲ್ಲಿ ಚಿಕ್ಕಮಗಳೂರಿಗೆ ಕಳಿಸುವ ಪ್ಲ್ಯಾನ್ ಮಾಡಿದ್ದಳು. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್. ಇದೇ ಕಾರಣಕ್ಕೆ ಇದೀಗ ಸಂಚು ರೂಪಿಸಿದ್ದಾಳೆ.
ಅದೇ ಇನ್ನೊಂದೆಡೆ ಮನೆಯಲ್ಲಿ ಭೂಮಿಕಾ ಇಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಶಕುಂತಲಾ ಮತ್ತು ಜೈದೇವ ಮಲ್ಲಿಯ ಹಾಲಿನಲ್ಲಿ ವಿಷ ಬೆರೆಸಿ ನೀಡುವಲ್ಲಿ ಸಕ್ಸಸ್ ಆಗುತ್ತಾರೆ. ಹೊಟ್ಟೆನೋವಿನಿಂದ ಮಲ್ಲಿ ಆಸ್ಪತ್ರೆಗೆ ದಾಖಲಾಗುತ್ತಾಳೆ. ಅಲ್ಲಿಯ ವೈದ್ಯರು ತನಗೆ ಗೊತ್ತಿದ್ದು, ಮಲ್ಲಿಯ ಕೆಲಸವನ್ನು ಮುಗಿಸಲು ಅವರಿಗೆ ಹೇಳಿರುವುದಾಗಿ ಶಕುಂತಲಾ ದೇವಿ ಸಹೋದರನಿಗೆ ಹೇಳುತ್ತಾಳೆ. ಸದ್ಯ ಮಲ್ಲಿಯ ಪ್ರಾಣಕ್ಕೂ ಅಪಾಯವಿದ್ದು, ಇತ್ತು ಭೂಮಿಕಾಳ ಪ್ರಾಣಕ್ಕೂ ಅಪಾಯವಿದೆ. ಮುಂದೇನಾಗುತ್ತದೆ?
ಮಾತಾಡೋದ್ ಹೇಗಂತ ಹೇಳಿಕೊಡು... ಎನ್ನುತ್ತಲೇ ಭರ್ಜರಿ ರೀಲ್ಸ್ ಮಾಡಿದ ಸೀತಾಳಿಗೆ ಫ್ಯಾನ್ಸ್ ಫಿದಾ...