Asianet Suvarna News Asianet Suvarna News

ಮಾತಾಡೋದ್​ ಹೇಗಂತ ಹೇಳಿಕೊಡು... ಎನ್ನುತ್ತಲೇ ಭರ್ಜರಿ ರೀಲ್ಸ್​ ಮಾಡಿದ ಸೀತಾಳಿಗೆ ಫ್ಯಾನ್ಸ್​ ಫಿದಾ...

ಸೀತಾರಾಮ ಸೀರಿಯಲ್​ ಸೀತಾ ವೈಷ್ಣವಿ ಗೌಡ ಅವರು ಹೊಸ ರೀಲ್ಸ್​ ಮಾಡಿದ್ದು, ಇದಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಅವರು ಹೇಳ್ತಿರೋದೇನು?
 

Seetarama serial Seeta Vaishnavi Gowda has made new reels and fans are crazy about it suc
Author
First Published May 23, 2024, 4:13 PM IST

ಸಖಿಯೇ ಸಖಿಯೇ ಮಾತಾಡೋದ್​ ಹೇಗಂತ ಹೇಳಿಕೊಡು... ಎನ್ನುತ್ತಲೇ ಸೀತಾರಾಮ ಸೀತಾ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಸೀತಾರಾಮ ಶೂಟಿಂಗ್​ನ ಬಿಡುವಿನ ಸಮಯದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್​ ಮಾಡುವ ಸೀತಾ ಇದೀಗ ಈ ಹಾಡಿಗೆ ಭರ್ಜರಿ ರೀಲ್ಸ್​  ಮಾಡಿದ್ದಾರೆ. ಅಂದಹಾಗೆ ನಟಿಯ ಹೆಸರು ವೈಷ್ಣವಿ ಗೌಡ. ಸೋಷಿಯಲ್​ ಮೀಡಿಯಾಗಳಲ್ಲಿಯೂ ವೈಷ್ಣವಿ ಸಕತ್​ ಆ್ಯಕ್ಟೀವ್​. ಯೂಟ್ಯೂಟ್​, ಇನ್​ಸ್ಟಾಗ್ರಾಮ್​ ಸೇರಿದಂತೆ ಎಲ್ಲೆಡೆ ಇವರದ್ದೇ ಹವಾ. ಮೇಲಿಂದ ಮೇಲೆ ರೀಲ್ಸ್​ಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಸೀತಾರಾಮ ಟೀಂ ಜೊತೆ, ಇನ್ನು ಕೆಲವು ಸಲ ಸೀತಾರಾಮ ಸೀರಿಯಲ್​ ಮಗಳು ಸಿಹಿ ಜೊತೆ ಹಾಗೂ ಹಲವು ಬಾರಿ ಸಿಂಗಲ್​ ಆಗಿ ರೀಲ್ಸ್​ ಮಾಡುತ್ತಾರೆ. ಸೀತಾರಾಮ ಸೀರಿಯಲ್​ನಲ್ಲಿ ಮದುವೆಯ ಸಂಭ್ರಮದ ನಡುವೆಯೇ ಇದೀಗ ರೀಲ್ಸ್​ ಮಾಡಿದ್ದಾರೆ. 

ಇದೀಗ ಸಖಿಯೇ ಸಖಿಯೇ ಮಾತಾಡೋದ್​ ಹೇಗಂತ ಹೇಳಿಕೊಡು... ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇವರ ಡ್ರೆಸ್​ ಬಗ್ಗೆ ಸಕತ್​ ಎನ್​ಕ್ವೈರಿಗಳು ಬರುತ್ತಿವೆ. ಎಲ್ಲಿ ಖರೀದಿ ಮಾಡಿದ್ರಿ ಹೇಳಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್​ನಲ್ಲಿ ಸನ್ನಿಧಿ ಎಂದೇ ಫೇಮಸ್​ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್​ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್​ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಆಗಾಗ್ಗೆ ಸಕತ್​ ಪೋಸ್​ ಕೊಟ್ಟು ಫೋಟೋ, ವಿಡಿಯೋ ಶೂಟ್​ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್​ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್​, ಅರೆಬರೆ ಡ್ರೆಸ್​ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ.

ಹೆಣ್ಮಕ್ಳಿಗೆ ಅರ್ಧ ಹೋದ್ರೆ ನೋವಾಗತ್ತೆ, ಪೂರ್ತಿ ಹೋದ್ರೆ ಖುಷಿಯಾಗತ್ತೆ: ಸೀತಾರಾಮ ಟೀಂನಿಂದ ಹೀಗೊಂದು ಪ್ರಶ್ನೆ...

ಆದರೆ ಇದ್ಯಾವುದಕ್ಕೂ ವೈಷ್ಣವಿ ಜಗ್ಗುವುದಿಲ್ಲ. ಸೀತಾಳೇ ಬೇರೆ, ವೈಷ್ಣವಿಯೇ ಬೇರೆ ಎನ್ನುವುದು ಅವರ ಮಾತು. ಕೆಲ ದಿನಗಳ ಹಿಂದೆ  ಮಿನಿ ಫ್ರಾಕ್​ ಧರಿಸಿದ್ದ ವೈಷ್ಣವಿ ಮೇಲಿನಿಂದ ಹಾರುತ್ತಾ ರೀಲ್ಸ್​ ಒಂದನ್ನು ಮಾಡಿದ್ದರು. ಇವರ ಫ್ರಾಕ್​ ಸಂಪೂರ್ಣ  ಮೇಲಕ್ಕೆ ಹೋಗಿರುವುದನ್ನು ಗಮನಿಸಿರುವ ನೆಟ್ಟಿಗರು, ಹಾರಿಸುತ್ತಾ ಹಾರಿಸುತ್ತಾ ಏನನ್ನು ತೋರಿಸಲು ಇಚ್ಛಿಸಿದ್ದೀರಿ ಎಂದು ಪ್ರಶ್ನಿಸಿದ್ದರು. ಈ ರೀತಿಯ ಡ್ರೆಸ್​ ನಿಮಗೆ ಶೋಭೆ ತರುವುದಿಲ್ಲ ಎಂದೂ ಕೆಲವರು ಹೇಳಿದ್ದರು. ಆದರೆ ಇದೀಗ ಡ್ರೆಸ್​ಗೆ ಫುಲ್​ ಫಿದಾ ಆಗಿದ್ದು, ಇದೇ  ರೀತಿಯ ಡ್ರೆಸ್​ ಹಾಕಿ ಎನ್ನುತ್ತಿದ್ದಾರೆ. 

ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ,  ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ  ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ,  `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್‌ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.  

ಹಾರಿಸಿ ಹಾರಿಸಿ ತೋರಿಸ್ತಿರೋದೇನು? ಸೀತಾರಾಮ ಸೀತಾಳ ರೀಲ್ಸ್​ಗೆ ಸಕತ್​ ಕಮೆಂಟ್​!


Latest Videos
Follow Us:
Download App:
  • android
  • ios