ನಾದಿನಿ ನಿಶಾಳ ಕೊರಳಿಗೆ ಚಿನ್ನದ ನೆಕ್‌ಲೆಸ್ ಹಾಕಿದ ಯೂಟ್ಯೂಬರ್ ಮಧು ಗೌಡ; ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಿಶಾ-ಮಧು ಮೇಕಪ್ ಫೋಟೋಗಳು. ಅದೆಲ್ಲಾ ನಿಜವಾದ ಚಿನ್ನವೇ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.

ಕನ್ನಡ influencerಗಳಲ್ಲಿ ಟಾಪ್ ಸ್ಥಾನ ಪಡೆದಿರುವುದು ಮಧು ಗೌಡ ಮತ್ತು ನಿಶಾ-ನಿಖಿಲ್ ರವೀಂದ್ರ. ಇವರಿಬ್ಬರು ಒಂದೇ ಫ್ಯಾಮಿಲಿ ಆದ ಮೇಲೆ ವಿಡಿಯೋಗಳು ಮಿಲಿಯನ್ ವೀಕ್ಷಣೆ ಪಡೆಯುತ್ತಿದೆ.
ಕೆಲವು ತಿಂಗಳ ಹಿಂದೆ ಮಧು ಗೌಡ ಮತ್ತು ನಿಖಿಲ್ ರವೀಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಇವರ ಮದುವೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ನಿಖಿಲ್ ಸಹೋದರಿ ನಿಶಾ ಮತ್ತು ಮಧು ಆಪ್ತ ಸ್ನೇಹಿತರು. ಅತ್ತಿಗೆ-ನಾದಿನಿ ಸಂಬಂಧಕ್ಕಿಂತ ಹೆಚ್ಚಾಗಿ ಬೆಸ್ಟ್‌ಫ್ರೆಂಡ್ಸ್ ರೀತಿಯಲ್ಲಿ ಇದ್ದಾರೆ. ಒಟ್ಟಿಗೆ ನಿಂತು ಮನೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ನಿಖಿಲ್ ಕಸಿನ್ ಅಕ್ಕನ ಮದುವೆ ಮಂಗಳೂರಿನಲ್ಲಿ ನಡೆಯಿತ್ತು. ಆಗ ಮಧು ಗೌಡ ಮತ್ತು ನಿಶಾ ಮೇಕಪ್ ಮತ್ತು ಹೇರ್ ಸ್ಟೈಲ್ ಮಾಡಿಸಿಕೊಂಡರು.
ಮೊದಲು ಮಧು ಗೌಡ ಮೇಕಪ್ ಮಾಡಿಸಿಕೊಂಡು ಆನಂತರ ನಿಶಾ ಮೇಕಪ್ ಮಾಡಿಸಿಕೊಳ್ಳುವಾಗ ಮುಂದೆ ನಿಂತು ನೋಡಿಕೊಂಡಿದ್ದಾರೆ. ಸಂಪೂರ್ಣವಾಗಿ ನಿಶಾ ಲುಕ್ ಆಯ್ಕೆ ಮಾಡಿದ್ದಾರೆ.
ಪ್ರತಿ ಸಲ ನಿಶಾ ರೆಡಿಯಾಗುವಾದ ಮಧು ನಿರ್ಧಾರ ಮಾಡುತ್ತಾರೆ. ಅಲ್ಲದೆ ಇಲ್ಲಿ ಮೇಕಪ್ ಮಾಡಿಸಿಕೊಳ್ಳುವಾಗ ಮಧುನೇ ಸರ ಹಾಕುತ್ತಿರುವುದನ್ನು ನೆಟ್ಟಿಗರು ನೋಡಿ ಇದು ನಿಜವಾದ ಚಿನ್ನನಾ ಎಂದು ಕೇಳಿದ್ದಾರೆ.