ಕನ್ನಡದ ಗಾಯಕಿ ವಾಣಿ ಹರಿಕೃಷ್ಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಾಡುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರೆಕಾರ್ಡಿಂಗ್ ಅವಕಾಶಗಳು ಕಡಿಮೆ ಆದಾಗ ಬೇಸರವನ್ನು ಹಾಡುಗಳ ಮೂಲಕ ಹೊರಹಾಕುತ್ತಾರೆ. 2008ರಲ್ಲಿ ಯೋಗ ತರಬೇತಿ ಪಡೆದಿದ್ದು, ಈಗ ಮಗನೊಂದಿಗೆ ಜಿಮ್‌ಗೆ ಹೋಗುತ್ತಾರೆ. ಬಜ್ಜಿ, ವಡೆ ಇಷ್ಟವಾದರೂ ಡಯಟ್ ಮಾಡುತ್ತಿದ್ದಾರೆ. ಮನೆಯಲ್ಲಿ ಅವರೇ ಅಡುಗೆ ಮಾಡುತ್ತಾರೆ, ಮಗ ದೋಸೆ ಚೆನ್ನಾಗಿ ಹಾಕುತ್ತಾನೆ ಎಂದು ವಾಣಿ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಅದ್ಭುತ ಗಾಯಕಿ ವಾಣಿ ಹರಿಕೃಷ್ಣ. ಇತ್ತೀಚಿಗೆ ಇನ್‌ಸ್ಟಾಗ್ರಾಂನಲ್ಲಿ ಸಾಲು ಸಾಲು ಹಾಡುಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಮೂಲಕ ಅದೆಷ್ಟೋ ಮಕ್ಕಳಿಗೆ ತಾಯಿ ಆಗಿದ್ದಾರೆ. ವಾಣಿ ಅವರ ಹಾಡುಗಳಿಗೆ ಸೋತವರು ಸಾವಿರಾರು. ಬಿಡುವಿನ ಸಮಯದಲ್ಲಿ ವಾಣಿ ಏನ್ ಮಾಡ್ತಾರೆ? ತಮ್ಮ ದಿನಚರಿ ಏನು ಎಂದು ಹಂಚಿಕೊಂಡಿದ್ದಾರೆ.
'ನನ್ನ ದಿನಚರಿ ತುಂಬಾ ಸಿಂಪಲ್. ನಾನೇನು ಬ್ಯುಸಿಯಾಗಿ ಇರುವುದಿಲ್ಲ. ನನಗೆ ರೆಕಾರ್ಡಿಂಗ್‌ಗಳು ಬರುವುದು ತುಂಬಾ ಅಪರೂಪ. ನಾನು ಹರಿಕೃಷ್ಣ ಹೆಂಡತಿ ಅಂತ ಎಷ್ಟೋ ಜನ ಶೋಗಳಿಗೆ ಕರೆಯುವುದಿಲ್ಲ. ರೆಕಾರ್ಡಿಂಗ್‌ಗಳಿಗೆ ಕರೆಯುವುದಿಲ್ಲ ಆ ತರನೂ ಇರುತ್ತದೆ. ನಾನು ತುಂಬಾ ಸೆನ್ಸಿಟಿವ್ ಅಲ್ವಾ ಆಗ ಬೇಸರ ಆಗುತ್ತೆ. ನಮ್ಮ ತಾತನ ಹಾಡುಗಳ ಶೋ ಮಾಡಿದ್ದಾಗ ಅಥವಾ ಎಸ್‌ಪಿಬಿ ಅಂಕಲ್ ಶೋ ಮಾಡಿದಾಗ ಅಯ್ಯೋ ನನ್ನನ್ನು ಕರೆಯಲಿಲ್ಲ ಅಂತ ಬೇಸರ ಆಗುತ್ತೆ. ಆದರೆ ಬೇಸರವನ್ನು ಬೇರೆ ರೀತಿಯಲ್ಲಿ ಹೊರ ಹಾಕುತ್ತೀನಿ...ಸೋಷಿಯಲ್ ಮೀಡಿಯಾದಲ್ಲಿ ಹಾಡಿ ಅಪ್ಲೋಡ್ ಮಾಡುತ್ತೀನಿ. ಎಷ್ಟು ಲೈಕ್ ಶೇರ್ ಆಂಡ್ ಕಾಮೆಂಟ್ ಬರುತ್ತದೆ ಎಂದು ಕೇರ್ ಮಾಡುವುದಿಲ್ಲ' ಎಂದು ರೆಡ್‌ಎಫ್ ಸಂದರ್ಶನಲ್ಲಿ ವಾಣಿ ಮಾತನಾಡಿದ್ದಾರೆ.
ಸೀರೆ ಹಾಕ್ತೀರಾ ಓಕೆ ಆದ್ರೆ ಪದೇ ಪದೇ ಖಾಲಿ ಕತ್ತು ಯಾಕೆ?; ರಚಿತಾ ರಾಮ್ ಫೋಟೋ ನೆಟ್ಟಿಗರು ಬೇಸರ
'2008ರಲ್ಲಿ ನಾನು yoga instructor ಕೋರ್ಸ್ ಮಾಡಿದ್ದೀನಿ. ಕೋರ್ಸ್ ಮಾಡಿರುವುದಕ್ಕೆ ನೀನಾದರೂ ಮಾಡು ಎಂದು ಮನೆಯವರು ಹೇಳುತ್ತಾರೆ. ಹೀಗಾಗಿ ಮಗನ ಜೊತೆ ನಾನು ಕೂಡ ಜಿಮ್‌ಗೆ ಹೋಗುತ್ತಿದ್ದೀನಿ. ನಾನು ಸೆನ್ಸ್‌ಸಿಟಿವ್ ಆಗಿರುವ ಕಾರಣ ಅಯ್ಯೋ ಲೈಫ್ ಬೋರ್ ಆಗುತ್ತಿದೆ ಹಾಗೆ ಹೀಗೆ ಅನಲ್ಲ ಏನೋ ಒಂದು ಎನರ್ಜಿ ಬರುತ್ತೆ. ನನಗೆ ಇಷ್ಟ ಇರುವುದೆಲ್ಲಾ ಕೆಟ್ಟ ಆಹಾರಗಳು...ಬಜ್ಜಿ, ಉದ್ದಿನ ವಡೆ, ಐಸ್ ಕ್ರೀಮ್, ಚಾಕೋಲೇಟ್.....ಹೀಗಾಗಿ ಡಯಟ್ ಶುರು ಮಾಡಿದ್ದೀನಿ. ನಾನು ದುಡ್ಡು ಕೊಟ್ಟು ತಿನ್ನುವುದಿಲ್ಲ' ಎಂದು ವಾಣಿ ಹೇಳಿದ್ದಾರೆ.
ರೊಮ್ಯಾಂಟಿಕ್ ಹಾಡು ಬರೆಯುವಾಗ ಅವಳನ್ನು ನೆನಪಿಸಿಕೊಳ್ಳುತ್ತಾರೆ; ಯೋಗರಾಜ್ ಭಟ್ರು ಪತ್ನಿ ಶಾಕಿಂಗ್ ಹೇಳಿಕೆ
'ಮನೆಯಲ್ಲಿ ಜಾಸ್ತಿ ಅಡುಗೆ ಮಾಡುವುದೇ ನಾನು. ನಾವು ಲವ್ ಮಾಡುತ್ತಿದ್ದ ಸಮಯದಲ್ಲಿ ನಮ್ಮ ಮನೆಗೆ ಬಂದು ಚಿಕನ್ ಫ್ರೈ ಮಾಡಿದ್ದರು ಅದರೆ ಈಗ ಅವರು ಕೂಡ ಡಯಟ್ ಮೇಲೆ ಗಮನ ಕೊಡುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ನನ್ನ ಮಗ ದೋಸೆ ಚೆನ್ನಾಗಿ ಹಾಕುತ್ತಾನೆ. ಅದು ಬಿಟ್ಟರೆ ನಮ್ಮ ಮನೆಯಲ್ಲಿ ನಮಗೆ ಮೆಂಥ್ಯ ದೋಸೆ ತುಂಬಾ ಇಷ್ಟವಾಗುತ್ತದೆ' ಎಂದಿದ್ದಾರೆ ವಾಣಿ.
ಮಗಳು ವಂಶಿಕಾಗೆ ಟ್ಯಾಲೆಂಟ್ ಬಂದಿರೋದು ನನ್ನಿಂದ ಅಂತಾರೆ ಆದರೆ ಅವರಮ್ಮ ಕೂಡ ಬೆಸ್ಟ್ ಡ್ಯಾನ್ಸರ್: ಮಾಸ್ಟರ್ ಆನಂದ್
