ವೀಕ್ಷಕರು 'ಬಿಗ್ ಬಾಸ್' ರಿಯಾಲಿಟಿ ಶೋ ಯಾಕೆ ನೋಡಬೇಕು?
ಇತ್ತೀಚೆಗೆ ಹಳ್ಳಿಗಳಲ್ಲಿ ಕೂಡ ಬಹುತೇಕ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಎಲ್ಲೋ ಕೆಲವೊಂದು ಊರುಗಳಲ್ಲಿ ಒಂದೋ ಎರಡೋ 'ಕೂಡುಕುಟುಂಬ' ಕಾಣಲು ಸಿಗಬಹುದಾದರೂ ಅವು ಕೂಡ ಮೊದಲಿನಷ್ಟು ಜನರಿಂದ ತುಂಬಿಕೊಂಡಿಲ್ಲ. ಹಲವು ದಶಕಗಳ ಮೊದಲು, ಯಾವುದೇ ಊರಿನ ಹಲವು ಕುಟುಂಬಗಳಲ್ಲಿ ಐವತ್ತು, ನೂರು ಜನರುಗಳು ಇರುತ್ತಿದ್ದರು.

ಕಲರ್ಸ್ ಕನ್ನಡದಲ್ಲಿ ಮುಂದಿನ ತಿಂಗಳ 8 ರಂದು (8 ಅಕ್ಟೋಬರ್ 2023 ) 'ಬಿಗ್ ಬಾಸ್' ಸೀಸನ್ 10 ಪ್ರಸಾರ ಆಗಲಿರುವುದು ಗೊತ್ತೇ ಇದೆ. ಸ್ಪರ್ಧಿಗಳು ಯಾರೆಲ್ಲ ಇರಲಿದ್ದಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಆದರೂ ಸಹ ಕೆಲವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದರೂ ಅದಕ್ಕಿನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ. ಒಟ್ಟಿನಲ್ಲಿ 16 ಸ್ಪರ್ಧಿಗಳಂತೂ ಈ ಬಾರಿಯೂ ಇರಲಿದ್ದಾರೆ, ಯಾರು ಎನ್ನುವುದಷ್ಟೇ ಇನ್ನುಳಿದ ಪ್ರಶ್ನೆ.
ಅದೆಲ್ಲ ಸರಿ, ಆದರೆ "ಕನ್ನಡ ವೀಕ್ಷಕರು ಯಾಕೆ 'ಬಿಗ್ ಬಾಸ್' ರಿಯಾಲಿಟಿ ಶೋ ನೋಡಬೇಕು? ಅದರಿಂದ ಸಿಗುವುದಾದರೂ ಎನು?" ಎಂಬುದು ಕೆಲವು ಜನರ ಪ್ರಶ್ನೆ! ಅಲ್ಲಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ, ಗುಂಪುಗಳ ಮಧ್ಯೆ ಕುಳಿತಾಗ ಈ ಪ್ರಶ್ನೆ ಹಲವರ ಕಿವಿಗೆ ಬಿದ್ದಿರುತ್ತದೆ. ಇದಕ್ಕೆ ಉತ್ತರವೂ ಸಹ ಹಲವು ವಿಧಗಳಲ್ಲಿ ಸಿಗಬಹುದು. ಆದರೆ ನಾವಿಲ್ಲಿ ಥಟ್ಟನೇ ಹೊಳೆಯುವ ಒಂದು ಅಂಶದ ಬಗ್ಗೆ ಹೇಳಬಹುದು.
ಅವಿಭಕ್ತ ಕುಟುಂಬದ ಅನುಭವ
ಹೌದು, ಇತ್ತೀಚೆಗೆ ಹಳ್ಳಿಗಳಲ್ಲಿ ಕೂಡ ಬಹುತೇಕ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಎಲ್ಲೋ ಕೆಲವೊಂದು ಊರುಗಳಲ್ಲಿ ಒಂದೋ ಎರಡೋ 'ಕೂಡುಕುಟುಂಬ' ಕಾಣಲು ಸಿಗಬಹುದಾದರೂ ಅವು ಕೂಡ ಮೊದಲಿನಷ್ಟು ಜನರಿಂದ ತುಂಬಿಕೊಂಡಿಲ್ಲ. ಹಲವು ದಶಕಗಳ ಮೊದಲು, ಯಾವುದೇ ಊರಿನ ಹಲವು ಕುಟುಂಬಗಳಲ್ಲಿ ಐವತ್ತು, ನೂರು ಜನರುಗಳು ಇರುತ್ತಿದ್ದರು. ಮನೆಯ ಕೆಲಸ ಕಾರ್ಯಗಳನ್ನು ಹೆಚ್ಚುಕಡಿಮೆ ಮನೆಯವರೇ ನಿರ್ವಹಿಸುತ್ತಿದ್ದರು. ಒಂದು ಕುಟುಂಬದ ಜಮೀನು ಸಹ ನೂರಾರು ಎಕರೆ ಇರುತ್ತಿದ್ದವು. ಮನೆಯ ತುಂಬಾ ಸದಸ್ಯರಿದ್ದು, ಮನೆ ಯಾವತ್ತೂ ಮದುವೆ ಮನೆಯಂತೆ ಕಂಗೊಳಿಸುತ್ತಿದ್ದವು.
ಆದರೆ ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿದ್ದು, ಮನೆಗಳಲ್ಲಿ ನಾಲ್ಕೋ ಐದೋ ಜನರು ಇರುವುದೇ ಕಾಮನ್ ಎಂಬಂತಾಗಿದೆ. ಹೀಗಾಗಿ ಇಂದಿನ ಜನರೇಶನ್ ಮಕ್ಕಳಿಗೆ ಹದಿನಾರು ಜನರಿರುವ ಕುಟುಂಬವೊಂದು ಹೇಗಿರುತ್ತದೆ ಎಂಬ ಕಲ್ಪನೆ ಕೂಡ ಇಲ್ಲ. ಅದನ್ನು ಅವರು ಬಿಗ್ ಬಾಸ್ ನೋಡುವ ಮೂಲಕ ತಿಳಿಯಬಹುದು. ಅವಿಭಕ್ತ ಕುಟುಂಬಕ್ಕೂ ಬಿಗ್ ಬಾಸ್ ಮನೆಗೂ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವಿದೆ ಎಂಬುದನ್ನು ಮರೆಯುವಂತಿಲ್ಲ.
ಕುಟುಂಬವೊಂದು ಇದೆ ಎಂದ ಮೇಲೆ ಹಲವು ಮನುಷ್ಯರ ಹಲವು ಮನಸುಗಳು ಇರುತ್ತವೆ. ಅವೆಲ್ಲವೂ ಒಂದೇ ರೀತಿ ಯೋಚಿಸಲು, ಕೆಲಸಕಾರ್ಯ ಮಾಡಲು ಸಾಧ್ಯತೆಯೇ ಇಲ್ಲ. ಒಂದು ಮನೆಯಲ್ಲಿ ಇರುವ ಜನರ ಮಧ್ಯೆ ಪರಸ್ಪರ ಪರಿಚಯವಂತೂ ಇದ್ದೇ ಇರುತ್ತದೆ. ಆದರೆ ಎಲ್ಲರ ಮಧ್ಯೆ ಪ್ರೀತಿ, ಕಾಳಜಿ ಮನೆ ಮಾಡಿರುವುದಿಲ್ಲ. ಹಲವರ ಮಧ್ಯೆ ಸದಾ ಕೆಲವೊಂದು ವಿಷಯಕ್ಕೆ ಸ್ಪರ್ಧೆ, ಮನಸ್ತಾಪ ಹಾಗೂ ಕೋಪ-ತಾಪಗಳು ಸರ್ವೇ ಸಾಮಾನ್ಯ.
ನನ್ನ ಮಗನಿಗೆ ಹೈಪ್ ಕೊಡಬೇಡಿ, ತಂದೆ ಮ್ಯಾಟರ್ ಆಗಲ್ಲ ತಾಯಿ ಖುಷಿನೇ ಮುಖ್ಯ: ನಿಖಿಲ್ ಕುಮಾರಸ್ವಾಮಿ
ಮನೆಯಲ್ಲಿ ಯಜಮಾನ ಇಲ್ಲದ ವೇಳೆ ಒಂದು ರೀತಿಯಲ್ಲಿ ಇರುವ ಸದಸ್ಯರು ಯಜಮಾನನಿಲ್ಲ ಎಂದಾದರೆ ಮತ್ತೊಂದು ರೀತಿಯಲ್ಲಿ ಇರುತ್ತಾರೆ. ನೆಂಟರು ಬಂದಾಗ ಹೇಗೋ ಇರುವ ಸದಸ್ಯರು ಮನೆಯವಷ್ಟೇ ಇರುವಾಗ ಮತ್ತೊಂದು ಬಗೆಯಲ್ಲಿದ್ದು ಅಚ್ಚರಿ ಹುಟ್ಟಿಸುತ್ತಾರೆ. ಬಿಗ್ ಬಾಸ್ ಮನೆಗೂ ಅವಿಭಕ್ತ ಕುಟುಂಬಕ್ಕೂ ಇರುವ ವ್ಯತ್ಯಾಸ ಎಂದರೆ, ಬಗ್ ಬಾಸ್ ಮನೆಯಲ್ಲಿ ಮಕ್ಕಳು-ಮುದುಕರನ್ನು ಹೊರತುಪಡಿಸಿ ಕೇವಲ ದೊಡ್ಡವರೇ ಇರುತ್ತಾರೆ ಹಾಗೂ ಪರಸ್ಪರ ಸಂಬಂಧಗಳು ಇರುವುದಿಲ್ಲ.
ನೆನಪಿರಲಿ ಪ್ರೇಮ್ ಮಗಳು ಅಂತ ಹೇಳ್ಕೊಂಡು ಬೆಳೆಯೋ ಅಗತ್ಯ ಇರಲಿಲ್ಲ: ನಟಿ ಅಮೃತಾ
ಒಟ್ಟಿನಲ್ಲಿ, ಕನ್ನಡದ ಬಿಗ್ ಬಾಸ್ ನೋಡುವ ಮೂಲಕ ಹಲವು ವೀಕ್ಷಕರು ತಾವಿನ್ನೂ ನೋಡಿಲ್ಲದ 'ಅವಿಭಕ್ತ ಕುಟುಂಬ'ದ ಅನುಭವವನ್ನು ನೋಡುವ ಮೂಲಕ ಪಡೆಯಬಹುದು. ಇದೊಂದೇ ಅಲ್ಲದೇ ಇನ್ನೂ ಹತ್ತು-ಹಲವು ಅನುಭವಗಳನ್ನು ಅಲ್ಲಿನ ಸ್ಪರ್ಧಿಗಳ ಮೂಲಕ ಪಡೆಯಬಹುದು. ಅವೆಲ್ಲವನ್ನೂ ಅಗತ್ಯಕ್ಕನುಗುಣವಾಗಿ ಕಾಲಕಾಲಕ್ಕೆ ಅಪ್ಡೇಟ್ ಮಾಡುವ ಪ್ರಯತ್ನ ನಮ್ಮ ಕಡೆಯಿಂದ ಆಗಲಿದೆ. ಬಿಗ್ ಬಾಸ್ ನೋಡುವ ಮೂಲಕ 'ಈಗ ರಿಯಲ್ ಆಗಿ ಮಿಸ್ ಆಗಿರುವ ಹಲವು ಅಂಶಗಳನ್ನು ರೀಲ್ ಮೂಲಕ ನೋಡಲು ಸಾಧ್ಯ' ಎಂಬ ಮಾತಂತೂ ಸತ್ಯ.
ಇನ್ನೇನು, ಬಿಗ್ ಬಾಸ್ ಪ್ರಸಾರದ ದಿನಾಂಕ ಬಂದೇ ಬಿಡ್ತು, ನೋಡಲು ರೆಡಿಯಾಗಿ!