ನನ್ನ ಮಗನಿಗೆ ಹೈಪ್ ಕೊಡಬೇಡಿ, ತಂದೆ ಮ್ಯಾಟರ್ ಆಗಲ್ಲ ತಾಯಿ ಖುಷಿನೇ ಮುಖ್ಯ: ನಿಖಿಲ್ ಕುಮಾರಸ್ವಾಮಿ
ಮಗ ಸಾಮಾನ್ಯರಂತೆ ಬೆಳೆಯಬೇಕು. ನಾವು ಬೆಳೆಯುತ್ತಿದ್ದಂತೆ ತಂದೆ ತಾಯಿ ಪ್ರಾಮುಖ್ಯತೆ ಅರ್ಥವಾಗುತ್ತದೆ ಎಂದ ನಿಖಿಲ್ ಕುಮಾರ್...

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ಕೊಂಚ ಟೈಂ ಮಾಡಿಕೊಂಡು ಫ್ಯಾಮಿಲಿ ಜೊತೆ ಆಗಾಗ ಜಾಲಿ ಟ್ರಿಪ್ ಮಾಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಮಾಧ್ಯಮಗಳಿಂದ ದೂರ ಮಾಡುತ್ತಾರೆ ಆದರೆ ಅಭಿಮಾನಿಗಳ ಒತ್ತಾಯಕ್ಕೆ ನಿಖಿಲ್ ಆಗಾಗ ಜನರಿಗೆ ತಮ್ಮ ಮಗನ ಬಗ್ಗೆ ಅಪ್ಡೇಟ್ ಮಾಡುತ್ತಾರೆ. ಹೀಗೆ ಮಗನ ಫೋಟೋ ವೈರಲ್ ಆಗುವುದರ ಬಗ್ಗೆ ನಿಖಿಲ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
'ನಮ್ಮನ್ನು ನೋಡಿ ಸುತ್ತಮುತ್ತ ಜನರು ಬಂದಾಗ ನಾವು ಯಾರೂ ತಡೆಯುವುದಿಲ್ಲ ನಮ್ಮ ತಂದೆ ಕೂಡ ಹಾಗೆ ಮಾಡುವುದಿಲ್ಲ. ಯಾರೋ ಒಬ್ಬರು ಮಗನ ಫೋಟೋ ಹಿಡಿದುಬಿಟ್ಟರು. ಜನರು ಏನ್ ಏನೋ ಅಪ್ಲೋಡ್ ಮಾಡುವ ಬದಲು ನಾನೇ ಹಾಕುವುದು ಬೆಸ್ಟ್ ಎಂದು ಅಪ್ಲೋಡ್ ಮಾಡುತ್ತೀನಿ. ನಮಗೆ ಬಹಳ ಬೇಸರವಾಗಿದೆ. ಯಾಕೆ ಬೇಕು ಅವ್ಯಾನ್‌ಗೆ wrong exposures? ನಾಮರ್ಲ್ ಆಗಿ ನೆಮ್ಮದಿಯಾಗಿ ಇರಬೇಕು ಯಾಕೆ ನಾವು ಪ್ರೆಶರ್ ಹಾಕಬೇಕು' ಎಂದು ನಿಖಿಲ್ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೃಷ್ಣನಾಗಿ ಮಿಂಚಿದ ಅವ್ಯಾನ್ ದೇವ್; ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಯಲ್ಲಿ ಸಂಭ್ರಮ!
'ಮೊನ್ನೆ ನನ್ನ ಪತ್ನಿ ಜೊತೆ ಮಾತನಾಡುವಾಗ ಅದೇ ಎಕ್ಸ್‌ಪ್ರೆಸ್ ಮಾಡುತ್ತಿದ್ದೆ. ಯಾವುದೇ ರಿಲೇಷನ್‌ಶಿಪ್ ಇರಲಿ ಒಂದು ದಿನ ಗುಡ್ ಡೇ ಮತ್ತೊಂದು ದಿನ ಬ್ಯಾಡ್ ಡೇ ಇದ್ದೇ ಇರುತ್ತದೆ. ನಾವು ಒಂದು ವಿಚಾರಕ್ಕೆ ಬೇಸರ ಮಾಡಿಕೊಂಡಿರುತ್ತೀವಿ ಅವರು ಮತ್ತೊಂದು ವಿಚಾರಕ್ಕೆ ಬೇಸರ ಮಾಡಿಕೊಂಡಿರುತ್ತಾರೆ...ಇದು ಗಂಡ ಹೆಂಡತಿ, ತಂದೆ ಮಗ, ತಾಯಿ ಮಗ ಹೀಗೆ ಯಾವ ಸಂಬಂಧ ಇರಲಿ ಈ ರೀತಿ ನಡೆಯುತ್ತದೆ. ಮನುಷ್ಯ ಅಂದ್ಮೇಲೆ ಎಲ್ಲಾ ರೀತಿ ಭಾವನೆಗಳು ಇರುತ್ತದೆ. ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆ ತಾಯಿ ಜೊತೆ ಜಗಳ ಮಾಡಿದಾಗ ನಮ್ಮ ತಂದೆ ತಾಯಿ ಎಷ್ಟು ಬೇಸರ ಮಾಡಿಕೊಂಡಿದ್ದರು ಅಂತ ಈಗ ಯೋಚನೆ ಮಾಡುತ್ತೀವಿ. ನನ್ನ ಮಗ ಬೆಳೆಯುತ್ತಿರುವುದನ್ನು ನೋಡುತ್ತಿದ್ದೀನಿ ತಾಯಂದಿರುವ ಮಾಡುವುದು ಮಹಾ ತ್ಯಾಗ. ತಾಯಿ ಪಡುವ ಕಷ್ಟ ನೋಡಿದರೆ ತಂದೆ ಮ್ಯಾಟರ್ ಆಗುವುದಿಲ್ಲ' ಎಂದು ನಿಖಿಲ್ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ 33ನೇ ಹುಟ್ಟುಹಬ್ಬ; ಫ್ಯಾಮಿಲಿ- ಫ್ಯಾನ್ಸ್ ಜೊತೆ ಆಚರಣೆ
'ಒಂದು ವಯಸ್ಸು ಆದ್ಮೇಲೆ ತಂದೆ ತುಂಬಾ ಮುಖ್ಯ ಆಗುತ್ತಾರೆ. ನಮ್ಮ ಜೀವನದ ಪ್ರತಿ ಹಂತದಲ್ಲೂ ತಂದೆ ಮುಖ್ಯವಾಗುತ್ತಾರೆ ಕುಟುಂಬಕ್ಕೆ ಪಿಲ್ಲರ್ ಅಂದ್ರೆ ತಂದೆ. ಆದರೂ ಕೂಡ ತಾಯಿ ಮಾಡುವ ತ್ಯಾಗ ದೊಡ್ಡದು. ನಮ್ಮ ತಂದೆ ಮೇಲೆ ಒಂದು ಮಾತು ಹೇಳುತ್ತೀವಿ ಆದರೆ ತಂದೆ ಮೇಲೆ ಏನೂ ಹೇಳುವುದಿಲ್ಲ ಅವರ ಜೊತೆ ಜಗಳ ಮಾಡುವುದಿಲ್ಲ. ಗಂಡು ಮಕ್ಕಳು ತಾಯಿಗೆ ತುಂಬಾ ಕ್ಲೋಸ್ ಆಗಿರುತ್ತಾರೆ. ಏನೋ ಒಂದು ಸಾಫ್ಟ್ ಕಾರ್ನರ್. ಯಾವುದೇ ಕಾರಣ ಇರಲಿ ತಂದೆ ತಾಯಿಯನ್ನು ತಾಳ್ಮೆ ಮತ್ತು ಪ್ರೀತಿಯಿಂದ ಕಾಣುವುದು ಒಳ್ಳೆಯದು' ಎಂದಿದ್ದಾರೆ ನಿಖಿಲ್.