ನೆನಪಿರಲಿ ಪ್ರೇಮ್ ಮಗಳು ಅಂತ ಹೇಳ್ಕೊಂಡು ಬೆಳೆಯೋ ಅಗತ್ಯ ಇರಲಿಲ್ಲ: ನಟಿ ಅಮೃತಾ
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಮೃತಾ ಪ್ರೇಮ್. ಇಷ್ಟು ವರ್ಷ ಎಲ್ಲಿದ್ದೆ ಎಂದು ಜನರು ಪ್ರಶ್ನೆಗೆ ಇಲ್ಲಿದೆ ಉತ್ತರ......
ಕನ್ನಡ ಚಿತ್ರರಂಗದ ನೆನಪಿರಲಿ ಪ್ರೇಮ್ ಅವರ ಮುದ್ದಿನ ಮಗಳು ಅಮೃತಾ ಪ್ರೇಮ್ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಾಗಭೂಷಣ್‌ಗೆ ಜೋಡಿಯಾಗಿ ಟಗರು ಪಲ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ಸಾಂಗ್ ಮತ್ತು ಟ್ರೈಲರ್ ಸಖತ್ ಸುದ್ದಿಯಾಗುತ್ತಿದೆ.
ನಾವು ಸ್ಟಾರ್ ಮಕ್ಕಳಲ್ಲ ಎಲ್ಲರಂತೆ ಸಾಮಾನ್ಯರು ಎನ್ನುವ ರೀತಿಯಲ್ಲಿ ಅಪ್ಪ ಅಮ್ಮ ಬೆಳೆಸಿದ್ದಾರೆ. ನಾನು ಸಿಂಪಲ್ Down to earth ಅಂದ್ರೆ ಸಂಪೂರ್ಣ ಕ್ರೆಡಿಟ್ ಅವರಿಗೆ ಹೋಗಬೇಕು ಎಂದು ಅಮೃತಾ ಹೇಳಿದ್ದಾರೆ.
ಚಿಕ್ಕ ವಯಸ್ಸಿನಿಂದ ಮಾಧ್ಯಮಗಳಿಂದ ದೂರ ಇರಿಸಿದ್ದರು. ಸ್ಕೂಲ್‌ನಲ್ಲಿ ಪ್ರೇಮ್ ಮಗಳು ಎಂದು ಸೇರಿಸಿರಲಿಲ್ಲ. ನನ್ನ ಸ್ನೇಹಿತರಿಗೂ ತುಂಬಾ ತಡವಾಗಿ ತಿಳಿಯಿತ್ತು.
ಪ್ರೇಮ್ ಮಗಳು ಎಂದು ಹೇಳಿಕೊಂಡು ಬೆಳೆಯುವ ಅಗತ್ಯ ಇರಲಿಲ್ಲ. ಸ್ಕೂಲ್‌ಗೆ ಅಮ್ಮ ಬರುತ್ತಾರೆ 10ನೇ ಕ್ಲಾಸ್ ಮೀಟಿಂಗ್‌ಗೆ ಅಪ್ಪ ಬಂದಿದ್ದರು.
ಓದುವ ವಿಚಾರದಲ್ಲಿ ಮನೆಯಲ್ಲಿ ಯಾರೂ ಪ್ರೆಶರ್ ಮಾಡುವುದಿಲ್ಲ. ದಿನಪೂರ್ತಿ ಕುಳಿತುಕೊಂಡು ಓದುವುದಿಲ್ಲ ಪರೀಕ್ಷೆ ಹಿಂದಿನ ದಿನ ಓದುವೆ ಕ್ಲಾಸ್‌ನಲ್ಲಿ ಪಾಠ ಕೇಳಿಸಿಕೊಳ್ಳುವೆ ಎಂದು ಅಮೃತಾ ಹೇಳಿದ್ದಾರೆ.