ಮುತ್ತು ಕೊಡೋದು ಹೇಗೆ ಅಂತನೇ ಗೊತ್ತಿರ್ಲಿಲ್ಲ... ಪುಟ್ಟಗೌರಿ ಮದ್ವೆಯಲ್ಲಿ ಕಿಸ್ ಮಾಡಿ ಅಂದಾಗ...
ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಮನೆಮಾತಾಗಿರುವ ನಟಿ ರಂಜಿನಿ ರಾಘವನ್ ಅವರು ಆನ್ಸ್ಕ್ರೀನ್ನಲ್ಲಿ ಮೊದಲ ಬಾರಿಗೆ ಕಿಸ್ ಕೊಟ್ಟ ಅನುಭವ ಹೇಳಿದ್ದು ಹೀಗೆ...
ಪುಟ್ಟಗೌರಿ ಮದುವೆ ಸೀರಿಯಲ್ ಮೂಲಕ ಮನೆಮಾತಾದ ನಟಿ ರಂಜನಿ ರಾಘವನ್. ಇದಾದ ಬಳಿಕ ಕನ್ನಡತಿ ಸೀರಿಯಲ್ನಲ್ಲಿಯೂ ಮಿಂಚಿದ ನಟಿ, ಸದ್ಯ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಬಿಜಿಯಾಗಿದ್ದಾರೆ. 2014ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಪುಟ್ಟಗೌರಿ ಮದುವೆ' ಸೀರಿಯಲ್ನ ಕೀರ್ತಿಯಿಂದಲೇ ಇಂದು ನಟಿ ಎತ್ತರಕ್ಕೆ ಬೆಳೆದು ನಿಂತಿದ್ದು, ಸಂದರ್ಶನವೊಂದರಲ್ಲಿ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮೊದಲ ಆನ್ಸ್ಕ್ರೀನ್ ಕಿಸ್ ಕುರಿತು ರಂಜಿನಿ ಅವರಿಗೆ ಪ್ರಶ್ನೆ ಕೇಳಲಾಯಿತು. ಅಂದರೆ ಸಿನಿಮಾ ಅಥವಾ ಸೀರಿಯಲ್‌ನಲ್ಲಿ ಮೊದಲಿಗೆ ಮುತ್ತು ಕೊಟ್ಟಿದ್ದು ಯಾರಿಗೆ? ಅದರ ಫೀಲಿಂಗ್ ಹೇಗಿತ್ತು ಎನ್ನುವ ಬಗ್ಗೆ ಕೇಳಲಾಯಿತು. ಪ್ರಶ್ನೆ ಕೇಳುತ್ತಿದ್ದಂತೆಯೇ ನಾಚಿ ನೀರಾದ ರಂಜಿನಿಯವರು, ಅಬ್ಬಾ ಎನ್ನುತ್ತಲೇ ಉತ್ತರಿಸಿದರು. ಮೊದಲಿಗೆ ಮುತ್ತು ಕೊಟ್ಟಿದ್ದು, ಪುಟ್ಟಗೌರಿ ಮದುವೆ ಸೀರಿಯಲ್‌ನಲ್ಲಿ. ಆಗಿನ್ನೂ ಕಾಲೇಜು ಓದುತ್ತಿದ್ದೆ. ಮುತ್ತು ಹೇಗೆ ಕೊಡುವುದು ಎಂದೇ ತಿಳಿದಿರಲಿಲ್ಲ. ಆದರೆ ನಾಯಕ ರಕ್ಷಿತ್ ಅವರಿಗೆ ಮುತ್ತು ಕೊಡಬೇಕಿತ್ತು. ಕೆನ್ನೆಗೆ ಮುತ್ತು ಕೊಟ್ಟೆ. ಅದು ತುಂಬಾನೇ ಕಷ್ಟದ ಸನ್ನಿವೇಶ ಆಗಿತ್ತು. ಇದೇ ನನ್ನ ಮೊದಲ ಆನ್ಸ್ಕ್ರೀನ್ ಕಿಸ್ ಎನ್ನುತ್ತ ನಾಚಿಕೊಂಡರು.
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್ ಹಂಟರ್ ಇಮ್ರಾನ್ ಹೇಳಿದ್ದೇನು?
ಇನ್ನು ರಂಜನಿ ರಾಘವನ್ ಕುರಿತು ಹೇಲುವುದಾದರೆ, ಇವರು 1994ರ ಮಾರ್ಚ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ ಇವರು. ನಟಿಯ ಜೊತೆಗೆ ಇವರು ಲೇಖಕಿಯೂ ಹೌದು. 2014ರಲ್ಲಿ 'ಪುಟ್ಟಗೌರಿ ಮದುವೆ' ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ರಂಜಿನಿ, ಬಳಿಕ ಪೌರ್ಣಮಿ ಎಂಬ ಮಲಯಾಳಿ ಧಾರಾವಾಹಿಯಲ್ಲಿ ಅಭಿನಯಿಸಿದರು. 2019ರಲ್ಲಿ 'ಇಷ್ಟದೇವತೆ' ಎಂಬ ಸೀರಿಯಲ್ನಲ್ಲಿಯೂ ಅದ್ಭುತ ನಟನೆ ನೀಡಿದರು. ರಂಜನಿ 2017ರಲ್ಲಿ 'ರಾಜಹಂಸ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು ನಟಿಯ ಜೊತೆಗೆ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡರು. ಇಷ್ಟದೇವತೆ ಸೀರಿಯಲ್‌ಗೆ ತಾವೇ ಕಥೆ ಬರೆದು ಕ್ರಿಯೇಟಿವ್ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಕನ್ನಡತಿ ಎಂಬ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದರು. ಈ ಧಾರಾವಾಹಿ ಹಿಟ್ ಆಗುವುದರ ಜೊತೆಗೆ ರಂಜನಿ ಜನಪ್ರಿಯತೆ ಕೂಡ ಹೆಚ್ಚಿದೆ. ಶೀರ್ಷಿಕೆಗೆ ತಕ್ಕಂತೆ ಕನ್ನಡತಿ ಧಾರಾವಾಹಿಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲಾಗಿತ್ತು. ಕಥೆ ಡಬ್ಬಿ ಎಂಬ ಪುಸ್ತಕ ಬರೆದರು. 2022ರ ಡಿಸೆಂಬರ್ 7ರಂದು ಸ್ವೈಪ್ ಅಪ್ ಎಂಬ ಇನ್ನೊಂದು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಸೆಕೆಂಡ್ಹ್ಯಾಂಡ್ ಬಟ್ಟೆ ಹಾಕೋ ಅಕ್ಷಯ್ ಪುತ್ರ: ಆರವ್ ಜೀವನದ ಇಂಟರೆಸ್ಟಿಂಗ್ ವಿಷ್ಯ ಬಿಚ್ಚಿಟ್ಟ ನಟ