Asianet Suvarna News Asianet Suvarna News

ಸೆಕೆಂಡ್​ಹ್ಯಾಂಡ್​ ಬಟ್ಟೆ ಹಾಕೋ ಅಕ್ಷಯ್​ ಪುತ್ರ: ಆರವ್​ ಜೀವನದ ಇಂಟರೆಸ್ಟಿಂಗ್​ ವಿಷ್ಯ ಬಿಚ್ಚಿಟ್ಟ ನಟ

ಆರವ್​ ಅವರ ಸಿಂಪಲ್​ ಲೈಫ್​ ಕುರಿತು ಇಂಟರೆಸ್ಟಿಂಗ್​ ವಿಷಯ ಬಹಿರಂಗಗೊಳಿಸಿದ್ದಾರೆ  ನಟ ಅಕ್ಷಯ ಕುಮಾರ್.
 

Akshay Kumars son Aarav buys second hand clothes  He is simple  washes his own clothes suc
Author
First Published May 21, 2024, 2:55 PM IST

ಸ್ಟಾರ್​ ನಟರ ಮಕ್ಕಳಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುವುದು ಸುಲಭ. ಇದೇ ಕಾರಣಕ್ಕೆ ಇಂದು ಹಲವು ಸ್ಟಾರ್​ ನಟ-ನಟಿಯರ ಮಕ್ಕಳು ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಅಪ್ಪ-ಅಮ್ಮನ ಹೆಸರಿನ ಬಲದ ಮೇಲೆ ಇವರಿಗೆ ಅವಕಾಶಗಳು ದೊರೆಯುತ್ತವೆ. ಆದರೆ ಇನ್ನು ಕೆಲವು ನಟ-ನಟಿಯರ ಮಕ್ಕಳು ಗ್ಲಾಮರಸ್​  ಪ್ರಪಂಚದಿಂದ ದೂರವೇ ಇರಲು ಇಷ್ಟಪಡುತ್ತಾರೆ. ಅಂಥವರಲ್ಲಿ ಒಬ್ಬರು ಅಕ್ಷಯ್‌ ಕುಮಾರ್‌ ಪುತ್ರ ಆರವ್‌.  ಆರವ್​ ಅವರಿಗೆ ಗ್ಲಾಮರ್‌ ಲೋಕದ ಬಗ್ಗೆ  ಆಸಕ್ತಿಯೇ ಇಲ್ಲವಂತೆ. ಈ ಕುರಿತು ಖುದ್ದು ಅಕ್ಷಯ್​ ಅವರು ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಮಗನ ಅನೇಕ ಕ ಕುತೂಹಲದ ವಿಷಯಗಳನ್ನೂ ಅವರು ತೆರೆದಿಟ್ಟಿದ್ದಾರೆ. 

ಕ್ರಿಕೆಟಿಗ ಶಿಖರ್ ಧವನ್ ಅವರ ಟಾಕ್ ಶೋನಲ್ಲಿ ಚಾಟ್ ಮಾಡುವಾಗ, ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ತಮ್ಮ ಮಗನ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಮಗ ಆರವ್​  ತುಂಬಾ ಸರಳ ಹುಡುಗ ಎಂದಿದ್ದಾರೆ ಅಕ್ಷಯ್​.  ಮಗ ಈಗ ಲಂಡನ್‌ನ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾನೆ.  ಆತ  ತನ್ನ 15 ನೇ ವಯಸ್ಸಿನಲ್ಲಿ ಮನೆ ತೊರೆದಿದ್ದ. ಈ ಬಗ್ಗೆ ನನಗೆ ಮೊದಲು ತುಂಬಾ ಆತಂಕವಿತ್ತು. ಆತನನ್ನು ಒಂಟಿಯಾಗಿ ಬಿಡಲು ಭಯವಾಗಿತ್ತು.  ಮೊದಲು ಹಿಂಜರಿದಿದ್ದೆ. ಆದರೆ ಅಂತಿಮವಾಗಿ ಆರವ್ ತನ್ನ  ಸ್ವಂತ ಜೀವನ ಆಯ್ಕೆ ಮಾಡಿದ್ದು ಒಳ್ಳೆಯದ್ದು ಎನಿಸಿತು. ಆತನ ಬಗ್ಗೆ ನನಗೆ ಹೆಮ್ಮೆಯಿದೆ ಎಂದಿದ್ದಾರೆ ಅಕ್ಷಯ್​.  "ನನ್ನ ಮಗ ಆರವ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಅವನು 15 ನೇ ವಯಸ್ಸಿನಲ್ಲಿ ಮನೆ ತೊರೆದನು. ಅವನು ಯಾವಾಗಲೂ ಓದಲು ಇಷ್ಟಪಡುತ್ತಿದ್ದನು ಮತ್ತು ಒಬ್ಬಂಟಿಯಾಗಿ ಉಳಿಯಲು ಬಯಸಿದನು. ನಾನು ಬಯಸದಿದ್ದರೂ ಅವನು ಬೇರೆ ಕಡೆ ಸ್ಥಳಾಂತರಗೊಳ್ಳಲು ಬಯಸಿದ್ದ. ನಾನು ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು 14 ನೇ ವಯಸ್ಸಿನಲ್ಲಿ ನನ್ನ ಮನೆಯನ್ನು ತೊರೆದಿದ್ದವ. ಇನ್ನು ಮಗನ ನಿರ್ಧಾರವನ್ನು ಬದಲಿಸಲು ಸಾಧ್ಯವಾಗಲಿಲ್ಲ. ಇದೀಗ ಅವನ ನಿರ್ಧಾರ ಒಳ್ಳೆಯದು ಎನ್ನಿಸುತ್ತಿದೆ ಎಂದಿದ್ದಾರೆ ಅಕ್ಷಯ್​.  

ಐಶ್ವರ್ಯಾಳ ಬ್ಯೂಟಿಯನ್ನು ಈ ರೀತಿ ಹಾಳು ಮಾಡಿದ್ದೇ ಪ್ಲಾಸ್ಟಿಕ್​! ನಟಿ ಕಸ್ತೂರಿ ಶಂಕರ್​ ಶಾಕಿಂಗ್​ ಹೇಳಿಕೆ

ಮಗನ ಕೆಲವು ಒಳ್ಳೆಯ ಗುಣಗಳನ್ನು ಶ್ಲಾಘಿಸಿದ ಅಕ್ಷಯ್​ ಕುಮಾರ್​ ಅವರು,  ಆರವ್ ತನ್ನ ಬಟ್ಟೆಯನ್ನು ತಾನೇ ಒಗೆಯುತ್ತಾನೆ, ಅವನು ಒಳ್ಳೆಯ ಅಡುಗೆಯವ ಕೂಡ,  ಪಾತ್ರೆಗಳನ್ನೂ ತೊಳೆಯುತ್ತಾನೆ.  ದುಬಾರಿ ಬಟ್ಟೆಗಳನ್ನು ಖರೀದಿಸಲು ಬಯಸುವುದಿಲ್ಲ. ವಾಸ್ತವವಾಗಿ, ಆತ  ವ್ಯರ್ಥ ಮಾಡಲು ಬಯಸುವುದಿಲ್ಲ. ಇದೇ  ಕಾರಣಕ್ಕೆ,  ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್​ಗೆ ಹೋಗುತ್ತಾನೆ. ಮಿತವ್ಯಯಕ್ಕೆ ಅವನ ಆದ್ಯತೆ ಎಂದಿದ್ದಾರೆ.  

ಇದೇ ವೇಳೆ ಮಗನಿಗೆ ನಟನಾ ಕ್ಷೇತ್ರದಲ್ಲಿ ಆಸಕ್ತಿ ಇಲ್ಲ ಎಂದೂ ಹೇಳಿದರು.  ಮಗ ಇಂಡಸ್ಟ್ರಿಯನ್ನು  ಆರಿಸಿಕೊಳ್ಳಲು ಬಯಸುತ್ತಿಲ್ಲ.  ಆತನಿಗೆ ಚಿತ್ರರಂಗಕ್ಕೆ ಸೇರಲು ಯಾವುದೇ ಆಸಕ್ತಿ ಇಲ್ಲ.  ಆಯ್ಕೆ ಅವನದ್ದು. ನಾವು ಇದೇ ಮಾಡು ಎಂದು ಎಂದಿಗೂ ಒತ್ತಾಯ ಮಾಡುವುದಿಲ್ಲ. ಆತನಿಗೆ ಫ್ಯಾಷನ್ ಬಗ್ಗೆ ಆಸಕ್ತಿ ಇದೆ. ಆದರೆ  ಸಿನಿಮಾದ ಭಾಗವಾಗಲು ಬಯಸುವುದಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾನೆ. ಅದಕ್ಕೆ ನಾವು ಒಪ್ಪಿದ್ದೇವೆ.  ಇದು ನಿನ್ನ ಜೀವನ, ನಿನಗೆ ಏನು ಬೇಕೋ ಅದನ್ನು ಮಾಡು ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ. 
ವೋಟಿಂಗ್​ ದಿನವೂ ಚಿತ್ರದ ಪ್ರಮೋಷನ್​: ಜಾಹ್ನವಿ ಡ್ರೆಸ್​ನಲ್ಲೇ ಸಿನಿಮಾ ಹಾಡು!

Latest Videos
Follow Us:
Download App:
  • android
  • ios