Asianet Suvarna News Asianet Suvarna News

ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

ಭೂತ-ಪ್ರೇತ ಯಾರಿಗೆ ಕಾಣಿಸಿಕೊಳ್ಳುತ್ತದೆ? ಇದು ಇರುವುದು ನಿಜನಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಕುತೂಹಲದ ಮಾಹಿತಿ...
 

Interesting information about Ghost by famous ghost hunter Imran  in Rapid Rashmi show suc
Author
First Published May 21, 2024, 1:15 PM IST

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇದೀಗ ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಅವರು ಭೂತ, ಪ್ರೇತ, ಆತ್ಮಗಳ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ಸ್ಟೋರಿಯನ್ನು ಶೇರ್​ ಮಾಡಿಕೊಂಡಿದ್ದಾರೆ.

ಆ್ಯಂಕರ್​ ರ್‍ಯಾಪಿಡ್‌ ​ ರಶ್ಮಿ ಅವರ ಯೂಟ್ಯೂಬ್​ ಚಾನೆಲ್​ಗೆ ಇಮ್ರಾನ್​ ಅವರು ಭೂತ,ಪ್ರೇತಗಳು ಯಾರಿಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಮೂರು ಗಣಗಳಿವೆ. ಪ್ರತಿಯೊಬ್ಬ ಮನುಷ್ಯರೂ ಒಂದೊಂದು ಗಣಗಳಿಗೆ ಸೇರಿರುತ್ತಾರೆ. ರಾಕ್ಷಸ ಗಣ, ದೇವ ಗಣ ಮತ್ತು ಮನುಷ್ಯ ಗಣ. ಈ ಪೈಕಿ ರಾಕ್ಷಸ ಗಣದವರಿಗೆ ಇವು ಕಾಣಿಸಿಕೊಳ್ಳುತ್ತದೆ. ದೇವ ಗಣದವರಿಗೆ ಕಾಣಿಸಿಕೊಳ್ಳುತ್ತದೆ, ಆದರೆ ಅದಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಆದ್ದರಿಂದ, ಇವುಗಳು ಗೋಚರಿಸುವುದು ಹುಟ್ಟು ನಕ್ಷತ್ರ, ದಿನಾಂಕ ಗೋತ್ರದ ಮೇಲೂ ಹೋಗುತ್ತದೆ ಎಂದಿದ್ದಾರೆ ಇಮ್ರಾನ್​.  

ತೂಕ ಇಳಿಸಲು ತಣ್ಣೀರಿನ ಶವರ್​ ಬಾತ್​: ಹೇಗೆ? ಏಕೆ? ಫಿಟ್​ನೆಸ್​ ತಜ್ಞೆ ಶ್ವೇತಾ ಸುಲಭದ ಟಿಪ್ಸ್​

ದೆವ್ವ ಭೂತಗಳು ಕಾಣಿಸಿಕೊಳ್ಳುವ ಶಕ್ತಿ ಎಲ್ಲರಲ್ಲಿಯೂ ಇರುತ್ತದೆ. ಅದನ್ನು ನೋಡಲು ಕೆಲವೊಂದು ಪ್ರಯತ್ನ ಮಾಡಬೇಕಾಗುತ್ತದೆ ಎಂದಿದ್ದಾರೆ.  ದೆವ್ವ ಭೂತ, ಆತ್ಮಗಳನ್ನು ಕರೆಸಿಕೊಳ್ಳುವ ಶಕ್ತಿ ಪಡೆಯಬೇಕು ಎಂದರೆ, ಮೂರು ವಿಷಯಗಳ ಅವಶ್ಯಕತೆ ಇದೆ. ಅದೇನೆಂದರೆ,  ಶ್ರಮ, ಸಮಯ ಮತ್ತು ಹಣ ಇಷ್ಟು ಇದ್ದರೆ ಇದನ್ನು ಕಲಿಯಬಹುದು. ಭೂತ, ಪ್ರೇತಗಳನ್ನು ಕರೆಸುವಾಗ ಕೆಲವೊಂದು ಬೇರು ಮೂಲಗಳೆಲ್ಲಾ ಬೇಕಾಗುತ್ತವೆ. ಅವುಗಳು ಸಿಗುವುದು ಕಷ್ಟ. ಆದ್ದರಿಂದ ಖರ್ಚು ಮಾಡಬೇಕಾಗುತ್ತದೆ. ಇವುಗಳ ಜೊತೆ ಜನರು ಒಂದಿಷ್ಟು ಶ್ರಮ ಮತ್ತು ಸಮಯವನ್ನೂ ಮೀಸಲು ಇರಿಸಬೇಕು ಎಂದಿದ್ದಾರೆ.

ಎಷ್ಟೋ ಮಂದಿ ದೆವ್ವ, ಭೂತ ನಂಬುವುದಿಲ್ಲವಲ್ಲ ಎಂದು ರಶ್ಮಿ ಪ್ರಶ್ನಿಸಿದಾಗ,  ಅದು ಅವರವರಿಗೆ ಬಿಟ್ಟಿದ್ದು. ದೆವ್ವ ಭೂತಗಳನ್ನು ನಂಬದೇ ಇರುವುವವರಿಗೆ ನಂಬಿಸಲು ಹೋಗಬಾರದು, ಬಿಟ್ಟುಬಿಡಬೇಕು. ಇಲ್ಲದಿದ್ದರೆ ಅದು ಬೇರೆ ರೀತಿಯಲ್ಲಿ ಟರ್ನ್​ ಆಗುತ್ತದೆ ಎಂದಿದ್ದಾರೆ ಇಮ್ರಾನ್​. ಭೂತ, ಪ್ರೇತವೆಲ್ಲಾ ಸುಳ್ಳು ಎಂದು ಹೇಳುವವರು ಇದ್ದಾರೆ. ನಾನು ಈ ವಿಷಯದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಇದರ ಇರುವಿಕೆಯನ್ನು ಸಾಬೀತು ಮಾಡಲು ಹೋದಾಗ, ಸಾಕಷ್ಟು ಜನ ಬೆದರಿಕೆಯನ್ನೂ ಹಾಕಿದ್ದಾರೆ. ಕೇಸು ಹಾಕುತ್ತೇನೆ ಎಂದು ಕೂಡ ಹೇಳಿದ್ರು. ಆದರೆ ಇರುವ ವಿಷಯವನ್ನು ನಾನು ತೋರಿಸುತ್ತಿದ್ದೇನೆ. ಇವತ್ತೂ ನನ್ನ ಮೇಲೆ ಕೇಸು ಹಾಕಲು ಪ್ರಯತ್ನ ನಡೆಯುತ್ತಿದೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ. ಇದರ ವಿಡಿಯೋಗೆ ಹಲವರು ಕಮೆಂಟ್​ ಮಾಡಿದ್ದು, ತಮಗಾಗಿರುವ ಅನುಭವಗಳ ಕುರಿತು ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಭೂತಗಳ ಇರುವಿಕೆ ಸುಳ್ಳು ಎಂದಿದ್ದಾರೆ. 


 ಉಪವಾಸ, ಡಯೆಟ್‌ ಮಾಡದೇ 17 ದಿನದಲ್ಲಿ 4ಕೆ.ಜಿ. ಕಳಕೊಂಡ ರ್‍ಯಾಪಿಡ್‌ ರಶ್ಮಿ ಟಿಪ್ಸ್‌ ಕೇಳಿ...

Latest Videos
Follow Us:
Download App:
  • android
  • ios