ಸಾವು ಬದುಕಿನ ನಡುವೆ ರಾಮ್​: ಸೀತಾಳಿಗೆ ತಪ್ಪಿನ ಅರಿವಾಗೋ ಹೊತ್ತಲ್ಲೇ ಹಳೆಯ ಲವರ್​ ಎಂಟ್ರಿ! ಏನಿದು ಟ್ವಿಸ್ಟ್​?

ಅಪಘಾತದಲ್ಲಿ ರಾಮ್​ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂದರ್ಭದಲ್ಲಿಯೇ ಅವನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಮುಂದೇನು?
 

Rams ex girlfriend comes at a time when Ram is fighting for his life in an accident suc

ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ. ಆದರೆ ಆತ ಉಳಿಯುವುದು ಕಷ್ಟ ಎಂದಿದ್ದಾರೆ ವೈದ್ಯರು. ತುರ್ತಾಗಿ ಓ ಪಾಸಿಟಿವ್​ ರಕ್ತ ಬೇಕು ಎಂದಿದ್ದಾರೆ.

ಅದೇ ಇನ್ನೊಂದೆಡೆ ಸೀತಾಳಿಗೆ ಅಪಘಾತದ ವಿಷಯ ತಿಳಿದು ಗಾಬರಿಯಾಗಿದ್ದಾಳೆ. ಜೋರಾಗಿ ಅಳುತ್ತಾ ಆಸ್ಪತ್ರೆಗೆ ಧಾವಿಸಿದ್ದಾಳೆ. ತನ್ನಿಂದ ತಪ್ಪಾಯ್ತು ಎಂದು ಗೋಳೋ ಎಂದಿದ್ದಾಳೆ. ಆಸ್ಪತ್ರೆಗೆ ಧಾವಿಸುತ್ತಿರುವ ಹೊತ್ತಿನಲ್ಲಿಯೇ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಬಂದಿದೆ. ರಾಮ್​ನ ಮಾಜಿ ಪ್ರೇಯಸಿಯ ಎಂಟ್ರಿ ಆಗಿದೆ. ಹೂಗುಚ್ಛ ಹಿಡಿದುಕೊಂಡು ಬಂದಿದ್ದಾಳೆ. ಇದು ಕೂಡ ಚಿಕ್ಕಮ್ಮನ ತಂತ್ರವೇ ಎನ್ನುವುದರಲ್ಲಿ ಸಂದೇಹವಿಲ್ಲ. ಅಷ್ಟಕ್ಕೂ ಇದು ಸೀರಿಯಲ್​ ಆಗಿರುವ ಕಾರಣ, ರಾಮ್​ ಅಂತೂ ಸಾಯಲ್ಲ ಎನ್ನುವುದು ದಿಟ. ಆದರೆ ಮುಂದೇನಾಗುತ್ತದೆ ಎನ್ನುವ ಕುತೂಹಲ ಈಗ. 

ಮದ್ವೆಯಾಗ್ತೇನಂತ ಪ್ರತಾಪ್​ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್​ ಮಾಡಿದ್ದೇನು ನೋಡಿ...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಒಂದೆಡೆ ಸೀತಾಳಿಗೆ ಪ್ರೀತಿ ತಿಳಿಯುವ ಹೊತ್ತು, ಇನ್ನೊಂದೆಡೆ ಮಾಜಿ ಪ್ರೇಯಸಿಯ ಎಂಟ್ರಿ. ಇದೀಗ ರಾಮ್​ಗೆ ಏನಾಗುತ್ತದೆ? ಓ ಪಾಸಿಟಿವ್​ ರಕ್ತ ಸೀತಾ ಕೊಡುತ್ತಾಳೋ ಇಲ್ಲವೇ ಮಾಜಿ ಪ್ರೇಯಸಿನಾ? ರಾಮ್​ಗೆ ಒಂದೆಡೆ ಈಗ ತಾನೇ ಲವ್​ ಶುರುವಾಗಿರುವ ಸೀತಾ, ಇನ್ನೊಂದೆಡೆ ಮಾಜಿ ಪ್ರೇಯಸಿ. ಇಷ್ಟು ವರ್ಷಗಳ ಕಾಲ ಮಾಜಿ ಪ್ರೇಯಸಿಯ ನೆನಪಿನಲ್ಲಿಯೇ ಇದ್ದ ರಾಮ್​ ಈಗ ತಾನೇ ಆಕೆಯ ನೆನಪಿನಿಂದ ಹೊರ ಬರಲು ಶುರು ಮಾಡಿದ್ದಾನೆ. ಮುಂದೆ ಎಂದಿಗೂ ಪ್ರೀತಿ, ಮದುವೆಯ ಜಂಜಾಟದಲ್ಲಿ ಬೀಳುವುದಿಲ್ಲ ಎಂದುಕೊಂಡಿದ್ದ ಆತ ಈಗ ಸೀತಾಳ ಪ್ರೀತಿಯಲ್ಲಿ ಬಿದ್ದಿದ್ದಾನೆ. 

ಈಗ ಮಾಜಿ ಪ್ರೇಯಸಿಯ ಎಂಟ್ರಿ ಆಗಿರೋ ಹೊತ್ತಿನಲ್ಲಿ ಮುಂದೇನಾಗುತ್ತದೆ? ಕುತೂಹಲದ ಕ್ಷಣದಲ್ಲಿ ಸೀತಾರಾಮ ಸೀರಿಯಲ್​ ತಲುಪಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ನ ಪ್ರೊಮೋ ಬಿಡುಗಡೆಯಾಗಿದೆ. ಎಲ್ಲರೂ ರಾಮ್​ ಇರುವುದೇ ಸೀತೆಗಾಗಿ. ನೀನು ಸೀತಾಳನ್ನೇ ಮದುವೆಯಾಗು ಎಂದು ರಾಮ್​ಗೆ ಸಲಹೆ ಕೊಡುತ್ತಿದ್ದಾರೆ. ಮಾಜಿ ಪ್ರೇಯಸಿ ಕುತಂತ್ರ ಬುದ್ಧಿಯಿಂದ ಬಂದಿದ್ದಾಳೆ. ಅವಳ ಮಾತನ್ನು ಕೇಳಬೇಡ ಎಂದೂ ಹೇಳುತ್ತಿದ್ದಾರೆ. ಹಾಗಿದ್ದರೆ ಮುಂದೇನಾಗುತ್ತದೆ? 

ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ ಪ್ರಶಸ್ತಿ ಪ್ರಕಟ; ಅತ್ಯುತ್ತಮ ನಟ, ನಟಿ, ವಿಲನ್​ ಯಾರು?

Latest Videos
Follow Us:
Download App:
  • android
  • ios