ಮದ್ವೆಯಾಗ್ತೇನಂತ ಪ್ರತಾಪ್ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್ ಮಾಡಿದ್ದೇನು ನೋಡಿ...
ಹೊಸಪೇಟೆಯಲ್ಲಿ ನಡೆದ ಕೆಂಡಸಂಪಿಗೆ ಸೀರಿಯಲ್ ಸಂಸಾರದ ಜೊತೆ ಬಿಗ್ಬಾಸ್ ಸ್ಪರ್ಧಿಗಳು ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ಗೆ ಏನಾಯ್ತು ನೋಡಿ...
ಈಗ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ದ್ದೇ ಹವಾ. ಇವರಿಗಾಗಿ ಫ್ಯಾನ್ಸ್ ಪೇಜ್ ಅಸಂಖ್ಯ ಹುಟ್ಟುಕೊಂಡಿದೆ. ಪ್ರತಾಪ್ ಎಲ್ಲಿ ಹೋದರೂ ಅದರ ಬಗ್ಗೆ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಬಿಗ್ಬಾಸ್ ಮನೆಗೆ ಹೋಗಿ ಬಂದ ಮೇಲೆ ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗಿಯೇ ಇದೆ. ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್ ಪ್ರತಾಪ್ಗೆ, ಬಿಗ್ಬಾಸ್ ಕೃಪೆಯಿಂದಾಗಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್‌ಬಾಸ್‌ನಲ್ಲಿ ರನ್ನರ್ ಅಪ್ ಆದ ಬಳಿಕ ಡ್ರೋನ್ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್‌ಬಾಸ್‌ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್ಬಾಸ್ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್ ಅಪ್ ಆದೆ ಎಂದು ಹೇಳಿಕೊಂಡಿರುವ ಡ್ರೋನ್ ಪ್ರತಾಪ್ ಅವರಿಗೆ ಬಿಗ್ಬಾಸ್ ಹೊಸದೊಂದೇ ಜೀವನ ಕೊಟ್ಟಿದೆ.
ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್ ಜಾತ್ರೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ಡ್ರೋನ್ ಪ್ರತಾಪ್ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ಬಾಸ್ನ ವಿನಯ್, ಕಾರ್ತಿಕ್, ಸಂಗೀತಾ ಕೂಡ ಇದೇ ವೇದಿಕೆಯ ಮೇಲೆ ಪರ್ಫಾಮ್ ಮಾಡಿದ್ದಾರೆ. ಈ ಸಮಯದಲ್ಲಿ ಫ್ಯಾನ್ಸ್ ಇವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ನೀವೆಲ್ಲಾ ತುಂಬಾ ಇಷ್ಟ ಎಂದಿದ್ದಾರೆ. ಇದರಲ್ಲಿ ಗಮನ ಸೆಳೆದಿರುವುದು ಹೊಸಪೇಟೆಯ ಯುವತಿಯರು ಡ್ರೋನ್ ಪ್ರತಾಪ್ ಅವರಿಗೆ, ನೀವು ಎಂದರೆ ತುಂಬಾ ಇಷ್ಟ. ನಿಮ್ಮನ್ನು ಮದುವೆಯಾಗಲು ಬಂದಿದ್ದೇವೆ ಎಂದಿದ್ದಾರೆ. ಇದನ್ನು ಕೇಳಿ ಡ್ರೋನ್ ಪ್ರತಾಪ್ ನಾಚಿ ನೀರಾಗಿದ್ದಾರೆ. ಯೇ ಯೇ ಎನ್ನುತ್ತಲೇ ಯುವತಿಯರಿಂದ ದೂರ ಸರಿಸಲು ನೋಡಿದ್ದು, ಸಭಿಕರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಆಟೋ ರಾಜ ಡ್ರೋನ್ ಪ್ರತಾಪ್: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?
ಈಚೆಗಷ್ಟ ಡ್ರೋನ್ ಪ್ರತಾಪ್ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್ ಪೇಜ್ ಶೇರ್ ಮಾಡಿಕೊಂಡಿತ್ತು. ಆಟೋ ರಾಜ ಶಂಕರ್ನಾಗ್ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್ ಶುಭ ಹಾರೈಸಿದ್ದರು. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದರು. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದರು. ಯಾರು ಏನೇ ಅಂದರೂ ಕ್ಯಾರೇ ಮಾಡಬೇಡಿ ಎಂದೆಲ್ಲಾ ಹೇಳಿದ್ದರು. ಆದರೆ ಒಂದಿಷ್ಟು ಮಂದಿ ಇವರ ಕಾಲೆಳೆದಿದ್ದರು. ಇದಕದ್ಕೂ ಮೊದಲು ಡ್ರೋನ್ ಪ್ರತಾಪ್ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು, ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದರು. ತಟ್ಟೆಯ ಸಹಾಯವಿಲ್ಲದೆ, ನೆಲದ ಮೇಲೆಯೇ ಸೇವಿಸಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡಿತ್ತು.
ಅಂದಹಾಗೆ, ಡ್ರೋನ್ ಪ್ರತಾಪ್ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ. ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್. ಡ್ರೋನ್ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್ ಅಪ್ ಕೂಡ ಆದರು.
ನೆಲದ ಮೇಲೆಯೇ ಅನ್ನಪ್ರಸಾದ ಸ್ವೀಕರಿಸಿದ ಡ್ರೋನ್ ಪ್ರತಾಪ್: ಆಹಾ! ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್