Asianet Suvarna News Asianet Suvarna News

ಏನೋ ಇದು ರಾಮಾಚಾರಿ ಪೊರ್ಕಿ ತರ ಬಂದಿದೀಯಲ್ಲೋ, ದೇವಸ್ಥಾನಕ್ಕೆ ಹೀಗೆಲ್ಲ ಬರ್ತಾರೇನೋ; ಕಿಟ್ಟಿ ಶಾಕ್!

ಕಿಟ್ಟಿ ಅತ್ತ ಹೋಗಲು ನಿಜವಾದ ರಾಮಾಚಾರಿ ಎಂದಿನಂತೆ ದೇವಸ್ಥಾನಕ್ಕೆ ಬರುವನು. ಅವನನ್ನು ಯಾವತ್ತಿನ ಗೆಟಪ್ಪಿನಲ್ಲಿ ನೋಡಿದ ರಾಮಾಚಾರಿ ಅಣ್ಣ, 'ಏನೋ ರಾಮಾಚಾರಿ ಇದು, ಇಷ್ಟು ಬೇಗ ಗೆಟಪ್ ಬದಲಾಯಿಸಿಕೊಂಡು ಬಂದ್ಬಿಟ್ಯಲ್ಲೋ! ಹಾಗೆ ಹೋಗಿ ಹೀಗೆ ಬಂದ್ಬಿಟ್ಟೆ, ಏನೊ ಇದು ಪವಾಡ' ಎನ್ನುವನು. 

Ramachari same look Kitty enters to the temple in Colors Kannada serial Ramachari srb
Author
First Published Dec 7, 2023, 6:39 PM IST

ಕಲರ್ಸ್‌ ಕನ್ನಡದ ರಾಮಾಚಾರಿ ಸೀರಿಯಲ್ ಪ್ರೊಮೋ ನೋಡಿದರೆ ಹೊಸತನ ಎದ್ದು ಕಾಣಿಸುತ್ತಿದೆ. ಇಷ್ಟು ದಿನ ದೇವಸ್ಥಾನದ ಪುರೋಹಿತರ ವೇಷ-ಭೂಷಣದಲ್ಲಿದ್ದ ರಾಮಾಚಾರಿಯನ್ನ ಅವರಣ್ಣ ಬೇರೆ ಅವತಾರದಲ್ಲಿ ನೋಡಿ ಶಾಕ್ ಆಗಿದ್ದಾರೆ. ದೇವಸ್ಥಾನಕ್ಕೆ ಬಿಳಿ ಪಂಚೆ-ಶಲ್ಯ ಹಾಕಿ ಪೂಜಾರಿ ಗೆಟ್‌ಅಪ್‌ನಲ್ಲಿ ಬರುತ್ತಿದ್ದ ರಾಮಾಚಾರಿಯನ್ನು ಪೊರ್ಕಿ ತರದ ಗೆಟ್‌ಅಪ್‌ನಲ್ಲಿ ನೋಡಿದ ಅವರಣ್ಣ ಗುರಾಯಿಸುತ್ತಾರೆ. ಅದನ್ನು ನೋಡಿದ ರಾಮಾಚಾರಿ ತರವೇ ಇರುವ ಕಿಟ್ಟಿಗೆ ಇರುಸುಮುರುಸಾಗಿದೆ. 'ಏಯ್, ಏನೋ ಗುರಾಯಿಸ್ತಿದೀರ?' ಎಂದಿದ್ದಾನೆ ಕಿಟ್ಟಿ.

ರಾಮಾಚಾರಿ ಅಣ್ಣ 'ಅಲ್ವೋ, ಇದೇನೋ ನಿನ್ನ ಅವತಾರ? ದೇವಸ್ಥಾನಕ್ಕೆ ಈ ವೇಷದಲ್ಲಿ ಬಂದಿದೀಯಲ್ಲೋ! ಹೀಗೆ ಬರ್ತಾರೇನೋ? ಎಲ್ಲೋ, ಟೂರ್‌ಗೋ ಪಾರ್ಕಿಗೋ ಹೀಗೆ ಬಂದ್ರೆ ಪರ್ವಾಗಿಲ್ಲ. ದೇವಸ್ಥಾನಕ್ಕೆ ಹೀಗೆಲ್ಲ ಪೊರ್ಕಿ ಥರ ಬರ್ತಾರೇನೋ? ಹೋಗು ಹೋಗು, ಬೇಗ ಡ್ರೆಸ್ ಚೇಂಜ್ ಮಾಡ್ಕೊಂಡು ಬಾ' ಎನ್ನುವನು. ಅವನ ಮಾತನ್ನು ಕೇಳಿದ ಕಿಟ್ಟಿಗೆ ಕೋಪ ಉಕ್ಕಿ ಬಂದು ಪುರೋಹಿತರ ಕೊರಳ ಪಟ್ಟಿ ಹಿಡಿಯುತ್ತಾರೆ. 

ಗಾಬರಿಯಾದ ರಾಮಾಚಾರಿ ಅಣ್ಣ' ಏನೋ ಇದು ರಾಮಾಚಾರಿ, ನನಗೇ ಹೀಗೆ ಮಾಡ್ತಿಯಲ್ಲೋ! ಚಾರು ಮೇಡಮ್ ಏನಾದ್ರೂ ಹೇಳಿದ್ರಾ ಈ ರೀತಿ ಡ್ರೆಸ್ ಮಾಡ್ಕೊಂಡು ಬರೋಕೆ? ಅವ್ರ ಮೇಲೆ ನಿಂಗೆ ಇತ್ತೀಚೆಗೆ ಜಾಸ್ತಿ ಲವ್ ಆಗಿದೆ. ಆದ್ರೂ ದೇವಸ್ಥಾನಕ್ಕೆ ಣೀಣೂ ಹೀಗೆ ಬಂದಿರೋದನ್ನ ನೋಡಿದ್ರೆ ಗತಿ ಏನೋ. ಬೇಗ ಹೋಗು, ಬೇಗ ಹೋಗೋ, ಡ್ರೆಸ್ ಚೇಂಜ್ ಮಾಡ್ಕೊಂಡು ಬಾರೋ' ಎನ್ನಲು ಕಿಟ್ಟಿ ಮನಸ್ಸಿನಲ್ಲೇ 'ಓಹೋ, ಇವ್ನು ಆ ರಾಮಾಚಾರಿ ಕಡೆಯವ್ನಾ' ಎಂದುಕೊಂಡು ಸದ್ಯಕ್ಕೆ ಸೈಲೆಂಟ್ ಆಗುವನು. ರಾಮಾಚಾರಿ ಅಣ್ಣ ಹೇಳಿದಂತೆ ಕಿಟ್ಟಿ ಬೇರೆ ಕಡೆ ಹೊರಡುವನು. 

ಬಿಗ್ ಬಾಸ್ ಮನೆಯಲ್ಲಿ ನಗೆಯ ಬುಗ್ಗೆ; ಮಾವುತನೋ ಮೇಕೆಯೋ, ಕನ್‌ಫ್ಯೂಸ್ ಆದ್ರಾ!

ಕಿಟ್ಟಿ ಅತ್ತ ಹೋಗಲು ನಿಜವಾದ ರಾಮಾಚಾರಿ ಎಂದಿನಂತೆ ದೇವಸ್ಥಾನಕ್ಕೆ ಬರುವನು. ಅವನನ್ನು ಯಾವತ್ತಿನ ಗೆಟಪ್ಪಿನಲ್ಲಿ ನೋಡಿದ ರಾಮಾಚಾರಿ ಅಣ್ಣ, 'ಏನೋ ರಾಮಾಚಾರಿ ಇದು, ಇಷ್ಟು ಬೇಗ ಗೆಟಪ್ ಬದಲಾಯಿಸಿಕೊಂಡು ಬಂದ್ಬಿಟ್ಯಲ್ಲೋ! ಹಾಗೆ ಹೋಗಿ ಹೀಗೆ ಬಂದ್ಬಿಟ್ಟೆ, ಏನೊ ಇದು ಪವಾಡ' ಎನ್ನುವನು. ಅಣ್ಣನ ಮಾತು ಕೇಳಿ ರಾಮಾಚಾರಿ ಶಾಕ್ ಆಗುವನು. 

ಜಾಗ ಬದಲಾದರೂ ತಿನ್ನೋದು ಅನ್ನಾನೇ ಅಲ್ವಾ; ಆಕಾಶ್ ಮಾತಿಗೆ ಕಕ್ಕಾಬಿಕ್ಕಿಯಾದ ಸ್ನೇಹಿತ!

'ಏನಣ್ಣಾ, ನೀನು ಯಾಕೆ ಹೀಗ್ ಮಾತಾಡ್ತಾ ಇದೀಯ? ನಾನು ಬೇರೆ ಗೆಟಪ್‌ನಲ್ಲಿ ಸ್ವಲ್ಪ ಹೊತ್ತಿಗೆ ಮೊದಲು ಇಲ್ಲಿಗೆ ಬಂದಿದ್ನಾ? ಎನೊ ಹೇಳ್ತಾ ಇದೀಯ ನೀನು?' ಎನ್ನಲು ಅವರಣ್ಣ 'ಏ ನಡ್ಯೋ, ಪೂಜೆಗೆ ಹೊತ್ತಾಯ್ತು. ಆದ್ರೂ ನಿನ್ನನ್ನ ಪೊರ್ಕಿ ತರ ನೋಡಿ ನಾನಂತೂ ಫುಲ್ ಗಾಬ್ರಿ ಆಗ್ಬಿಟ್ಟೆ ಕಣೋ' ಎನ್ನವನು. ರಾಮಾಚಾರಿಗೆ ಮನಸ್ಸಿನ ತುಂಬಾ ಹಲವು ಪ್ರಶ್ನೆಗಳು ಮೂಡುವವು. ರಾಮಾಚಾರಿ ಕಥೆಯಲ್ಲಿ ಏನಾಗುತ್ತಿದೆ? ಇಂದಿನ ಸಂಚಿಕೆಯಲ್ಲಿ ಏನೇನಿದೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಇಂದು ಹಾಗೂ ಮುಂದಿನ ರಾಮಾಚಾರಿ ಸೀರಿಯಲ್ ನೋಡಬೇಕಷ್ಟೇ!

 

 

Follow Us:
Download App:
  • android
  • ios