Asianet Suvarna News Asianet Suvarna News

ಮತ್ತೊಬ್ಬಳೊಂದಿಗೆ ಚಕ್ಕಂದ ಆಡುತ್ತಿದ್ದಾನೆ ರಾಮಾಚಾರಿ; ಚಾರು ಮೊಬೈಲಿಗೆ ಬಂತು ವಿಡಿಯೋ!

ನೀನು ರಾಮಾಚಾರಿನ ದೇವ್ರು ಅಂತ ಅಂದ್ಕೊಡಿದೀಯ. ಆದ್ರೆ ನಿನ್ನ ರಾಮಾಚಾರಿ ಹೊರಗಡೆ ಯಾರದ್ದೋ ಜೊತೆ ಸುತ್ತಾಡ್ತಾ ಇದಾನೆ.

Ramachari and kitty story continues in colors kannada serial ramachari srb
Author
First Published Dec 18, 2023, 8:05 PM IST

ರಾಮಾಚಾರಿಯೇ ತನ್ನ ಗಂಡ, ಆತನೇ ತನಗೆ ಸರ್ವಸ್ವ ಎಂದು ನಂಬಿಕೊಂಡಿದ್ದಾಳೆ ಚಾರು. ತನ್ನ ಗಂಡನಿಗೆ ಒಳ್ಳೆಯದು ಆಗಲಿ ಎಂದು ಪ್ರಾರ್ಥಿಸಿ ತುಳಿಸಿ ಕಟ್ಟೆ ಸುತ್ತಿದ್ದಾಳೆ. ಅದನ್ನು ನೋಡಿದ ಚಾರು ಅತ್ತೆ ಸೊಸೆಯನ್ನು ಮನಸಾರೆ ಹೊಗಳಿ ಮುದ್ದಿಸುತ್ತಾಳೆ. ಚಾರು ಈಗ ಮನೆಯವರೆಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಆದರೆ, ಆಕೆಗೆ ನೆಮ್ಮದಿಯಂದ ಇರಲು ವಿರೋಧಿಗಳು ಬಿಡುತ್ತಿಲ್ಲ. ಯಾರೋ  ಆಕೆಯ ಗೆಳತಿ ಕಾಲ್ ಮಾಡಿ ಚಾರು ತಲೆಗೆ ಹೇಳಬಾರದ್ದನ್ನು ಹೇಳಿದ್ದಾಳೆ. ಅಲ್ಲಿಗೆ ಚಾರು ನೆಮ್ಮದಿ ಹೊರಟುಹೋಗಿದೆ. 

ಡಾ ವಿಷ್ಣುವರ್ಧನ್ ಪುಣ್ಯ ಭೂಮಿ ಹೋರಾಟಕ್ಕೆ ಸಾತ್ ಕೊಟ್ಟ ನೆನಪಿರಲಿ ಪ್ರೇಮ್

ಹಾಗಿದ್ದರೆ ಚಾರು ಸ್ನೇಹಿತೆ ಕಾಲ್ ಮಾಡಿ ಚಾರುಗೆ ಹೇಳಿದ್ದೇನು? ಹೌದು, ಚಾರು ಫ್ರೆಂಡ್‌ ಕಾಲ್ ಮಾಡಿ 'ನೀನು ರಾಮಾಚಾರಿನ ದೇವ್ರು ಅಂತ ಅಂದ್ಕೊಡಿದೀಯ. ಆದ್ರೆ ನಿನ್ನ ರಾಮಾಚಾರಿ ಹೊರಗಡೆ ಯಾರದ್ದೋ ಜೊತೆ ಸುತ್ತಾಡ್ತಾ ಇದಾನೆ. ನೀನು ನೋಡಿದ್ರೆ ನಿನ್ನ ತಾಳಿಗೆ ಅರಿಶಿನ ಕುಂಕುಮ ಹಚ್ಚಿ, ಈ ಜನ್ಮಕ್ಕೆ ಮಾತ್ರ ಅಲ್ಲ, ಏಳೇಳೂ ಜನ್ಮಕ್ಕೂ ರಾಮಾಚಾರಿನೇ ನನ್ನ ಗಂಡ ಆಗ್ಲಿ ಎಂತ ಹರಕೆ ಹೊತ್ತಿಕೋತೀಯ. ಅವ್ನ ನೋಡಿದ್ರೆ ಯಾರಯಾರದೋ ಜತೆ ಲಲ್ಲೆ ಹೊಡಿತಾನೆ' ಎಂದು ಹೇಳಿದ್ದಾಳೆ. ಆಕೆಯ ಮಾತು ಕೇಳಿ ಚಾರು ನೆಮ್ಮದಿ ಹೊರಟುಹೋಗಿದೆ. 

ಜೊತೆಯಾಗಿ ಸಿಗಂದೂರು ಚೌಡೇಶ್ವರಿ ದರ್ಶನ ಪಡೆದ ಚಾರು -ಚಾರಿ : ಏನಿದು ಇವರಿಬ್ರು ನಿಜವಾಗ್ಲೂ ಮದ್ವೆಯಾದ್ರಾ?

ಅತ್ತ ರಾಮಾಚಾರಿಗೆ ಇದ್ಯಾವುದೂ ಗೊತ್ತಿಲ್ಲ. ಆತ ತನ್ನ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡಿದ್ದಾನೆ. ದೇವಸ್ಥಾನದಲ್ಲಿ ದೇವರ ಪೂಜೆ ಮಾಡಿಕೊಂಡು ಬಂದವರಿಗೆ ತೀರ್ಥ-ಪ್ರಸಾದ ಹಂಚಿಕೊಂಡು ಹಾಯಾಗಿದ್ದಾನೆ. ಆತನಿಗೆ 'ತನ್ನಂತೆ ಇರುವ ಕಿಟ್ಟಿ ಎನ್ನುವ ಇನ್ನೊಬ್ಬ ವ್ಯಕ್ತಿ ಇದ್ದಾನೆ. ಆತನನ್ನು ತಾನೇ ಎಂದು ತಿಳಿದುಕೊಂಡು ಊರಲ್ಲೆಲ್ಲ ಏನೋನೋ ಕೆಟ್ಟ ಸುದ್ದಿ ಹಬ್ಬಿದೆ. ತಾನು ಹೆಂಡತಿಗೆ ಮೋಸ ಮಾಡುತ್ತಿದ್ದೇನೆ ಎಂದೆಲ್ಲ ಸುದ್ದಿ ಆಗುತ್ತಿದೆ ' ಎಂಬುದರ ಅರಿವೂ ಇಲ್ಲ. ಕಿಟ್ಟಿ ಮಾಡುತ್ತಿರುವ ಅವಾಂತರಗಳೆಲ್ಲವೂ ರಾಮಾಚಾರಿಯ ತಲೆಗೆ ಸುತ್ತಿಕೊಳ್ಳುತ್ತಿದೆ. 

ಅಂದಹಾಗೆ, ಕಲರ್ಸ್‌ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.00 ಗಂಟೆಗೆ ಈ ರಾಮಾಚಾರಿ ಸೀರಿಯಲ್ ಪ್ರಸಾರವಾಗುತ್ತದೆ. ಈ ಸೀರಿಯಲ್‌ಗೆ ಹಲವು ಅಭಿಮಾನಿಗಳು ಇದ್ದಾರೆ ಎಂಬುದು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಮಾಡುತ್ತಿರುವ ಕಾಮೆಂಟ್‌ಗಳೇ ಸಾಕ್ಷಿ. ಒಟ್ಟಿನಲ್ಲಿ, ಕಿಟ್ಟಿ-ರಾಮಾಚಾರಿ ಎಂಬ ತದ್ರೂಪಿಗಳ ಕತೆ ಈ ಸೀರಿಯಲ್‌ ಅನ್ನು ಎಲ್ಲಿಯತನಕ ಎಳೆದುಕೊಂಡು ಹೋಗುತ್ತೋ ಗೊತ್ತಿಲ್ಲ. 

 


ಸದಾ ಸೀರೆಯಲ್ಲಿರುವ ರಾಮಚಾರಿ ತಾಯಿ; ಅಂಜಲಿ ಮಾಡರ್ನ್‌ ಲುಕ್‌ಗೆ ನೆಟ್ಟಿಗರು ಶಾಕ್! 

Follow Us:
Download App:
  • android
  • ios