- Home
- Entertainment
- TV Talk
- ಜೊತೆಯಾಗಿ ಸಿಗಂದೂರು ಚೌಡೇಶ್ವರಿ ದರ್ಶನ ಪಡೆದ ಚಾರು -ಚಾರಿ : ಏನಿದು ಇವರಿಬ್ರು ನಿಜವಾಗ್ಲೂ ಮದ್ವೆಯಾದ್ರಾ?
ಜೊತೆಯಾಗಿ ಸಿಗಂದೂರು ಚೌಡೇಶ್ವರಿ ದರ್ಶನ ಪಡೆದ ಚಾರು -ಚಾರಿ : ಏನಿದು ಇವರಿಬ್ರು ನಿಜವಾಗ್ಲೂ ಮದ್ವೆಯಾದ್ರಾ?
ರಾಮಾಚಾರಿ ಸೀರಿಯಲ್ ಖ್ಯಾತಿಯ ರಾಮಾಚಾರಿ ಮತ್ತು ಚಾರು ಸಿಂಗದೂರು ಚೌಡೇಶ್ವರಿ ದೇವಿ ದರ್ಶನ ಪಡೆದಿದ್ದು, ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನ ರಾಮಾಚಾರಿ ಮತ್ತು ಚಾರು ಖ್ಯಾತಿಯ ರಿತ್ವಿಕ್ ಕೃಪಾಕರ್ ಮತ್ತು ಮೌನ ಗುಡ್ಡೆಮನೆ ಸಿಗಂಧೂರು ಚೌಡೇಶ್ವರಿ ದರ್ಶನ ಪಡೆದಿದ್ದಾರೆ.
ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಸಿಗಂಧೂರಿನ ಇತಿಹಾಸವೇ ಮಹತ್ವದ್ದಾಗಿದೆ. ಕನ್ನಡತಿ ಸೀರಿಯಲ್ ನಲ್ಲಿ ಸಿಂಗಧೂರು ಕ್ಷೇತ್ರದ ಬಗ್ಗೆ ಹೆಚ್ಚಾಗಿ ತಿಳಿಸಲಾಗಿತ್ತು, ಇದೀಗ ರಾಮಾಚಾರಿ ಸೀರಿಯಲ್ ನ ಜೋಡಿಗಳು (Ramachari couples) ಈ ಕ್ಷೇತ್ರ ದರ್ಶನ ಪಡೆದಿದ್ದಾರೆ.
ಆಕಾಶ ನೀಲಿ ಬಣ್ಣದ ಸೀರೆಗೆ, ಹಳದಿ ಬಣ್ಣದ ಬ್ಲೌಸ್ ಧರಿಸಿ ಮೌನಾ, ಜೀನ್ಸ್ ಮತ್ತು ವೈಟ್ ಶರ್ಟ್ ನಲ್ಲಿ ರಿತ್ವಿಕ್ (Ritvik Krupakar) ಮಿಂಚುತ್ತಿದ್ದರು. ಇಬ್ಬರು ಜೊತೆಯಾಗಿ ಅಲ್ಲಿ ತೆಗೆದಿದ್ದಂತಹ ಫೋಟೋ, ವೀಡಿಯೋಗಳನ್ನು ಶೇರ್ ಮಾಡಿದ್ದಾರೆ.
ತಮ್ಮ ನೆಚ್ಚಿನ ನಾಯಕ- ನಾಯಕಿಯನ್ನು ಸಿಗಂಧೂರು ಕ್ಷೇತ್ರದಲ್ಲಿ ಜೊತೆಯಾಗಿ ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ನಿಮ್ಮ ಜೋಡಿ ಸದಾ ಕಾಲ ಹೀಗೆ ಇರಲಿ. ನೀವು ಇಬ್ಬರು ಮದುವೆ ಆಗಿ ಎಂದು ಆಶಿಸಿದ್ದಾರೆ.
ನೀವು ರಿಯಲ್ ಆಗಿ ಜೋಡಿ ಆಗಬೇಕು ಅನ್ನೋದು ನಿಮ್ಮ ಅಭಿಮಾನಿಯಾಗಿ ನನ್ನ ಆಸೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದು, ಇನ್ನೊಬ್ಬರು ಮುದ್ದು ಮುದ್ದು ಜೋಡಿ, ವಾವ್ ಜೋಡಿ ಅಂದ್ರೆ ಹೀಗೆ ಇರಬೇಕು ಎಂದು ಹೇಳಿದ್ದಾರೆ.
ಮಗದೊಬ್ಬರು ಏನ್ ಗುರು ನಿಜವಾಗಲೂ ಗಂಡ ಹೆಂಡ್ತಿ ಅಗ್ಬಿಟ್ರಾ?. ಆಗಿಬಿಟ್ರೆ ಸೂಪರ್ ಜೋಡಿ ಎಂದರೆ, ಇನ್ನೊಬ್ಬರು ರಿಯಲ್ ಆಗಿ ಮದ್ವೆ ಆಗೋದಾದ್ರೆ ಆಲ್ ದ ಬೆಸ್ಟ್ ನಿಮಗೆ, ಆ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಎಂದು ಹಾರೈಸಿದ್ದಾರೆ.
ಕಲರ್ಸ್ ಕನ್ನಡದ ಸದ್ಯದ ಫೇವರಿಟ್ ಕಪಲ್ ಚಾರು ಮತ್ತು ರಾಮಾಚಾರಿ. ಇಬ್ಬರೂ ತಮ್ಮ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಇಬ್ಬರ ಮುದ್ದು ಮುದ್ದು ಮಾತು, ಗೌರವ ಕೊಡುವ ರೀತಿ ಎಲ್ಲವನ್ನೂ ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಸೀರಿಯಲ್ ನಲ್ಲೂ ಸದ್ಯ ಕಿಟ್ಟಿಯ ಆಗಮನದಿಂದ ತುಂಬಾನೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.