ಡಾ ವಿಷ್ಣುವರ್ಧನ್ ಪುಣ್ಯ ಭೂಮಿ ಹೋರಾಟಕ್ಕೆ ಸಾತ್ ಕೊಟ್ಟ ನೆನಪಿರಲಿ ಪ್ರೇಮ್
ದಿವಂಗತ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹತ್ತುಹಲವು ವಿಘ್ನಗಳು ತಲೆದೋರಿವೆ. ಬರೋಬ್ಬರಿ 14 ವರ್ಷಗಳ ನಂತರ ಕೂಡ ವಿಷ್ಣುವರ್ಧನ್ ಸ್ಮಾರಕ ಅವರ ಅಂತ್ಯಕ್ರಿಯೆ ನಡೆದಿರುವ ಜಾಗದಲ್ಲಿ ಇನ್ನೂ ಆಗಿಲ್ಲ.
ದಿವಂಗತ ನಟ ವಿಷ್ಣುವರ್ಧನ್ ಅವರ ಪುಣ್ಯ ಭೂಮಿ ಕುರಿತು ವಿಷ್ಣು ಸರ್ ಅಭಿಮಾನಿಗಳೆಲ್ಲ ಏನು ಹೋರಾಟ ಕೈಗೊಂಡಿದಾರೆ, ಅದಕ್ಕೆ ವಿಷ್ಣು ಸರ್ ಅಭಿಮಾನಿಯಾಗಿ ನಾನೂ ಸಹ ಸದಾ ನಿಮ್ ಜತೆಗಿರ್ತೀನಿ. ಈ ಪ್ರತಿಭಟನೆ ಸಾರಥ್ಯ ವಹಿಸಿರುವಂಥ ನನ್ನ ಆತ್ಮೀಯ ಸ್ನೇಹಿತ ವೀರಕಪುತ್ರ ಶ್ರೀನಿವಾಸ್ ಅವರಿಗೆ ಧನ್ಯವಾದಗಳು. ಶೀನಪ್ಪ, ನಾನು ಸದಾ ಕಾಲ ನಿನ್ನ ಜತೆಗಿರ್ತೀನಿ. ಎಲ್ಲರಿಗೂ ನನ್ನ ಧನ್ಯವಾದಗಳು' ಎಂದಿದ್ದಾರೆ ನಟ, ಲವ್ಲಿ ಸ್ಟಾರ್ ಪ್ರೇಮ್. ಇಂದು ನಡೆಯಲಿರುವ ಪ್ರತಿಭಟನೆಗೆ ಸ್ಯಾಂಡಲ್‌ವುಡ್ ಬೆಂಬಲ ಸೂಚಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಈ ಬಗ್ಗೆ ನಟ ಕಿಚ್ಚ ಸುದೀಪ್ 'ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು -ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.
ವಿಷ್ಣು ಸಮಾಧಿ ಉಳಿಸಿಕೊಳ್ಳಲು ಒಂದಾದ ಸ್ಯಾಂಡಲ್ ವುಡ್; ನಟ ಕಿಚ್ಚ ಸುದೀಪ್ ಬೆಂಬಲ
ಈ ಬಗ್ಗೆ ಡಾಲಿ ಧನಂಜಯ್ ಸಹ ಟ್ವೀಟ್ ಮೂಲಕ ಬೆಂಬಲ ಸೂಚಿಸಿದ್ದಾರೆ. 'ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ.' ಎಂದು ಧನಂಜಯ್ ಟ್ವೀಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.
ರಾಮಮಂದಿರ ಉದ್ಘಾಟನೆಗೆ 'ಕಾಂತಾರ' ರಿಷಬ್ ಶೆಟ್ಟಿಗೆ ಆಹ್ವಾನ
ಆದರೆ, ನಟ ವಿಷ್ಣುವರ್ಧನ್ ಅಂತ್ಯ ಸಂಸ್ಕಾರ ಮಾಡಿದ ಜಾಗವು ವಿವಾದಕ್ಕೆ ಒಳಗಾಗಿದೆ. ಕೋರ್ಟು, ಕಾನೂನು ಹೋರಾಟ ಅದೂ ಇದೂ ಬೆಳವಣಿಗೆ ಮಧ್ಯೆ ದಿವಂಗತ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಹತ್ತುಹಲವು ವಿಘ್ನಗಳು ತಲೆದೋರಿವೆ. ಬರೋಬ್ಬರಿ 14 ವರ್ಷಗಳ ನಂತರ ಕೂಡ ವಿಷ್ಣುವರ್ಧನ್ ಸ್ಮಾರಕ ಅವರ ಅಂತ್ಯಕ್ರಿಯೆ ನಡೆದಿರುವ ಜಾಗದಲ್ಲಿ ಇನ್ನೂ ಆಗಿಲ್ಲ ಎಂಬುದೇ ತುಂಬಾ ಅಚ್ಚರಿಗೆ ಕಾರಣವಾಗಿರುವ ಅಂಶ. ಇಂಥ ಅಡೆತಡೆಯ ಹಿಂದೆ ಯಾರಿದ್ದಾರೆ, ಯಾವ ಶಕ್ತಿ ವಿಷ್ಣುವರ್ಧನ್ ಸ್ಮಾರಕ ತಡೆಗೋಡೆಯಾಗಿ ಕೆಲಸ ಮಾಡುತ್ತಿದೆ ಎಂಬುದು ವಿಷ್ಣು ಅಭಿಮಾನಿಗಳ ಪ್ರಶ್ನೆಯಾಗಿದೆ.