Asianet Suvarna News Asianet Suvarna News

ರಾಕೇಶ್‌ಗೆ ಫೀಲಿಂಗ್ಸ್‌ ಇಲ್ವಾ, ಸೋನುನಾ ದೂರ ತಳ್ಳಿದ್ರಾ? ಇಬ್ಬರ ನಡುವೆ ಖಂಡಿತಾ ಏನೋ ಇದೆ!

ರಾಕೇಶ್ ತನ್ನನ್ನು ದೂರ ಇಡುತ್ತಿದ್ದಾನೆ ಎನ್ನುವ ಸತ್ಯ ಸೋನುಗೆ ಗೊತ್ತಾಗಿದೆ. ಹಾಗಾಗಿ ತನ್ನನ್ನೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. 'ಬೇರೆ ಹುಡುಗಿಯರ ಜೊತೆ ಚೆನ್ನಾಗಿದ್ರೆ ನನಗ್ಯಾಕೆ ಬೇಜಾರು ಆಗಬೇಕು. ರಾಕಿಗೆ ಯಾಕೆ ಇಷ್ಟು ಅಟ್ಯಾಚ್ ಆದೆ. ತಾಯಿ ಮಗು ಹಾಗೆ ಟ್ರೀಟ್ ಮಾಡಿದ್ದೀನಿ. ಆದರೆ ಫೀಲಿಂಗ್ಸ್ ಇಲ್ಲದ ಹುಡುಗ ಹತ್ರ ಹೋಗಿ ಯಾಕೆ ಕೇರ್ ಮಾಡ್ತೀಯಾ?' ಎಂದು ತನ್ನನ್ನೆ ಪ್ರಶ್ನೆ ಕೇಳುತ್ತಿದ್ದಾರೆ. 

rakesh Adiga deliberately avoid sonu srinivas gowda in bigg boss ott sgk
Author
First Published Sep 14, 2022, 5:53 PM IST

ಬಿಗ್ ಬಾಸ್ ಒಟಿಟಿ ಕನ್ನಡ ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.  ಬಿಗ್ ಮನೆಯಲ್ಲಿ ಒಬ್ಬೊರೇ ಕಮ್ಮಿಯಾಗುತ್ತಿದ್ದರೂ ಸ್ಪರ್ಧಿಗಳ ನಡುವೆ ಪೈಪೋಟಿ, ಕಿತ್ತಾಟ, ಜಗಳ, ಅಳು ಜಾಸ್ತಿಯಾಗುತ್ತಿದೆ. ಅಂದಹಾಗೆ ಕಳೆದ ವಾರ ಬಿಗ್ ಬಾಸ್ ನಿಂದ ನಂದು ಎಲಿಮಿನೇಟ್ ಆಗಿಮನೆಯಿಂದ ಹೊರಹೋಗಿದ್ದರು. ಬಿಗ್ ಬಾಸ್ ಒಟಿಟಿಯಲ್ಲಿ 24 ಗಂಟೆಯೂ ಪ್ರಸಾರವಾಗುತ್ತಿರುತ್ತದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಮೊದಲ ಕನ್ನಡ ಬಿಗ್ ಬಾಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಮ್ಮಿ ಇದ್ದರೂ ಸದ್ದು ಜಾಸ್ತಿ ಇದೆ. ಬಿಗ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಮತ್ತು ರಾಕೇಶ ಸ್ನೇಹಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಬಿಗ್ ಬಾಸ್ ಮನೆಯಲ್ಲಿ ತುಂಬಾ ಆಪ್ತತೆ ಬೆಳೆದಿದ್ದು. ಆದರೀಗ ಫಿನಾಲೆ ವಾರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ರಾಕೇಶ್, ಸೋನುಶ್ರೀನಿವಾಸ್ ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಸೋನು ಗೌಡ ರಾಕೇಶ್ ಜೊತೆಗೆ ಎಷ್ಟರ ಮಟ್ಟಿಗೆ ಕ್ಲೋಸ್ ಆಗಿದ್ದರು ಎಂದರೆ ಬೇರೆ ಸ್ಪರ್ಧಿಗಳನ್ನು ತುಂಬಾ ಕ್ಲೋಸ್ ಆಗಿ ಮಾತನಾಡಿಸುವುದು ಸೋನು ಶ್ರೀನಿವಾಸ್ ಗೌಡ ಸಹಿಸುತ್ತಿರಲಿಲ್ಲ. ಹಾಗಿರುವಾಗ ಇತ್ತೀಚಿಗಷ್ಟೆ ರಾಕೇಶ್, ಜಯಶ್ರೀಗೆ ಕಿಸ್ ಮಾಡಿ ಸೋನು ಗೌಡ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಕೇಶ್ ಕಿಸ್ ಮಾಡುತ್ತಿದ್ದಂತೆ ಸೋನು ಗೌಡ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದರು. ಅಲ್ಲಿಂದ ಎದ್ದು ಬೇರೆಡೆ ಹೊರಟು ಹೋಗಿದ್ದರು.

ಇದೀಗ ರಾಕೇಶ್ ತನ್ನನ್ನು ದೂರ ಇಡುತ್ತಿದ್ದಾನೆ ಎನ್ನುವ ಸತ್ಯ ಸೋನುಗೆ ಗೊತ್ತಾಗಿದೆ. ಹಾಗಾಗಿ ತನ್ನನ್ನೆ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. 'ಬೇರೆ ಹುಡುಗಿಯರ ಜೊತೆ ಚೆನ್ನಾಗಿದ್ರೆ ನನಗ್ಯಾಕೆ ಬೇಜಾರು ಆಗಬೇಕು. ರಾಕಿಗೆ ಯಾಕೆ ಇಷ್ಟು ಅಟ್ಯಾಚ್ ಆದೆ. ತಾಯಿ ಮಗು ಹಾಗೆ ಟ್ರೀಟ್ ಮಾಡಿದ್ದೀನಿ. ಆದರೆ ಫೀಲಿಂಗ್ಸ್ ಇಲ್ಲದ ಹುಡುಗ ಹತ್ರ ಹೋಗಿ ಯಾಕೆ ಕೇರ್ ಮಾಡ್ತೀಯಾ?' ಎಂದು ತನ್ನನ್ನೆ ಪ್ರಶ್ನೆ ಕೇಳುತ್ತಿದ್ದಾರೆ. 

Bigg Boss OTT; ಜಯಶ್ರೀ ಕೆನ್ನೆಗೆ ರಾಕೇಶ್ ಕಿಸ್ ಮಾಡಿದ್ರೆ ಸೋನು ಗೌಡಗೆ ಯಾಕೆ ಹೊಟ್ಟೆಕಿಚ್ಚು?

ಇತ್ತ ರಾಕೇಶ್ ಉಳಿದ ಸ್ಪರ್ಧಿಗಳ ಜೊತೆ ಸೋನು ಬಗ್ಗೆ ಮಾತನಾಡಿದ್ದಾರೆ. ಸದಾ ಅಂಟಿಕೊಂಡಿರುತ್ತಿದ್ದ ರಾಕೇಶ್ ಈಗ ಸೋನು ಇರಿಟೇಟ್ ಮಾಡ್ತಾಳೆ ಎಂದು ಹೇಳಿದ್ದಾರೆ. 'ಅವಳಿಂದ ಬೇಕು ಅಂತನೆ ದೂರ ಹೋಗುತ್ತೇನೆ. ಕೆಲವು ಸರಿ ತುಂಬಾ ಇರಿಟೇಟ್ ಆಗುತ್ತೆ. ನಾನು ಯಾವತ್ತು ಅವಳಿಗೆ ನೀನು ಕೇರ್ ಟೇಕರ್ ಹಾಗೂ ಬೆಸ್ಟ್ ಫ್ರೆಂಡ್ ಅಂತ ಹೇಳಿಲ್ಲ. ಮೊದಲಿನಿಂದನೂ ಅವಳೆ ಹಾಗೆಂದು ಕೊಂಡಿದ್ದಾಳೆ' ಎಂದು ಹೇಳಿದರು. ಬೆಸ್ಟ್ ಫ್ರೆಂಡ್ಸ್ ಆಗಿದ್ದರು ದಿಢೀರ್ ದೂರ ಆಗಲು, ಮನಸ್ಥಾಪ ಮಾಡಿಕೊಳ್ಳು ಕಾರಣವೇನು ಇನ್ನುವುದು ರಿವೀಲ್ ಆಗಿಲ್ಲ. ಈ ಬಗ್ಗೆ ವೀಕೆಂಡ್ ನಲ್ಲಿ ಬಹಿರಂಗ ವಾಗುವ ಸಾಧ್ಯತೆ ಇದೆ.

ಬಿಗ್ ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ 16 ಸ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈಗಾಗಲೇ ನಾಲ್ಕು ವಾರ ಕಳೆದಿದ್ದು 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಮಾಡೆಲ್ ಕಿರಣ್, ಎರಡನೇ ಸ್ಪರ್ಧಿ ಸ್ಫೂರ್ತಿ ಗೌಡ ಮೂರನೇ ಸ್ಪರ್ಧಿ ಉದಯ್ ನಾಲ್ಕನೇ ಸ್ಪರ್ಧಿಗಳು ಚೈತ್ರಾ ಮತ್ತು ಅಕ್ಷತಾ, ಐದನೆ ಸ್ಪರ್ಧಿ ನಂದು. ಇನ್ನು ನಟ ಅರ್ಜುನ್ ಮತ್ತು ಲೋಕೇಶ್ ಏಟು ಮಾಡಿಕೊಂಡು ಮನೆಯಿಂದ ಹೊರಹೋಗಿದ್ದಾರೆ.   

ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್‌

ಬಿಗ್ ಮನೆಗೆ ಎಂಟ್ರಿ ಕೊಟ್ಟ ಒಟ್ಟು ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನ್ಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಸದ್ಯ ಮನೆಯಲ್ಲಿ 8 ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. 

Follow Us:
Download App:
  • android
  • ios