Bigg Boss OTT; ಜಯಶ್ರೀ ಕೆನ್ನೆಗೆ ರಾಕೇಶ್ ಕಿಸ್ ಮಾಡಿದ್ರೆ ಸೋನು ಗೌಡಗೆ ಯಾಕೆ ಹೊಟ್ಟೆಕಿಚ್ಚು?

ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಬಿಗ್ ಬಾಸ್ ಮನೆಯಲ್ಲಿ ಆಪ್ತತೆ ಬೆಳೆದಿದೆ. ರಾಕೇಶ್ ಬೇರೆ ಸ್ಪರ್ಧಿಗಳನ್ನು ತುಂಬಾ ಕ್ಲೋಸ್ ಆಗಿ ಮಾತನಾಡಿಸುವುದು ಸೋನು ಶ್ರೀನಿವಾಸ್ ಗೌಡಗೆ ಇಷ್ಟವಾಗುವುದಲ್ಲ. ಹಾಗಿರುವಾಗ ರಾಕೇಶ್, ಜಯಶ್ರೀಗೆ ಕಿಸ್ ಮಾಡಿ ಸೋನು ಗೌಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

rakesh Adiga kisses to Jayashree Aradhya in bigg boss ott kannada sgk

ಬಿಗ್ ಬಾಸ್ ಒಟಿಟಿ ಕನ್ನಡ ಶೋ ಐದನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆ ರಂಗೇರುತ್ತಿದೆ. ಬಿಗ್ ಮನೆಯಲ್ಲಿ ಒಬ್ಬೊರೇ ಕಮ್ಮಿಯಾಗುತ್ತಿದ್ದರೂ ಸ್ಪರ್ಧಿಗಳ ನಡುವೆ ಪೈಪೋಟಿ, ಕಿತ್ತಾಟ, ಜಗಳ, ಅಳು ಜಾಸ್ತಿಯಾಗುತ್ತಿದೆ. ಅಂದಹಾಗೆ 4ನೇ ವಾರ ಬಿಗ್ ಬಾಸ್ ಮನೆಯಿಂದ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ಅಕ್ಷತಾ ಮತ್ತು ಚೈತ್ರಾ ಇಬ್ಬರೂ ಒಂದೇ ವಾರ ಮನೆಯಿಂದ ಹೊರಹೋಗುವ ಮೂಲಕ ಉಳಿದ ಸ್ಪರ್ಧಿಗಳಿಗೆ ಶಾಕ್ ನೀಡಿದೆ ಬಿಗ್ ಬಾಸ್. ಬಿಗ್ ಬಾಸ್ ಒಟಿಟಿಯಲ್ಲಿ 24 ಗಂಟೆಯೂ ಪ್ರಸಾರವಾಗುತ್ತಿರುತ್ತದೆ. ಸ್ಪರ್ಧಿಗಳ ಪ್ರತಿಯೊಂದು ಚಲನವಲನಗಳು ಕ್ಯಾಮರಾಗಳಲ್ಲಿ ಸೆರೆಯಾಗುತ್ತಿರುತ್ತದೆ. ರಾಕೇಶ್ ಅಡಿಗ ಸಹ ಸ್ಪರ್ಧಿ ಜಯಶ್ರೀ ಅವರಿಗೆ ಕಿಸ್ ಮಾಡಿರುವ ವಿಡಿಯೋ ಈಗ ನೋಡುಗರ ಗಮನ ಸೆಳೆಯುತ್ತಿದೆ.  

ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ಬಿಗ್ ಬಾಸ್ ಮನೆಯಲ್ಲಿ ಆಪ್ತತೆ ಬೆಳೆದಿದೆ. ಇಬ್ಬರು ಬಿಗ್ ಮನೆಯಲ್ಲಿ ಸ್ನೇಹಿತರಿಗಿಂತ ಹೆಚ್ಚಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ ರಾಕೇಶ್ ಬೇರೆ ಸ್ಪರ್ಧಿಗಳ ಜೊತೆಯೂ ಕ್ಲೋಸ್ ಆಗಿದ್ದಾರೆ.  ರಾಕೇಶ್ ಬೇರೆ ಸ್ಪರ್ಧಿಗಳನ್ನು ತುಂಬಾ ಕ್ಲೋಸ್ ಆಗಿ ಮಾತನಾಡಿಸುವುದು ಸೋನು ಶ್ರೀನಿವಾಸ್ ಗೌಡಗೆ ಇಷ್ಟವಾಗುವುದಲ್ಲ. ಹಾಗಿರುವಾಗ ರಾಕೇಶ್, ಜಯಶ್ರೀಗೆ ಕಿಸ್ ಮಾಡಿ ಸೋನು ಗೌಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಕೇಶ್ ಕಿಸ್ ಮಾಡುತ್ತಿದ್ದಂತೆ ಸೋನು ಗೌಡ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾರೆ. ಅಲ್ಲಿಂದ ಎದ್ದು ಬೇರೆಡೆ ಹೊರಟು ಹೋದರು. ಅಂದಹಾಗೆ ರಾಕೇಶ್ ಕಿಸ್ ಮಾಡಿದ್ದೆ ಸೇನು ಗೌಡ ರಿಯಾಕ್ಷನ್ ನೋಡಲು.

ಬೆಡ್ ಮೇಲೆ ಜಯಶ್ರೀ ಪಕ್ಕನೇ ಮಲಗಿದ್ದ ರಾಕೇಶ್, ಸೋನು ಗೌಡ ಅವರನ್ನು ಉರಿಸಲು ಕಿಸ್ ಮಾಡಿದರು. ಬಳಿಕ ಜಯಶ್ರೀ, ಸೋನು ಗೌಡ ಅವರ ಕಾಲೆಳೆದರು.  ಹೊಟ್ಟೆ ಉರಿತಿದ್ಯಾ ಎಂದು ರೇಗಿಸಿದರು. ಆದರೆ ಸೋನು ಗೌಡ ನಾನ್ಯಾಕೆ ಹೊಟ್ಟೆ ಉರಿಸಿಕೊಳ್ಳಲಿ, ರಾಕೇಶ್ ಏನು ನನಗೆ ಬಾಯ್ ಫ್ರೆಂಡ್ ಹಾ? ಮದುವೆಯಾಗೋ ಹುಡುಗನಾ ಎಂದು ಅಲ್ಲಿಂದ ಹೊರಟರು. ಜಯಶ್ರೀ ಮತ್ತಷ್ಟು ಕಾಲೆಳೆದರು. ವಿಚಿತ್ರ ರಿಯಾಕ್ಷನ್ ಕೊಡುತ್ತಾ ಸೋನು ಅಲ್ಲಿಂದ ಎದ್ದು ಬೇರೆಡೆ ಹೊರಟರು. ಆದರೆ ರಾಕೇಶ್ ಮತ್ತು ಜಯಶ್ರೀ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಬಹುಶಃ Kichchaನಿಗೆ ಈ ಬಿಗ್‌ಬಾಸ್ ಸ್ಪರ್ಧಿಯಷ್ಟು ಯಾರೂ ಕಾಡಿಲ್ಲ!

ರಾಕೇಶ್ ಅಡಿಗ ಮೊದಲು ಈಗಾಗಲೇ ಎಲಿಮಿನೇಟ್ ಆಗಿ ಹೊರಹೋಗಿರುವ ಸ್ಫೂರ್ತಿ ಗೌಡ ಜೊತೆ ತುಂಬಾ ಆಪ್ತರಾಗಿದ್ದರು. ರಾಕೇಶ್ ಮತ್ತು ಸ್ಫೂರ್ತಿ ಗೌಡ ಕ್ಲೋಸ್ ಆಗಿರುವುದು ಸೌನು ಗೌಡಗೆ ಇಷ್ಟವಾಗುತ್ತಿರಲಿಲ್ಲ. ಆಗಾಗ ಸೋನು ಈ ವಿಚಾರವಾಗಿ ಕಿತ್ತಾಡುತ್ತಿದ್ದರು. ಇದೀಗ ರಾಕೇಶ್ ಜಯಶ್ರೀ ಜೊತೆ ಕ್ಲೋಸ್ ಆಗುತ್ತಿದ್ದಾರೆ. ಅದು ಸೋನುಗೆ ಇದು ಇಷ್ಟವಾಗಿತ್ತಿಲ್ಲ. 

Bigg Boss Ott; ಚಿಕ್ಕವನಿದ್ದಾಗಲೇ ತಾಯಿ ಕಳೆದುಕೊಂಡೆ, ತಂದೆ ಪ್ರೀತಿ ಗುರೂಜಿ ತುಂಬಿದ್ದಾರೆ, ರೂಪೇಶ್ ಭಾವುಕ ಮಾತು

ಬಿಗ್ ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳು

ಬಿಗ್ ಬಾಸ್ ಮನೆಗೆ 16 ಸ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈಗಾಗಲೇ ನಾಲ್ಕು ವಾರ ಕಳೆದಿದ್ದು 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಮಾಡೆಲ್ ಕಿರಣ್, ಎರಡನೇ ಸ್ಪರ್ಧಿ ಸ್ಫೂರ್ತಿ ಗೌಡ ಮೂರನೇ ಸ್ಪರ್ಧಿ ಉದಯ್ ನಾಲ್ಕನೇ ಸ್ಪರ್ಧಿಗಳು ಚೈತ್ರಾ ಮತ್ತು ಅಕ್ಷತಾ. ಇನ್ನು ನಟ ಅರ್ಜುನ್ ಮತ್ತು ಲೋಕೇಶ್ ಏಟು ಮಾಡಿಕೊಂಡು ಮನೆಯಿಂದ ಹೊರಹೋಗಿದ್ದಾರೆ.        

ಬಿಗ್ ಮನೆಗೆ ಎಂಟ್ರಿ ಕೊಟ್ಟ ಒಟ್ಟು ಸ್ಪರ್ಧಿಗಳು 

ಬಿಗ್ ಬಾಸ್ ಒಟಿಟಿ ಮನೆಗೆ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆರ್ಯವರ್ಧನ್ ಗುರೂಜಿ, ಸೋನು ಗೌಡ, ಅರ್ಜುನ್, ಉದಯ್, ರಾಕೇಶ್ ಅಡಿಗ, ಸ್ಪೂರ್ತಿ ಗೌಡ, ಸಾನ್ಯಾ ಐಯ್ಯರ್, ಜಯಶ್ರೀ ಆರಾಧ್ಯ, ಚೈತ್ರ ಹಳ್ಳಿಕೇರಿ, ರೂಪೇಶ್ ಶೆಟ್ಟಿ, ಲೋಕೇಶ್, ಸೋಮಣ್ಣ ಮಾಚಿಮಾಡ, ಕಿರಣ್, ಅಕ್ಷತಾ ಕುಕಿ, ನಂದಿನಿ ಮತ್ತು ಜಶ್ವಂತ್. ಸದ್ಯ ಮನೆಯಲ್ಲಿ 9 ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. 

Latest Videos
Follow Us:
Download App:
  • android
  • ios