ಇಟ್ಕೊಂಡಿಲ್ಲ ಬಿಡೋಕೆ ಲವ್‌ನಿಂದ ಏನ್ ಸಿಗುತ್ತೆ ಅಸಹ್ಯ: ಕನಸಿನ ರಾಜನ ಬಗ್ಗೆ ಸೋನು ಗೌಡ ಟ್ವಿಸ್ಟ್
ಲವರ್ ಇಷ್ಟ ಇಲ್ಲ ಆದರೆ ಕೇರ್ ಟೇಕರ್ ಬೇಕು ಎಂದು ಕನಸಿನ ಹುಡುಗನ ಬಗ್ಗೆ ಹಂಚಿಕೊಂಡು ಸೋನು ಶ್ರೀನಿವಾಸ್ ಗೌಡ
ಬಿಗ್ ಬಾಸ್ ಓಟಿಟಿ (Bigg Boss OTT) ಫಿನಾಲೆ ವಾರ ಆರಂಭವಾಗಿದೆ. ಸೋನು ಶ್ರೀನಿವಾಸ್ ಗೌಡ, ರೂಪೇಶ್ (Roopesh), ರಾಕೇಶ್, ಜಶ್ವಂತ್, ಸಾನ್ಯಾ (Saanya), ಸೋಮಣ್ಣ, ಅರ್ಯವರ್ಧನ್ (Aryavardhan) ಮತ್ತು ಜಯಶ್ರೀನಿ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟು ಮುಂಬರುವ ಡಬಲ್ ಎಲಿಮಿನೇಷನ್‌ಗೆ ಸಿದ್ಧರಾಗಿದ್ದಾರೆ. ಸುದೀಪ್ ಜೊತೆ ವೀಕೆಂಡ್ ಮಾತುಕಥೆ ಮುಗಿಸಿ ಕಾಫಿ ಮಾಡಿಕೊಂಡು ಕುಡಿಯುವಾಗ ಸೋನು ಮತ್ತು ರಾಕೇಶ್ ನಡುವೆ ಜಗಳ ಆರಂಭವಾಗಿದೆ.
ರಾಕೇಶ್ (Rakesh Adiga) ಮತ್ತು ಸೋನುದು ಲವ್ -ಹೇಟ್ ಸಂಬಂಧ. ಒಂದು ಸಲ ಒಟ್ಟಿಗೆ ಇದ್ದರೆ ಮತ್ತೊಂದು ಸಲ ಜಗಳ ಆಡುತ್ತಾರೆ. ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಎರಡು ಮೂರು ದಿನ ಮಾತು ಬಿಡುತ್ತಾರೆ. ಸೋಮಣ್ಣ ಮತ್ತು ಆರ್ಯವರ್ಧನ್‌ಗೆ ಸೋನು (Sonu Srinivas Gowda) ಮೇಕಪ್ ಮಾಡುತ್ತಾಳೆ ನನಗೆ ಮಾಡುವುದಿಲ್ಲ ಎಂದು ರಾಕೇಶ್ ಬೇಸರ ವ್ಯಕ್ತ ಪಡಿಸಿದ್ದರು. ಈ ವೇಳೆ ಪ್ರೀತಿ, ಕೇರ್ ಟೇಕರ್ ಬಗ್ಗೆ ಚರ್ಚೆ ಮಾಡಿದ್ದಾರೆ.
ರಾಕೇಶ್: ನಿನ್ನೆಯಿಂದ ಸೋನು ಸರಿಯಾಗಿ ಮಾತನಾಡುತ್ತಿಲ್ಲ ಬೆಳಗ್ಗೆಯಿಂದ ನನ್ನ ಮುಖ ನೋಡಲಾಗದೆ ನನಗೆ ಮೇಕಪ್ ಮಾಡಿದ್ದಾಳೆ. ಬೇರೆ ಸ್ಪರ್ಧಿಗಳನ್ನು ಹೇಗೆ ನೋಡುತ್ತೀಯಾ ಹಾಗೆ ನನ್ನನ್ನು ನೋಡಿ ಯಾವ ಸ್ಪೆಷಲ್ ಟ್ರೀಮೆಂಟ್ ನನಗೆ ಬೇಡ. ಆಮೇಲೆ ನನ್ನನ್ನು ಹೋಗೋಲೋ ಬಾರಲೋ ಅಂತ ಕರೆಯಬಾರದು. ಸರಿಯಾಗಿ ಹೋಗಿ ಬನ್ನಿ ಅಂತ ಮಾತನಾಡಿಸಬೇಕು. ಬೆಸ್ಟ್ ಅಂದ್ರೆ ರಾಕೇಶ್ ಸರ್ ಹೋಗಿ ಬನ್ನಿ ಅಂತ ಕರೆಯಬೇಕು.
Sonu Gowda Troll ಸುದೀಪ್ ಮಾತಿಗೆ ಅಗೌರವ; ಎಲಿಮಿನೇಟ್ ಮಾಡಲು ನೆಟ್ಟಿಗರ ಡಿಮ್ಯಾಂಡ್!
ಸೋನು: ಎಲ್ಲಾ ಸ್ಪರ್ಧಿಗಳಂತೆ ನಿನ್ನನ್ನು ನೋಡುತ್ತಿರುವ ಯಾವ ವ್ಯತ್ಯಾಸ ಮಾಡಿಲ್ಲ ನಾನು. ನೀನು ನನ್ನನ್ನು ಸೋನು ಮೇಡಂ ಅಂತ ಕರೆಯಬೇಕು. ನೀವು ಹೋಗಿ ಬನ್ನಿ ಅಂದೆ ಬಳಸಬೇಕು. ಈ ರೀತಿ ಬಳಸಿ ಯಾರಾದೂ ಮಾತನಾಡಿದರೆ ನನಗೆ ತುಂಬಾ ಇಷ್ಟವಾಗುತ್ತದೆ.
ರಾಕೇಶ್: ನಾನು ಸೀಸನ್ 9ಕ್ಕೆ ಎಂಟ್ರಿ ಕೊಟ್ಟರೆ ಬೇರೆ ಯಾವ ಹುಡುಗಿ ಜೊತೆನೂ ಕನೆಕ್ಷನ್ ಮಾಡಲು ಆಗುವುದಿಲ್ಲ. ಈಗ ನೀನು (ಜಶ್ವಂತ್) ನಂದು ಜೊತೆ ಬಂದು ಯಾವ ಹುಡುಗಿನೂ ನೋಡುವಂತಿಲ್ಲ ಫ್ಲರ್ಟ್ ಮಾಡುವಂತಿಲ್ಲ
ಸೋನು: ಹುಡುಗಿ ಇರುವಾಗ ಯಾಕೆ ಫ್ಲರ್ಟ್ ಮಾಡಬೇಕು? ಅವನಿಗೆ ಅಂತ ಹುಡುಗಿ ಇದ್ದಾಳೆ. ಈಗ ರಾಕೇಶ್‌ಗೆ ಟೈಂ ಪಾಸ್ ಮಾಡುವವರು ಬೇಕು ಟೈಮ್ ಪಾಸ್ ಮಾಡುವ ಹುಡುಗಿಯರು ಸಿಗುತ್ತಾರೆ ಅವರ ಜೊತೆ ಇರುವ. ಸಿಗಬೇಕು ಅಂತ ಇದ್ರೆ ಯಾರ್ ಬೇಕಿದ್ದರೂ ಸಿಗುತ್ತಾರೆ ಸಿಗಬಾರದು ಅಂತ ಇದ್ರೆ ಯಾರೂ ಸಿಗಲ್ಲ.
ಏನಿದು ಥು ಥು ಥು ಭಾಷೆ? ಅಸಹ್ಯ ಮಾತಾಡುವ ಸೋನು ಗೌಡಗೆ ಸುದೀಪ್ ಸಖತ್ ಕ್ಲಾಸ್
ರಾಕೇಶ್: ಆಯ್ತು ಬಿಡಿ ಸೋನು ಅವರೇ.
ಸೋನು: ಆಯ್ತು ಬಿಡಿ ರಾಕೇಶ್ ಅವರು. ನಾವು ಯಾರ್ನೂ ಇಟ್ಕೊಂಡಿಲ್ಲ ಬಿಡುವುದಕ್ಕೆ. ಅಪ್ಪ ದೇವರ ನೀನು ಇರೋದೆ ನಿಜ ಆದ್ರೆ ನನಗೆ 22 ವರ್ಷ ನನಗೆ 24 ವರ್ಷ ಹುಡುಗನ ಸಖತ್ ಹ್ಯಾಂಡ್ಸಮ್ ಆಗಿರುವ ಹುಡುಗನ ಕೊಡಪ್ಪ. ಜಶ್ವಂತ್ ಬೇಡ ಅವನು ಕಮಿಟ್ ಆಗಿದ್ದಾನೆ.
ರಾಕೇಶ್: ನಿಮಗೆ ಲವ್ ಎಲ್ಲಾ ಇಷ್ಟ ಇಲ್ಲ ಸೋನು ಯಾಕೆ ಲವ್ ಬೇಕು?
ಸೋನು: ಲವ್ ಬೇಡ ಬಿಡು ನನಗೆ ಅಂತ ಪಾರ್ಟನರ್ ಬೇಕು ಅಲ್ವಾ? ನಮಗೆ ಲವ್ ಎಲ್ಲಾ ಅಸಹ್ಯ. ನಾನು ಟೈಂ ಪಾಸ್ ಮಾಡುವುದಿಲ್ಲ. ಈಗ ನನಗೆ ಕೇರ್ ಟೇಕರ್ ಬೇಕು ...ಲವ್‌ಯಿಂದ ಏನು ಸಿಗುತ್ತೆ? ಅವರ ಅಜ್ಜಿ ಪಿಂಡ ಏನೂ ಸಿಗೋಲ್ಲ.