'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟ ಪೃಥ್ವಿ ಅಂಬಾರ್ ಒಬ್ಬ ಉತ್ತಮ ನಟ,ನಿರೂಪಕ ಹಾಗೂ ರಂಗಭೂಮಿ ಕಲಾವಿದ. ಪೃಥ್ವಿ ಹಾಗೂ ಪಾರುಲ್‌ ಶುಕ್ಲಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಕಾಸರಗೋಡಿನಲ್ಲಿ ಲವ್‌ ಕಮ್ ಅರೇಂಜ್ ಮ್ಯಾರೇಜ್‌ ಆಗಿದ್ದಾರೆ.

'ಡೋಂಟ್‌ ವರಿ' ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರ‍್ಯಾಪರ್ All.ok!

 

ಖಾಸಗಿ ವಾಹಿನಿಯಲ್ಲಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪಾರುಲ್‌ ಎದುರಾಳಿ ತಂಡದವರಾಗಿದ್ದು, ಪೃಥ್ವಿ ಆ ರಿಯಾಲಿಟಿ ಶೋ ಗೆದ್ದರು. ಪಾರೂಲ್ ಪೃಥ್ವಿ ಹೃದಯ ಕದ್ದರು. ಹತ್ತು ವರ್ಷಗಳಿಂದ ಶುರುವಾದ ಪ್ರೀತಿ ಕೆಲ ವರ್ಷಗಳಿಂದ ಫೋನ್‌ನಲ್ಲೇ ನಡೆಯುತ್ತಿತ್ತಂತೆ.

'ನನಗೆ ಹೆಣ್ಣು ಬೇಕಿತ್ತು, ರಾಧಿಕಾಗೆ ಗಂಡು ಬೇಕಿತ್ತು, ಇಬ್ಬರೂ ಹ್ಯಾಪಿ'

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'ದಯಾ'ದಲ್ಲಿ ಪೃಥ್ವಿ ನಾಯಕ ನಟನಾಗಿ ಮಿಂಚಲಿದ್ದಾರೆ. ಈ ಚಿತ್ರಕ್ಕೆ ಅಶೋಕ್‌ ಆಕ್ಷನ್ ಕಟ್‌ ಹೇಳಲಿದ್ದಾರೆ. ಈ ಹಿಂದೆ 'ರಾಧಾ ಕಲ್ಯಾಣ', 'ಲವಲವಿಕೆ' ಹಾಗೂ 'ಸಾಗರ ಸಂಗಮ' ಧಾರಾವಾಹಿಯಲ್ಲಿ ನಟಿಸಿದ್ದಾರೆ.