'Dont Worry' ಹಾಗೂ 'ನಾನ್ ಕನ್ನಡಿಗ' ಹಾಡುಗಳ ಮೂಲಕ ಖ್ಯಾತಿ ಪಡೆದಿರುವ ದಿ ಒನ್‌ ಆಂಡ್‌ ಓನ್ಲಿ ಡಿಫರೆಂಟ್ ರ‍್ಯಾಪರ್ ಅಲೋಕ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಕೆಲ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಯ್ಯೋ ಪಾಪ..ನೀರಿನಾಳಕ್ಕಿಳಿದ ಆಲಿಯಾ, ಟ್ರೋಲ್ ಆಯ್ತು ಪೋಟೊಗಳು!

ಅಲೋಕ್‌ ಹಾಗೂ ನಿಶಾರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು ಗುರು-ಹಿರಿಯರ ಒಪ್ಪಿಗೆ ಹಾಗೂ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಾಹ್ಮಣ ಮತ್ತು ತಮಿಳು ಅಯ್ಯರ್‌ ಸಂಪ್ರದಾಯದ ಪ್ರಕಾರ ವಿವಾಹ ಮಹೋತ್ಸವ ನಡೆದಿದೆ. ಅಲೋಕ್ ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮತ್ತು ನಿಶಾ ನಟರಾಜನ್‌ NGOದಲ್ಲಿ ಕೆಲ ಮಾಡುತ್ತಾರೆ. ಈ ಹಿಂದೆ ಜೋಶ್‌, ನಿನ್ನಿಂದಲೇ, ಸಿದ್ದಾರ್ಥ, ಗಜಕೇಸರಿ, ತಾರಕ್‌, ಮಂದಹಾಸ ಚಿತ್ರಗಳಲ್ಲಿ ನಟಿಸಿದ್ದಾರೆ.

'ರಾಜಕುಮಾರ'ನಿಗೆ ರಾಣಿಯಾಗಿ ಮಿಂಚಿದ ಪ್ರಿಯಾ ರಿಯಲ್ ಲೈಫ್‌ ಹೀರೋ ಯಾರು?

ವಿವಾಹ ಮಹೋತ್ಸವದಲ್ಲಿ ಢಾಲಿ ಧನಂಜಯ್‌, ಕೆ.ಎಂ. ಚೈತನ್ಯ, ಪ್ರಥಮ್‌, ಅನುಪಮ ಗೌಡ, ಶೃತಿ ಪ್ರಕಾಶ್‌, ಕೃಷಿ ತಾಪಂಡ ಹಾಗೂ ಹಲವಾರು ಸ್ಯಾಂಡಲ್‌ವುಡ್‌ ಗಣ್ಯರು ಪಾಲ್ಗೊಂಡಿದ್ದರು.