ಇಂದಿನ ಸಂಚಿಕೆ ನೋಡಿದರೆ ಅವರಿಬ್ಬರ ಜಗಳ ಇನ್ನೂ ಮುಂದುವರೆದಿದೆಯಾ ಅಥವಾ ಅಷ್ಟಕ್ಕೇ ನಿಂತಿದ್ಯಾ ಎಂಬುದು ತಿಳಿಯಲಿದೆ. ಜತೆಗೆ, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಯಾರು ಸ್ನೇಹಿತರು ಯಾರು ವೈರಿಗಳು ಎಂಬುದು ಅರ್ಥವಾಗುತ್ತದೆ. ದಿನದಿನಕ್ಕೂ ಅಲ್ಲಿ ಮಿತೃತ್ವ ಮತ್ತು ಶತ್ರುತ್ವಗಳು ಬದಲಾಗುತ್ತಲೇ ಇರುತ್ತವೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಎಂಟನೇ ವಾರದ ಕೊನೆಗೆ ಬಂದು ತಲುಪಿದೆ. ನಾಳೆ ವೀಕೆಂಡ್ ಹಂತಕ್ಕೆ ತಲುಪುತ್ತಿರುವ 8ನೇ ವಾರದ ಬಿಗ್ ಬಾಸ್ ಜರ್ನಿ, ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಈ ಹಂತದಲ್ಲಿ ತುಕಾಲಿ ಸಂತೋಷ್ ಮತ್ತು ಸಂಗೀತಾ ಶೃಂಗೇರಿ ನಡುವೆ ಭಾರೀ ಮನಸ್ತಾಪ ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿನ ಪ್ರೋಮೋದಲ್ಲಿ ಅವರಿಬ್ಬರ ಜಗಳ ಹೈಲೈಟ್ ಆಗಿದೆ. 'ಬಿಗ್ ಬಾಸ್ ಮನೆಯೊಳಗೆ ಈ ವಾರ ಪ್ರತಾಪ್ ಕಳಪೆ ಎಂಬ ಮಾತು ಬರಲು, ಸಂಗೀತಾ ಮುಂದಿನ ವಾರ ತುಕಾಲಿ ಸಂತು' ಎಂದಿದ್ದಾರೆ.
ಸಂಗೀತಾರ ಈ ಮಾತು ಕೇಳಿ ತುಕಾಲಿ ಸಂತೋಷ್ ಕೆಂಡಾಮಂಡಲ ಆಗಿದ್ದಾರೆ. ತನಿಶಾ ಮಧ್ಯೆ ಬಂದು 'ತಮಾಷೆಗೆ' ಎಂದರೂ ತಮ್ಮ ಪಟ್ಟು ಬಿಡದ ತುಕಾಲಿ ಸಂತೋಷ್, 'ನನಗೆ ಇದು ತಮಾಷೆಗೆ ಅನ್ನಿಸುತ್ತಿಲ್ಲ. ಸಂಗೀತಾ, ನೀನು ನನ್ನ ಸುದ್ದಿಗೆ ಬರ್ಬೇಡ, ನಾನು ನಿನ್ನ ಸಲುವಾಗಿ ಬಂದಿಲ್ಲ, ನನ್ನ ಸಲುವಾಗಿ ಬಂದಿದ್ದೇನೆ' ಎಂದು ಜೋರಾಗಿ ಮಾತನಾಡಿದ್ದಾರೆ. 'ನೀನು ನನ್ನ ಸಲುವಾಗಿ ಬಂದಿದ್ದೀಯೆ ಅಂತಾ ನಾನು ಹೇಳಿದ್ನಾ?' ಎಂದ ಸಂಗೀತಾ ಮಾತಿಗೆ ತುಕಾಲಿ, 'ನೀನು ನನ್ನ ತಂಟೆಗೆ ಬರ್ಬೇಡ' ಎಂದು ಜೋರಾಗಿ ಹೇಳುತ್ತಿರುವುದು ಇಂದು ಬಿಡುಗಡೆಯಾಗಿರುವ ಸಂಚಿಕೆಯಲ್ಲಿ ಕಾಣಿಸುತ್ತಿದೆ.
ಜೀವನ, ಹೋರಾಟದ ಬಗ್ಗೆ ಅಮಿತಾಭ್ ಬಚ್ಚನ್ ಹೀಗೆಲ್ಲಾ ಮಾತಾಡ್ತಾ ಇದ್ದಾರೆ ನೋಡಿ!
ಇಂದಿನ ಸಂಚಿಕೆ ನೋಡಿದರೆ ಅವರಿಬ್ಬರ ಜಗಳ ಇನ್ನೂ ಮುಂದುವರೆದಿದೆಯಾ ಅಥವಾ ಅಷ್ಟಕ್ಕೇ ನಿಂತಿದ್ಯಾ ಎಂಬುದು ತಿಳಿಯಲಿದೆ. ಜತೆಗೆ, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಯಾರು ಸ್ನೇಹಿತರು ಯಾರು ವೈರಿಗಳು ಎಂಬುದು ಅರ್ಥವಾಗುತ್ತದೆ. ದಿನದಿನಕ್ಕೂ ಅಲ್ಲಿ ಮಿತೃತ್ವ ಮತ್ತು ಶತ್ರುತ್ವಗಳು ಬದಲಾಗುತ್ತಲೇ ಇರುತ್ತವೆ. ಆದರೆ, ಟಾಸ್ಕ್ ಮತ್ತು ಮಾತುಕತೆಗಳು ಬಂದಾಗ ಯಾರೊಟ್ಟಿಗೆ ಯಾರು ಸಪೋರ್ಟ್ ಮಾಡಿಕೊಂಡು ಇರುತ್ತಾರೆ, ಯಾರೊಟ್ಟಿಗೆ ಸಂಘರ್ಷಕ್ಕೆ ಇಳಿಯುತ್ತಾರೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಇಲ್ಲಿ ಎಲ್ಲವೂ ಕ್ಷಣಿಕ, ಬದಲಾವಣೆ ಮಾತ್ರ ಶಾಶ್ವತ ಎನ್ನಬಹುದು.
ಪ್ರೀತಿಯ ತೀವ್ರತೆ ಕಾಡುವಂತೆ ಮಾಡಿದ ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜನ್ಮದಿನದ ಸವಿನೆನಪು
ಬಿಗ್ ಬಾಸ್ ಮನೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು 'JioCinema'ದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರವನ್ನು ವೀಕ್ಷಿಸಬಹುದು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ, ಶನಿವಾರ-ಭಾನುವಾರ ರಾತ್ರಿ 9.00 ಕ್ಕೆ ವೀಕ್ಷಿಸಬಹುದು.
