Asianet Suvarna News Asianet Suvarna News

ಪ್ರೀತಿಯ ತೀವ್ರತೆ ಕಾಡುವಂತೆ ಮಾಡಿದ ಕನ್ನಡ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜನ್ಮದಿನದ ಸವಿನೆನಪು

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದರು ಪುಟ್ಟಣ್ಣ ಕಣಗಾಲ್. ಆದರೆ, 1980ರಿಂದ 1982ರ ಅವಧಿಯಲ್ಲಿ ಅವರು ಕೆಲಸವಿಲ್ಲದೇ ಕಂಗಾಲಿ ಕುಳಿತಿದ್ದರು ಎನ್ನಲಾಗಿದೆ. 

Sandalwood director Puttanna Kanagal birthday on 01 December srb
Author
First Published Dec 1, 2023, 4:01 PM IST

ಕನ್ನಡದ ಮೇರು ನಿರ್ದೇಶಕ, ಸೃಜನಶೀಲ ಬರಹಗಾರ ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬವನ್ನು ಇಂದು (ಡಿಸೆಂಬರ್ 01) ರಂದು ಆಚರಿಸಲಾಗುತ್ತಿದೆ. ಕಪ್ಪು-ಬಿಳುಪು ಚಿತ್ರವನ್ನು ನಿರ್ಮಿಸುತ್ತಿದ್ದ ಕಾಲದಲ್ಲಿ ನಿರ್ದೇಶನದ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ದಿವಂಗತ ಪುಟ್ಟಣ್ಣ ಕಣಗಾಲ್, ಅವರು ಬಿ ಅರ್ ಪಂತುಲು ಅವರ ನಿರ್ದೇಶನದ 'ರತ್ನಗಿರಿ ರಹಸ್ಯ' ಚಿತ್ರದಲ್ಲಿ ಅಸಿಸ್ಟಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅಂದಿನ ಕಾಲದಲ್ಲಿ ಗೆಜ್ಜೆ ಪೂಜೆ, ಶರ ಪಂಜರ ಸೇರಿದಂತೆ ಹಲವಾರು ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 

ವಿಷ್ಣುವರ್ಧನ್ ಹಾಗು ಅಂಬರೀಷ್ ನಟಿಸಿರುವ ನಾಗರಹಾವು ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಪಟ್ಟಣ್ಣ ಕಣಗಾಲ್. 1972 ರಲ್ಲಿ ತೆರೆಗೆ ಬಂದಿದ್ದ ನಾಗರಹಾವು ಚಿತ್ರ ಸೂಪರ್ ಹಿಟ್ ದಾಖಲಿಸಿತು. ಸಂಪತ್ ಕುಮಾರ್ ಹೆಸರಿನ ನಟ ವಿಷ್ಣುವರ್ಧನ್ ಎಂದು ಹೆಸರು ಬದಲಾಯಿಸಿಕೊಂಡು ಕರ್ನಾಟಕದ ತುಂಬಾ ಪ್ರಸಿದ್ಧರಾದರು. ನಾಗರಹಾವು ಚಿತ್ರದ ಮೂಲಕ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇನ್ನೂ ಎತ್ತರಕ್ಕೆ ಏರಿದರೆ, ವಿಷ್ಣುವರ್ಧನ್ ಸಮರ್ಥ ನಾಯಕರಾಗಿ ಕನ್ನಡ ಚಿತ್ರರಂಕ್ಕೆ ಅಡಿ ಇಟ್ಟರು. ಅಂಬರೀಷ್ ಕೂಡ ಆ ಚಿತ್ರದ ಮೂಲಕ ವಿಲನ್ ರೋಲ್‌ನಲ್ಲಿ ಅಭಿನಯಿಸಿ ಒಳ್ಳೆಯ ಕಲಾವಿದ ಎಂಬ ಹಣೆಪಟ್ಟಿ ಪಡೆದುಕೊಂಡರು. 

ಹಿರಣ್ಯ ಸಿನಿಮಾ ಟೀಸರ್ ಲಾಂಚ್; ಮಾಸ್ ಅವತಾರದಲ್ಲಿ ಅಬ್ಬರಿಸಿದ ನಟ ರಾಜವರ್ಧನ್ ಮೇಲೆ ಮೂಡಿದೆ ಭಾರೀ ನಿರೀಕ್ಷೆ!

ಎಡಕಲ್ಲು ಗುಡ್ಡದ ಮೇಲೆ, ಶುಭ ಮಂಗಳ ಹಾಗೂ ರಂಗ ನಾಯಕಿ ಸೇರಿದಂತೆ ಬಹಳಷ್ಟು ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪುಟ್ಟಣ್ಣ ಕಣಗಾಲ್ ಅವರು 'ಸ್ಕೂಲ್ ಮಾಸ್ಟರ್' ಎಂಬ ಮಲಯಾಳಂ ಚಿತ್ರವನ್ನು ಮೊಟ್ಟಮೊದಲು ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದರು ಪುಟ್ಟಣ್ಣ ಕಣಗಾಲ್. ಆದರೆ, 1980ರಿಂದ 1982ರ ಅವಧಿಯಲ್ಲಿ ಅವರು ಕೆಲಸವಿಲ್ಲದೇ ಕಂಗಾಲಿ ಕುಳಿತಿದ್ದರು ಎನ್ನಲಾಗಿದೆ. ಆ ವೇಳೆ ಅವರಿಗೆ ಅವರೇ ನಾಯಕರಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದ ನಟ ಶ್ರೀನಾಥ್ ಅವರು ಸಾಕಷ್ಟು ಸಹಾಯ ಮಾಡಿದ್ದರು ಎನ್ನಲಾಗಿದೆ. ಶ್ರೀನಾಥ್-ಪದ್ಮಾ ವಾಸಂತಿ ಜೋಡಿಯ 'ಮಾನಸ ಸರೋವರ' ಚಿತ್ರವನ್ನು ಪುಟ್ಟಣ್ಣ ಕಣಗಾಲ್ ಬಳಿಕ ನಿರ್ದೇಶನ ಮಾಡಿದ್ದಾರೆ. 

ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ, ಕಾರ್ತಿಕ್ ಹೊರಗಿಟ್ಟು ತಪ್ಪು ಮಾಡಿದ್ವಿ ಎಂದ್ರು ವಿನಯ್ ಗೌಡ!

ಒಟ್ಟಿನಲ್ಲಿ, ಮೇರು ನಿರ್ದೇಶಕ ಎನಿಸಿಕೊಂಡಿದ್ದ ಪುಟ್ಟಣ್ಣ ಕಣಗಾಲ್ ಅಂದು ಬಹಳಷ್ಟು ಕಾದಂಬರಿ ಆಧಾರಿತ ಚಿತ್ರವನ್ನು ಮಾಡಿ ಕನ್ನಡ ಸಿನಿಮಾರಂಗ ಬೆಳೆಯಲು ಕಾರಣಕರ್ತರಾಗಿದ್ದರು. ಅವರ ನಿರ್ದೇಶನದ ಹೆಚ್ಚಿನ ಚಿತ್ರಗಳು ಹೆಣ್ಣಿನ ನೋವು, ಅಪಮಾನ ಹಾಗೂ ಶೋಷಣೆ ಬಗ್ಗೆ ಬೆಳಕು ಚೆಲ್ಲಿದ್ದು, ಅಂದು ಸಾಕಷ್ಟು ಚರ್ಚೆಗೆ ಕಾರಣವಾಗಿ ಸಮಾಜದಲ್ಲಿ ಜಾಗೃತಿ ಮೂಡಲು ಕಾರಣವಾಗಿತ್ತು. ಇಂಥ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು 5 ಜೂನ್ 1985ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರು ಆಗ 'ಮಸಣದ ಹೂವು' ಚಿತ್ರದ ಚಿತ್ರದ ನಿರ್ದೇಶನ ಮಾಡುತ್ತಿದ್ದರು. ಇಂದು, ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರನ್ನು ಕನ್ನಡ ಚಿತ್ರದ್ಯಮ ಸ್ಮರಿಸುತ್ತಿದೆ. 

Latest Videos
Follow Us:
Download App:
  • android
  • ios