Asianet Suvarna News Asianet Suvarna News

ಪುಟ್ಟಕ್ಕನ ಮಕ್ಕಳು ರಾಜಿಗಿಂದು ಹುಟ್ಟುಹಬ್ಬದ ಸಂಭ್ರಮ: ನಟಿ ಕುರಿತು ಕುತೂಹಲದ ವಿಷ್ಯ ಇಲ್ಲಿವೆ...

ಪುಟ್ಟಕ್ಕನ ಮಕ್ಕಳು ವಿಲನ್​ ರಾಜಿ ಅರ್ಥಾತ್​ ಹಂಸ ನಾರಾಯಣಸ್ವಾಮಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ಕುರಿತು ಕುತೂಹಲದ ಮಾಹಿತಿಗಳು ಇಲ್ಲಿವೆ...
 

Puttakkana Makkalu villain Rajis birthday interesting facts about Hamsa Narayanaswamy suc
Author
First Published Apr 11, 2024, 2:01 PM IST

ರಾಜಿ ಉರ್ಫ್​ ರಾಜೇಶ್ವರಿ ಎಂದಾಕ್ಷಣ ಧಾರಾವಾಹಿ ಪ್ರಿಯರ ಕಣ್ಣಮುಂದೆ  ಪುಟ್ಟಕ್ಕನ ಮಕ್ಕಳ ಧಾರಾವಾಹಿಯ ವಿಲನ್​. ರಾಜೇಶ್ವರಿ ಎಂದಾಕ್ಷಣ ಈ ಪಾತ್ರವೇ ಹಾದುಹೋಗುವಷ್ಟರ ಮಟ್ಟಿಗೆ  ರಾಜಿ (Rajeshwari) ಪಾತ್ರ ಜೀವ ತುಂಬಿದೆ. ಗಂಡ ಇಲ್ಲದಿದ್ದರೂ ಕ್ಷಣ ಕ್ಷಣಕ್ಕೂ ನೋವನ್ನೇ ಪುಟ್ಟಕ್ಕ ಅನುಭವಿಸುತ್ತಿದ್ದರೂ ಅವರ ಮನೆಯ ಸಮೀಪವೇ ಇದ್ದು, ಕ್ಷಣ ಕ್ಷಣಕ್ಕೂ ಆಕೆಗೆ ತೊಂದರೆ ಕೊಡುವಲ್ಲಿ ಈ ಸವತಿ ರಾಜೇಶ್ವರಿಯದ್ದು ಎತ್ತಿದ ಕೈ. ಪುಟ್ಟಕ್ಕನ ಪತಿಯನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾದರೂ ಪುಟ್ಟಕ್ಕನಿಗೆ ತೊಂದರೆ ಕೊಡುವುದು ಎಂದರೆ ಈಕೆಗೆ ಅದೇನೋ ಖುಷಿ. ರಾಜೇಶ್ವರಿ ಬಂದರೆ ಅದೆಷ್ಟೋ ಮನೆಯಲ್ಲಿ ಆಕೆಗೆ ಹಿಡಿಶಾಪ ಹಾಕುವುದೂ ಇದೆ. ಥೇಟ್​ ವಿಲನ್​ನಂತೆ ಪಾತ್ರ ಮಾಡಿ ಆ ಪಾತ್ರಕ್ಕೆ ಜೀವ ತುಂಬುತ್ತಿರುವ ಈ ರಾಜೇಶ್ವರಿಯವರ ನಿಜವಾದ ಹೆಸರು ಹಂಸ ನಾರಾಯಣಸ್ವಾಮಿ @ ಹಂಸ ಪ್ರತಾಪ್​ (Hamsa Pratap). ಇವರಿಗೆ ಇಂದು ಅಂದರೆ ಏಪ್ರಿಲ್​ 11 ಹುಟ್ಟುಹಬ್ಬದ ಸಂಭ್ರಮ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಿಆರ್​ಪಿಯಲ್ಲಿಯೂ ಸದಾ ಟಾಪೆಸ್ಟ್​ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಗಂಡ ಬಿಟ್ಟು ಇನ್ನೊಂದು ಮದುವೆಯಾದರೂ ಪುಟ್ಟಕ್ಕ ತನ್ನ ಮೂರು ಹೆಣ್ಣುಮಕ್ಕಳಾದ  ಸಹನಾ,  ಸ್ನೇಹಾ ಮತ್ತು  ಸುಮಾ ಅವರನ್ನು ಹೇಗೆ ಕಷ್ಟಪಟ್ಟು ಸಾಕುತ್ತಿದ್ದಾಳೆ ಎನ್ನುವ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದ್ದರೆ, ಕುತೂಹಲ ಘಟ್ಟದಲ್ಲಿ ಇದೀಗ ಸಹನಾ ಮೂರ್ತಿಯಂತಿದ್ದ ಸಹನಾ, ಅತ್ತೆಯ ವಿರುದ್ಧ ತಿರುಗಿ ಬಿದ್ದಿದ್ದಾಳೆ. ತನ್ನ ಮೇಲೆ ದೌರ್ಜನ್ಯ ಎಸಗುವವರಿಗೆ ತಕ್ಕ ಪಾಠ ಕಲಿಸುತ್ತಿದ್ದಾಳೆ. ಇದೇ ವೇಳೆ ರಾಜಿಯ ಕುತಂತ್ರವೂ  ಮುಂದುವರೆದಿದೆ.  ಮುದ್ದು ಮೊಗದ ಹಂಸ ಅವರನ್ನು ವಿಲನ್​ ಪಾತ್ರದಲ್ಲಿ ಕಲ್ಪನೆ ಮಾಡಿಕೊಳ್ಳುವುದು ಎಷ್ಟೋ ಮಂದಿಗೆ ಅರಗಿಸಿಕೊಳ್ಳಲಾಗದ ಸತ್ಯವೇ. ಆದರೂ ರಾಜೇಶ್ವರಿ ಪಾತ್ರದೊಳಕ್ಕೆ ಹೊಕ್ಕು ಸಾಕ್ಷಾತ್​ ಖಳನಾಯಕಿಯಾಗಿ ಮಿಂಚುತ್ತಿದ್ದಾರೆ ಹಂಸ. ಹಂಸ ಅವರು ನಟನೆ ಮಾತ್ರವಲ್ಲದೇ ಇನ್​ಸ್ಟಾಗ್ರಾಮ್​ನಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಒಂದು ಪಾತ್ರವನ್ನು ತೆರೆಯ ಮೇಲೆ ನೋಡಿದವರಿಗೆ ಅವರ ಅಸಲಿ ಮುಖ ಹೇಗಿದೆ ಎಂದು ತಿಳಿಯುವುದು ಕಷ್ಟವೇ. ಆದರೆ ನಟರ ಸಾಮಾಜಿಕ ಜಾಲತಾಣದಲ್ಲಿ (Social Media) ಅವರ ನಿಜವಾದ ರೂಪವನ್ನು ತಿಳಿಯಬಹುದು. ಅದೇ ರೀತಿ ಹಂಸ ಅವರ ಇನ್​ಸ್ಟಾಗ್ರಾಮ್​ ನೋಡಿದರೆ ಅರೆರೆ ಪುಟ್ಟಕ್ಕನ ಮಕ್ಕಳಿನ ರಾಜೇಶ್ವರಿ ಇವರು ಹೌದೋ ಅಲ್ವೋ ಅನ್ನುವಷ್ಟರ ಮಟ್ಟಿಗೆ ಡಿಫರೆಂಟ್​ ಆಗಿ ಕಾಣಿಸುತ್ತದೆ. 

ಭಾಗ್ಯಲಕ್ಷ್ಮಿಯ ಮನೆಗೆ ಬಂದಳೊಬ್ಬ ವಿಶೇಷ ಅತಿಥಿ! ನಮ್ಮ ಮನೆಗೂ ಬರ್ತಿರಮ್ಮಾ ಅಂತಿದ್ದಾರೆ ವೀಕ್ಷಕರು


ಹಂಸ ಅವರು ಈ ಹಿಂದೆ, ಧ್ರುವ, ಅಮ್ಮ, ರಾಜಾಹುಲಿ, ಸಖತ್​, ಜೇಮ್ಸ್, ಉಂಡೆನಾಮ ​ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ರಿಯಾಲಿಟಿ ಷೋಗಳಲ್ಲಿಯೂ ಭಾಗಿಯಾಗಿದ್ದಾರೆ.   ಹಂಸ ಅವರು ಕೆಲವೊಮ್ಮೆ ತಮ್ಮ ಪತಿ ಹಾಗೂ ಹಲವು ಬಾರಿ ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ತಮ್ಮನ ಪಾತ್ರದಲ್ಲಿ ನಟಿಸ್ತಿರೋ ಕಾಳಿಯ ಜೊತೆ ರೀಲ್ಸ್​ ಮಾಡುತ್ತಾರೆ.  ಅಂದಹಾಗೆ ಹಂಸ ಅವರು, ನಟಿ, ಅನೇಕ ಆ್ಯಂಗಲ್​ಗಳಲ್ಲಿ, ಬಗೆಬಗೆಯ ಡ್ರೆಸ್​ ತೊಟ್ಟು ಹಂಸ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇದ್ದಾರೆ. ಇಂದು ಕೂಡ ಹಲವಾರು ರೀತಿಯ ಡ್ರೆಸ್​ಗಳಲ್ಲಿ ಅವರು ಫೋಟೋಶೂಟ್​ (Photoshoot) ಮಾಡಿಸಿಕೊಂಡು ಅದನ್ನು ಶೇರ್​ ಮಾಡಿಕೊಂಡಿದ್ದಾರೆ. ರೆಡ್ ಬ್ಲೇಜರ್ ತೊಟ್ಟು, ಬ್ಲಾಕ್ ಕಲರ್ ಸೂಟ್, ಮಿಡಿ, ಮಿನಿ, ಫ್ರಾಕ್​, ಸಲ್ವಾರ್​, ಸೀರೆ... ಹೀಗೆ ವಿಭಿನ್ನ ಉಡುಗೆ ತೊಟ್ಟು ಅವರು ಫೋಟೋಶೂಟ್​ ಮಾಡಿಸಿಕೊಂಡಿದ್ದು ಅದರ ಫೋಟೋ ಶೇರ್​ ಮಾಡುತ್ತಿರುತ್ತಾರೆ. . ಈ ಫೋಟೋಗಳಿಗೆ ಸಕತ್​ ಕಮೆಂಟ್​ಗಳ ಸುರಿಮಳೆಯಾಗುತ್ತದೆ.  ಅಂದಹಾಗೆ ಹಂಸ ಅವರಿಗೆ ಓರ್ವ ಮಗನಿದ್ದಾನೆ. 

ಬಿಗ್​ಬಾಸ್​ ಓಟಿಟಿ ಷೋ ಡೇಟ್​ ಫಿಕ್ಸ್​? ಖಾಸಗಿ ವಿಡಿಯೋ ಲೀಕ್​ ಬೆಡಗಿಗೆ ಸಿಕ್ಕೇಬಿಡ್ತು ಆಫರ್
 

Follow Us:
Download App:
  • android
  • ios